“ವಿಶ್ವವನ್ನು ಬದಲಾಯಿಸಬಹುದಾದ ಅತ್ಯಂತ ಪ್ರಬಲ ಸಾಧನ ಶಿಕ್ಷಣ” ‘ತಾಲೂಕಿನ ಎಲ್ಲಾ ಶಿಕ್ಷಕ ಭಾಂದವರಿಗೂ 133ನೇ ಶಿಕ್ಷಕರ ದಿನಾಚರಣೆಯ ಶುಭಾಶಯಗಳು’-ಈ.ತುಕಾರಾಂ

0
231

ಶಿಸ್ತಿನಿಂದ ಶಿಕ್ಷಕರಿಗೆ ಶಿರಭಾಗಿ,ಶ್ರದ್ದೆಯಿಂದ ಶ್ರಮಪಟ್ಟು ಶಿಕ್ಷಣವನ್ನರಿತು,ಶಿಕ್ಷಕ ನೀಡಿದ ಶಿಕ್ಷೆಯನ್ನನುಭವಿಸಿ ಶಿಲೆಗಳಂತೆ ಶುದ್ಧ ಮನಸ್ಸಿನಿಂದ ಶಿಕ್ಷಣದ ಮಹತ್ವ ತಿಳಿದು ಶಿರೋಮಣಿಗಳಾಗಿ ಶಿಕ್ಷಕರ ಶ್ರೇಯೋಭಿಲಾಷೆಯೊಂದಿಗೆ ಶ್ರೇಷ್ಠವ್ಯಕ್ತಿಗಳಾಗಿ ಶಿಕ್ಷಕ\ಶಿಕ್ಷಕಿಯರಾಗಿ ಶೋಭಿಸುತ್ತಿರುವ ಶ್ರೇಷ್ಠ ಸಮಾಜದ ಶ್ರೇಯಸ್ಕರನ್ನಾಗಿ ಮಾಡುವ ಎಲ್ಲರಿಗೂ 133ನೇ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

“ಕಪ್ಪುಬಣ್ಣವು ಭಾವನಾತ್ಮಕವಾಗಿ ಕೆಟ್ಟದು,ಆದರೆ ಪ್ರತಿಯೊಂದು ಕಪ್ಪು ಬೋರ್ಡ್ ವಿದ್ಯಾರ್ಥಿಯ ಜೀವನವನ್ನು ಪ್ರಕಾಶಮಾನಗೊಳಿಸುತ್ತದೆ” -ಡಾ.ಎ ಪಿ ಜೆ ಅಬ್ದುಲ್ ಕಲಾಂ

ಕಲ್ಯಾಣ ಕರ್ನಾಟಕ ಭಾಗದಲ್ಲಿ ನಂಜುಂಡಪ್ಪ ವರದಿಯಲ್ಲಿ ಸಂಡೂರು ತಾಲೂಕು ಹಿಂದುಳಿದ ತಾಲೂಕು ಎಂಬ ಉಲ್ಲೇಖವಿದೆ.ಈ ಹಣೆಪಟ್ಟಿಯನ್ನು ತೆಗೆದುಹಾಕುವ ಹೆಜ್ಜೆಯನ್ನು ಇಟ್ಟು ಕಾರ್ಯಪ್ರವೃತ್ತರಾಗಿರುವ ಈ ಸಂದರ್ಭದಲ್ಲಿ ನನ್ನ ಮತಕ್ಷೇತ್ರದ ಎಲ್ಲಾ ವರ್ಗದ ಮಕ್ಕಳಿಗೆ ತಂತ್ರಜ್ಞಾನಾಧಾರಿತ ಗುಣಾತ್ಮಕ ಹಾಗೂ ಮೌಲ್ಯಯುತ ಶಿಕ್ಷಣವನ್ನು ನೀಡುವುದರ ಮೂಲಕ ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಮತಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ಸದಾಶಯದೊಂದಿಗೆ ಅನೇಕ ನವನವೀನ,ತಂತ್ರಜ್ಞಾನಾಧಾರಿತ ಶೈಕ್ಷಣ ಕ ಯೋಜನೆಗಳ ಅನುಷ್ಠಾನ ಮಾಡುವ ಭಾಗವಾಗಿ ತಾಲೂಕಿನ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಸ್ಮಾರ್ಟ್‍ಕ್ಲಾಸ್,ಉತ್ತಮ ದರ್ಜೆಯ ಶಾಲಾಕೊಠಡಿಗಳು,ಅಗತ್ಯ ಮೂಲಭೂತ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಫಲವಾಗಿ ಪ್ರತಿವರ್ಷದಂತೆ ಪ್ರಸಕ್ತ ಸಾಲಿನಲ್ಲಿ ತಾಲೂಕಿನ ಎಲ್ಲಾ ಪ್ರೌಢಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶವು “ಎ” ದರ್ಜೆಯಲ್ಲಿ ಬಂದಿರುವುದು ನಿಮ್ಮ ಸಹಕಾರಕ್ಕೆ ಹಿಡಿದ ಕನ್ನಡಿಯಾಗಿದೆ.

