ವಸಿಷ್ಠಧಾಮ ಕಾರ್ಯಕ್ರಮಗಳು ವೈಶಿಷ್ಠ್ಯಪೂರ್ಣವಾಗಿರುತ್ತವೆ : ವೆಂಕಣ್ಣಾಚಾರ್ಯ ದೋಟಿಹಾಳ

0
109

ಸಿಂಧನೂರು ನಗರದ ಧಾರ್ಮಿಕ ಹಾಗೂ ಸಾಂಸ್ಕøತಿಕ ಕೇಂದ್ರವಾದ ವಸಿಷ್ಠಧಾಮವು ಅನೇಕ ಧಾರ್ಮಿಕ ಸಾಂಸ್ಕøತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿದೆ. ಎಲೆಮರೆಯಕಾಯಿಯಂತಿರುವ ಪ್ರತಿಭೆಗಳಿಗೆ ಗುರುತಿಸಿ ವೇದಿಕೆ ಕಲ್ಪಿಸಿ ಪ್ರಶಸ್ತಿಕೊಡುವುದರ ಜೊತೆಗೆ ಅವರಿಗೆ ಸನ್ಮಾನಮಾಡುವ ಮೂಲಕ ಪ್ರತ್ಸಾಹಿಸುವ ಕಾರ್ಯ ಶ್ಲಾಘನೀಯ ಹಾಗೂ ಅನನ್ಯವಾಗಿದೆ.
ಶ್ರೀಕೃಷ್ಣ ಗೀತೆಯಲ್ಲಿ ಹೇಳಿರುವಂತೆ ಕರ್ಮಮಾಡುವುದಷ್ಠೇ ನಿನ್ನ ಕೆಲಸ ಫಲಾಫಲಗಳ ಬಯಕೆಯಿಲ್ಲದೇ ವಸಿಷ್ಠಧಾಮ ಸೇವೆ ನಿರಂತರವಾಗಿ ಮಾಡುತ್ತಿದೆ ಎಂದು ಬ್ರಾಹ್ಮಣ ಸಮಾಜದ ಮುಖಂಡರಾದ ದೋಟಿಹಾಳ ವೆಂಕಣ್ಣಾಚಾರ್ಯ ಜೋಷಿ ಹೇಳಿದರು.
ಅವರು ಸಿಂಧನೂರು ನಗರದ ಪಿ.ಡಬ್ಲು.ಡಿ ಕ್ಯಾಂಪಿನ ಶ್ರೀ ಸತ್ಯಮಾರುತಿ ದೇವಸ್ಥಾನದಲ್ಲಿ ಜಯತೀರ್ಥರ ಆರಾಧನಾ ಪ್ರಯುಕ್ತ ವಸಿಷ್ಠಧಾಮದಿಂದ ಜರುಗಿದ ಸಾಧಕರಿಗೆ ಪ್ರಶಸ್ತಿಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ವಸಿಷ್ಠಧಾಮ ಸಂಚಾಲಕ ಭೀಮಸೇನಾಚಾರ್ಯ ನವಲಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಪ್ರೋತ್ಸಾಹ ಪೂರ್ವಕ ಕಾರ್ಯಕ್ರಮವಾಗಿದೆ ಹಾಗೂ ಸೂಕ್ತವಾದ ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ ಕೊಡುವುದು ಸಾಮಾಜಿಕ ಜವಾಬ್ದಾರಿಯಾಗಿದೆ.

ವೆಂಕಟಗಿರಿಯಾಚಾರ್ಯರು ಕಳೆದ ಇಪತ್ತು, ಇಪ್ತತೈದು ವರ್ಷಗಳಿಂದ ನಿರಂತರ ಶ್ರಾದ್ಧ ಪಕ್ಷಗಳನ್ನು ಮಾಡುವ ಮೂಲಕ ನಮ್ಮ ಸಮಾಜದ ಕಾರ್ಯವನ್ನು ಮಾಡುತ್ತಿದ್ದಾರೆ, ಹಾಗೆಯೇ ಪ್ರಭಾಕರ ಕುಲಕರ್ಣಿಯವರು ಸಿಂಧನೂರು ನಗರದ ಲಯನ್ಸ ಕ್ಲಬ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಾಲ್ಯದ ಗೆಳೆಯ ಹಾಗೂ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾಮಾನ್ಯವ್ಯಕ್ತಿಯಂತೆ ಸ್ವಯಂ ಸೇವಕರಾಗಿ ನಿಷ್ಕಾಮ ಸೇವೆಸಲ್ಲಿಸುವ ಮಹನೀಯರಾಗಿದ್ದಾರೆ ಆದ್ದರಿಂದ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ವೆಂಕಟಗಿರಿಯಾಚಾರ್ಯರಿಗೆ ವಸಿಷ್ಠಧಾಮ – ಶ್ರೀ ಜಯತೀರ್ಥ ರತ್ನಾಕರ ಹಾಗೂ ಪ್ರಭಾಕರ ಕುಲಕರ್ಣಿಯವರಿಗೆ ವಸಿಷ್ಠಧಾಮ- ಶ್ರೀ ವಿಪ್ರ ಯುವ ರತ್ನಾಕರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಎಂ.ಕೆ ಗೌರಕರ್, ಫಣೀಂದ್ರ ಶರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ವೇತಾ ಸವದಿ ಪ್ರಾರ್ಧನೆ, ವಾಸುದೇವಾಚಾರ್ಯ ಉಪ್ಪಳ ವಂದನೆ ಹಾಗೂ ಶ್ರೀಮತಿ ಸುಧಾ ಕಾರ್ಯಕ್ರಮ ನಿರೂಪಿಸಿದರು.

ವರದಿ: ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here