ಸಾಮಾಜಿಕ ಅಂತರ ಮತ್ತು ಮಾಸ್ಕ್ ದರಿಸುವುದರಿಂದ ಕೋರೊನಾ ರೋಗಾಣು ಸರ್ವನಾಶ;ಡಾ.ಸೂರಯ್ಯ.

0
109

ಚಿತ್ರದುರ್ಗ/ಮೊಳಕಾಲ್ಮುರು;ಸಾಮಾಜಿಕ ಅಂತರ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸುವುದರಿಂದ ಕೊರೋನಾ ರೋಗಾಣುವನ್ನು ಸವ೯ನಾಶ ಮಾಡಬಹುದು ಎಂದು ಪ್ರಾಂಶುಪಾಲರಾದ ಡಾ.ಸೂರಯ್ಯ ರವರು ಕೋವಿಡ್ -19 ಲಾಕ್ಡೌನ್ ನಂತರದ ಸುರಕ್ಷತಾ ಕ್ರಮ ಹಾಗೂ ಜಾಗೃತ ಮತ್ತು ಶಿಕ್ಷಣ ಕಾಯ೯ಕ್ರಮವನ್ನು ಉದ್ಘಟಿಸಿ ಮಾತನಾಡಿದರು.

ನೆಹರು ಯುವ ಕೇಂದ್ರ ಚಿತ್ರದುಗ೯,ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ,ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಮೊಳಕಾಲ್ಮೂರು ಪ್ರಥಮ ದಜೆ೯ ಕಾಲೇಜು ಮೊಳಕಾಲ್ಮೂರು ಹಾಗೂ ಗಂಧವ೯ ಯುವ ಕಲಾ ಸಂಘ ಓಬಣ್ಣನಹಳ್ಳಿ ಸಹಯೋಗದಲ್ಲಿ ದಿನಾಂಕ 06/02/2021 ರಂದು ಕೋವಿಡ್- 19 ಸುರಕ್ಷತಾ ಹಾಗೂ ಜಾಗೃತಿ ಶಿಕ್ಷಣ ಕಾಯ೯ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು , ಕೊರೋನಾ ರೋಗಾಣುವು ನವೆಂಬರ್ – 31 ರಂದು ಪ್ರಥಮ ಬಾರಿಗೆ ಚೀನಾದಲ್ಲಿ ಕಾಣಿಸಿ ಕೊಂಡಿತು ನಮ್ಮ ಭಾರತಕ್ಕೆ ಅಷ್ಟೇ ಅಲ್ಲದೇ ಇಡೀ ಪ್ರಪಂಚಕ್ಕೆ ಆವರಿಸಿತು ಅಂದಿನಿಂದ ಜಗತ್ತು ಅನೇಕ ರೀತಿಯ ಸಮಸ್ಯಗಳನ್ನು ಎದುರಿಸುತ್ತಿದೆ ಲಕ್ಷಾಂತರ ಜನರಿಗೆ ಅನ್ನಕ್ಕೂ ಗತಿ ಇಲ್ಲದಂತಾಗಿ ಲಕ್ಷಾಂತರ ಜನರು ಸತ್ತು ಹೋದರು ,ಒಂದು ಚಿಕ್ಕ ರೋಗಾಣುವು ಮನುಷ್ಯನಿಗೆ ಮಾನವೀಯತೆಯನ್ನು ಕಲಿಸಿ ಕೊಟ್ಟಿತು ಎಂದು ಪ್ರೋಪೇಸರ್ ತಿಮ್ಮಣ್ಣ ರವರು ಅಭಿಪ್ರಾಯಪಟ್ಟರು.

ಆರೋಗ್ಯ ಇಲಾಖೆಯಿಂದ ಆಗಮಿಸಿದ್ದ ತಿಪ್ಪೇಸ್ವಾಮಿ ರವರು ಕೋರೋನಾ ಜಾಗೃತಿ ಬಗ್ಗೆ ತಡೆಗಟ್ಟುವ ಕ್ರಮಗಳ ಬಗ್ಗೆ ಸಾಮಾಜಿಕ ಅಂತರ ,ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸ್ಯಾನಿಟೇಸರ್ ಬಳಸುವುದು ಪದೇ ಪದೇ ಸೋಪಿನಿಂದ ಕೈಗಳನ್ನು ತೊಳೆಯುವುದರಿಂದ ಕೊರೋನಾ ತಡೆಗಟ್ಟಲು ಸಾಧ್ಯ ಎಂದು ಮುನ್ನೆಚರಿಕಾ ಕ್ರಮಗಳ ಬಗ್ಗೆ ತಿಳಿಸಿದರು.
ಕಾಯ೯ಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸೂರಯ್ಯ ,
ಇಂಗ್ಲೀ ಷ್ ವಿಭಾಗದ ಮುಖ್ಯಸ್ಥರಾದ ಪ್ರೋ. ತಿಮ್ಮಣ್ಣ, ಉಪನ್ಯಾಸಕರಾದ ನಾಗರಾಜ್, ರಾಘವೇಂದ್ರ,ಆರೋಗ್ಯ ಇಲಾಖೆಯ ತಿಪ್ಪೇಸ್ವಾಮಿ,ಗಂಧವ೯ ಯುವ ಕಲಾ ಸಂಘದ ಕಾಯ೯ದಶಿ೯ಯಾದ ಹಿಮಂತರಾಜ್,ಮನೋಜ್,ನೇರ್ಲಹಳ್ಳಿ ಮನೋಜ್,ಕಾಲೇಜಿನ ವಿದ್ಯಾಥಿ೯ಗಳು ಭಾಗವಹಿಸಿದ್ದರು.

ವರದಿ:ನಂದೀಶ್ ನಾಯಕ

LEAVE A REPLY

Please enter your comment!
Please enter your name here