ಬಳ್ಳಾರಿಯಲ್ಲಿ 07ಕಡೆ ತಾತ್ಕಾಲಿಕ ತರಕಾರಿ ಮತ್ತು ಹಣ್ಣುಗಳ ವ್ಯಾಪಾರ ಕೇಂದ್ರ ಆರಂಭ:ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ

0
131

ಬಳ್ಳಾರಿ, ಏ.21: ಕೋವಿಡ್ 2ನೇ ಅಲೆಯ ಸೊಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಣಗೊಳಿಸಲು ಹಾಗೂ ಸಾರ್ವಜನಿಕ ದಟ್ಟಣೆ ನಿಯಂತ್ರಿಸಿ, ಸಾರ್ವಜನಿಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಬಳ್ಳಾರಿಯ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳಾದ ತರಕಾರಿ ಮತ್ತು ಹಣ್ಣುಗಳನ್ನು ವ್ಯಾಪಾರ ಮಾಡುವ ವ್ಯಾಪಾರಿಗಳನ್ನು ನಗರದ ವಿವಿಧ ಭಾಗಗಳಿಗೆ ವಿಕೇಂದ್ರಿಕರಿಸಿ ಈ ವಿವಿಧ ಸ್ಥಳಗಳಲ್ಲಿ ಮಾತ್ರ ತಾತ್ಕಾಲಿಕವಾಗಿ ವ್ಯಾಪಾರ ನಡೆಸುವಂತೆ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ.
ನಗರದ ಈದ್ಗಾ ಮೈದಾನ,ಐ.ಟಿ.ಐ. ಕಾಲೇಜು ಮೈದಾನ, ರೆಡಿಯೋ ಪಾರ್ಕ್, ಎನ್.ಸಿ.ಸಿ ಮೈದಾನ ಕಂಟೋನ್ಮೆಂಟ್, ಸೆಂಟ್‌ಜಾನ್ಸ್ ಶಾಲೆಯ ಮೈದಾನ, ಕಪಗಲ್ಲು ರಸ್ತೆಯ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಮೈದಾನ, ಜಿಲ್ಲಾ ಕ್ರೀಡಾಂಗಣ, ಶ್ರೀರಾಂಪುರ ಕಾಲೋನಿಯಲ್ಲಿ ಸರ್ಕಾರಿ ಶಾಲೆ ಹತ್ತಿರ.

LEAVE A REPLY

Please enter your comment!
Please enter your name here