ಅಂಗನವಾಡಿ ನೌಕರರಿಗೆ ಪೂರ್ಣ ಪ್ರಮಾಣದ ವೇತನ ಪಾವತಿಗೆ ಕೋರಿ ಸಂಡೂರು ಪಟ್ಟಣದಲ್ಲಿ ಕಾರ್ಮಿಕ ಜಂಟಿ ಸಂಘಟನೆಗಳಿಂದ ಪ್ರತಿಭಟನೆ,

0
189

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು 12.07.2021 ರಂದು ಸಂಡೂರು ಪಟ್ಟಣದ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಮುಂಬಾಗ ಹಾಗೂ ತಾಲೂಕು ಕಚೇರಿ ಹತ್ತಿರ ಪ್ರತಿಭಟನೆ ನಡೆಸಿ ಸಿಡಿಪಿಓ ಪ್ರೇಮಮೂರ್ತಿ ಹಾಗೂ ತಹಶೀಲ್ದಾರ್ ಹೆಚ್.ಜೆ.ರಶ್ಮಿ ಅವರುಗಳಿಗೆ ಮನವಿಪತ್ರವನ್ನು ಸಲ್ಲಿಸಿದರು

ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಖಾಜಾಬುನಿ ಮಾತನಾಡಿ..
ಅಂಗನವಾಡಿ ನೌಕರರ ವೇತನ ಹೆಚ್ಚಳ ಮಾಡಬೇಕು,ಕರೋನಾ ಸುರಕ್ಷಣ ಪರಿಕರಗಳ ಜೊತೆಗೆ ಅಪಾಯ ಭತ್ಯೆ, ವಿಮಾ ಸೌಲಭ್ಯ ಕಲ್ಪಿಸಬೇಕು, ಕೊರೊನಾ ಅವಧಿಯಲ್ಲಿ ಘೋಷಿಸಿದ ಪರಿಹಾರ ದನ ತ್ವರಿತವಾಗಿ ಬಿಡುಗಡೆ ಮಾಡಬೇಕು,

ಸೂಕ್ತ ಸೌಲಭ್ಯ ತರಬೇತಿ ನೀಡದೆ, ಪೋಷಣಾ ಟ್ಯಾಕರ್ ಮೊಬೈಲ್ ಅಪ್ಲಿಕೇಶನ್ ನಲ್ಲಿ ಮಾಹಿತಿ ದಾಖಲಿಸಲು ಒತ್ತಡ ಹೇರಬಾರದು, ಶಾಲಾ ಪೂರ್ವ ಶಿಕ್ಷಣವನ್ನು ಅಂಗನವಾಡಿ ನೌಕರರಿಗೆ ಪೂರ್ಣ ಪ್ರಮಾಣದ ಗೌರವಧನ ಪಾವತಿಸಬೇಕು, ಅಂಗನವಾಡಿ ಖಾಲಿಇರುವ ಪಿಂಚಣಿ ಸೌಲಭ್ಯ ಕಲ್ಪಿಸಬೇಕು, ವರ್ಗಾವಣೆ ನಿವೃತ್ತಿಯಾದ ಹುದ್ದೆಗಳಿಗೆ ಮಿನಿ ಅಂಗನವಾಡಿ ನೌಕರರನ್ನು ನೇಮಿಸಿದ ನಂತರ ಉಳಿದ ಹುದ್ದೆಗಳನ್ನು ತುಂಬಬೇಕೆಂದು ತಿಳಿಸಿದರು.

ಈ ಸಂಧರ್ಭದಲ್ಲಿ ಅಂಗನವಾಡಿ ನೌಕರರ ಸಂಘ ಸಿಐಟಿಯು ಸಂಡೂರು ತಾಲೂಕು ಅಧ್ಯಕ್ಷರಾದ ಖಾಜಾಬುನಿ, ಸಂಡೂರು ತಾಲೂಕು ಕಾರ್ಮಿಕ ಸಂಘದ ಮುಖಂಡರಾದ ಯು.ತಿಪ್ಪೇಸ್ವಾಮಿ, ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ವಿ.ದೇವಣ್ಣ ಹಾಗೂ ಅಂಗನವಾಡಿ ನೌಕರರ ಸಂಘದ ರೇಖಾ,ಹೆಚ್ ಶಂಕ್ರಮ್ಮ,ಈರಮ್ಮ, ಲಕ್ಷ್ಮಿ, ಶಾರದಾ ಹಾಗೂ ಇತರರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here