ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಭೇಟಿಮಾಡಿದ ರಘು ಗುಜ್ಜಲ್

0
127

ವಿಜಯನಗರ:ಕೂಡ್ಲಿಗಿ:07.ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಘು ಗುಜ್ಜಲ್ ಲಿ ಕಾಂಗ್ರೆಸ್ ಕಾರ್ಯಕರ್ತರ ಭೇಟಿಮಾಡಿದರು ರಘು ಗುಜ್ಜಲ್ ಎಸ್ಟಿ ವಿಭಾಗದ ಕಾಂಗ್ರೆಸ್ ಪಕ್ಷದ ಕಾರ್ಯಕಾರಣಿ ರಾಷ್ಟ್ರೀಯ ಸದಸ್ಯ ಹಾಗೂ 2018ರ ಕಾಂಗ್ರೆಸ್ ಪಕ್ಷದ ಚುನಾವಣೆ ಅಭ್ಯರ್ಥಿಯಾಗಿದ್ದರು,

ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆಲವು ಕಾಂಗ್ರೆಸ್ ಕಾರ್ಯಕರ್ತರ ಜೊತೆ ಮುಂಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗಳ ಬಗ್ಗೆ ಮಾತನಾಡಿದರು, ಜಿಲ್ಲಾ ಪಂಚಾಯಿತಿ ಗುಂಡುಮುಣುಗು ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸುಮಾರು ಎಂಟು ಜನ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಿದ್ದಾರೆ ಎಂದು ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿದರು. ನಂತರ ಗುಂಡುಮುನುಗು ಜಿಲ್ಲಾ ಪಂಚಾಯತಿ ಮೀಸಲು ಕ್ಷೇತ್ರದಿಂದ ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಿಮ್ಮನಹಳ್ಳಿ ಗ್ರಾಮದ ಸಣ್ಣ ಪಾಲಯ್ಯ ಮಾತನಾಡಿ ಸುಮಾರು ಸಾರಿ ನಮ್ಮ ಆದಿಕರ್ನಾಟಕ ಜನಾಂಗಕ್ಕೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ದೊರೆತಿಲ್ಲ ಕಾರಣ ಈ ಬಾರಿ ನಮ್ಮ ಜನಾಂಗಕ್ಕೆ ಮೀಸಲು ಕ್ಷೇತ್ರದಿಂದ ಟಿಕೆಟ್ ಕೊಡಿ ಎಂದು ಕೇಳಿದರು, ನಾನು ಸಹ ಗುಂಡುಮುಣುಗು ಜಿಲ್ಲಾಪಂಚಾಯಿತಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಗುಜ್ಜಲ್ ರವರಿಗೆ ಹೇಳಿದರು.
ಕಾರ್ಯಕರ್ತರ ಜೊತೆಗೆ ಪಕ್ಷದ ಇತರ ವಿಷಯಗಳ ಬಗ್ಗೆ ಚರ್ಚೆ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕಿನ ಕಾಂಗ್ರೆಸ್ ಮುಖಂಡರಾದ ಪುರುಷೋತ್ತಮ .ಓಬಣ್ಣ ಸೋಮಣ್ಣ. ಕುಮಾರಸ್ವಾಮಿ ಸೂರ್ಯಪ್ರಕಾಶ್, ಆರ್ ಬಸವರಾಜ್ ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು. ಸಣ್ಣ ಪಾಲಯ್ಯ ಗುಂಡುಮುನುಗು ಜಿಲ್ಲಾಪಂಚಾಯಿತಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ವರದಿಗಾರರಾದ ನಂದೀಶ್, ಮಂಜುನಾಥ್,ರಾಜಶೇಖರ್ ಸೇರಿದಂತೆ ಕೆಲವು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ:-ಮಂಜುನಾಥ್

LEAVE A REPLY

Please enter your comment!
Please enter your name here