ಈ ಹಿಂದಿನ ವರ್ಷಗಳಲ್ಲಿ ಶೈಕ್ಷಣ ಕ ಗುಣಮಟ್ಟ ಉತ್ತಮಪಡಿಸಲು ‘ಸಾಧನಾ ಪಥ’ ‘ಫಲಿತಾಂಶ ಪಥ’ ಹಾಗೂ ‘ವಿಶ್ವಾಸ’ದಂತಹ ಉತ್ತಮ ದರ್ಜೆಯ ಶೈಕ್ಷಣ ಕ ಕೃತಿಗಳು ಬಹಳ ಬದಲಾವಣೆಯನ್ನು ತಂದಿರುವುದನ್ನು ನಾನು ಸ್ವತಃ ಮನಗಂಡಿದ್ದೇನೆ ಹಾಗೂ ಇದಕ್ಕೆ ಸಹಕರಿಸಿದ್ದಕ್ಕಾಗಿ ನಾನು ಶಿಕ್ಷಣ ಕ್ಷೇತ್ರದ ಎಲ್ಲಾ ಪಾಲುದಾರರಿಗೂ ಅಭಿನಂದಿಸುತ್ತೇನೆ ಮುಂದುವರೆದು ಹೆಚ್ಚಿನ ಶೈಕ್ಷಣ ಕ ಸಾಧನೆಗೆ ಮೊದಲ ಹೆಜ್ಜೆಯೆಂಬಂತೆ ತಾಲೂಕಿನ 175 ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ವಿವಿಧ ಯೋಜನೆಗಳಲ್ಲಿ ಮಾದರಿ ಶಾಲೆಗಳನ್ನು ಮಾಡಬೇಕೆಂಬ ಕನಸಿನ ಯೋಜನೆಗೆ ಈಗಾಗಲೆ ಪ್ರತಿ ಗ್ರಾಮಪಂಚಾಯತಿಗೆ ಒಂದರಂತೆ ಯೋಜನೆ ಸಿದ್ದಪಡಿಸಿ 26 ಗ್ರಾಮಪಂಚಾಯತ್‍ಗಳಲ್ಲಿನ 26 ಪ್ರಾಥಮಿಕ ಶಾಲೆ ಮತ್ತು 13 ಪ್ರೌಢಶಾಲೆಗಳು ಹಾಗೂ ಪಟ್ಟಣದ ಕುಮಾರಸ್ವಾಮಿ ಸರ್ಕಾರಿ ಶಾಲೆಯನ್ನು “ಮಾದರಿಶಾಲೆ”ಗಳಾಗಿ ಲೋಕಾರ್ಪಣೆ ಮಾಡುವ ಹಂತದಲ್ಲಿ ಕಾರ್ಯಪ್ರವೃತ್ತರಾಗಿದ್ದು ತಮ್ಮೆಲ್ಲರ ಸಹಕಾರದಿಂದ ಈ ಮಹತ್ತರ ಯೋಜನೆಯಲ್ಲಿ ಯಶಸ್ಸು ಪಡೆಯಲಿದ್ದೇವೆ ಎಂಬ ಭರವಸೆಯೊಂದಿಗೆ ದೇಶಕಂಡ ಅತ್ಯುತ್ತಮ ಶಿಕ್ಷಕರು,ಮಾಜಿ ರಾಷ್ಟಪತಿಗಳಾದ ಶ್ರೀಯುತ ಸರ್ವೇಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ ಎಲ್ಲಾ ಶಿಕ್ಷಕರು ಶೈಕ್ಷಣಿಕ ಕಾಳಜಿಯೊಂದಿಗೆ ಉತ್ತಮ ಗುಣಾತ್ಮಕ ಶಿಕ್ಷಣ ವಿಶೇಷವಾಗಿ“ಮೌಲ್ಯಶಿಕ್ಷಣ” ನೀಡುವಲ್ಲಿ ಅವಿರತ ಶ್ರಮ ಪಡುವುದನ್ನು ನಾನು ಗಮನಿಸಿದ್ದೇನೆ.

“ಒಂದು ದೇಶ ಆರ್ಥಿಕವಾಗಿ ಶ್ರೀಮಂತ,ಸದೃಢ ದೇಶವಾಗುವುದಕ್ಕಿಂತ ಆ ದೇಶದ ಪ್ರಜೆಗಳ ಶೈಕ್ಷಣಿಕ ಸಂಪತ್ತು ವೃದ್ಧಿಯಾಗುವುದು ಬಹಳ ಮುಖ್ಯವಾದುದಾಗಿದ್ದು” ಎಂಬ ಹಿರಿಯರ ಮಾತಿನಂತೆ ತಮ್ಮೆಲ್ಲರ ತನು-ಮನ-ಧನ ಸೇವೆಯ ಅರ್ಪಣೆಯನ್ನು ನನ್ನ ಕ್ಷೇತ್ರದ ಎಲ್ಲಾ ಮಕ್ಕಳಿಗೆ ಧಾರೆಯೆರೆದು ಕೊವಿಡ್-19 ಮಾರಕರೋಗದಂತಹ ಸಂದರ್ಭದಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಹಾಗೂ ತಾಲೂಕಿನ ಎಲ್ಲಾ ಮಕ್ಕಳಿಗೆ ತಂತ್ರಜಾÐನದಿಂದ ಕೂಡಿದ ಪ್ರತಿಭಾವಂತ ಸೃಜನಶೀಲ ಮಕ್ಕಳನ್ನು ತಯಾರುಮಾಡಿ ಉತ್ತಮ ಶೈಕ್ಷಣ ಕ ವಾತಾವರಣ ನಿರ್ಮಿಸುತ್ತೀರೆಂದು ನನ್ನ ಆಶಾಭಾವನೆಯೊಂದಿಗೆ…
“ತಾಲೂಕಿನ ಎಲ್ಲಾ ಶಿಕ್ಷಕ ಭಾಂದವರಿಗೂ 133ನೇ ಶಿಕ್ಷಕರ ದಿನಾಚರಣೆಯ ಶುಭಾಶಯಗಳು”

                                       ಶ್ರೀ.ಈ.ತುಕಾರಾಂ.ಶಾಸಕರು.                                    ಸಂಡೂರು ವಿಧಾನ ಸಭಾ ಕ್ಷೇತ್ರ                                   ಹಾಗೂ ಮಾಜಿ ವೈದ್ಯಕೀಯ ಶಿಕ್ಷಣ ಸಚಿವರು.ಕರ್ನಾಟಕ ಸರ್ಕಾರ.

LEAVE A REPLY

Please enter your comment!
Please enter your name here