ವೃದ್ಧಾಶ್ರಮದಲ್ಲಿ ವಿನೂತನವಾಗಿ ಗಣೇಶ ಚತುರ್ಥಿ ಆಚರಣೆ.

0
104

ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ ಕಾರುಣ್ಯ ನೆಲೆ ವೃದ್ಧಾಶ್ರಮ ಮತ್ತು ವಯಸ್ಕರ ಬುದ್ದಿಮಾಂದ್ಯ ಆಶ್ರಮದಲ್ಲಿ ಶ್ರೀಮತಿ ಸುಜಾತ ಪರಶುರಾಮ ಶ್ರೀ ಪರಶುರಾಮ ಸಾ/ಕಾರಟಗಿ ಜಿ/ಕೊಪ್ಪಳ ಮತ್ತು ಮಕ್ಕಳು ಹಾಗೂ ಕುಟುಂಬ ವರ್ಗದಿಂದ ಶ್ರೀ ಗಣೇಶ ಚತುರ್ಥಿ ಹಬ್ಬವನ್ನು ಆಶ್ರಮದಲ್ಲಿ ಭರ್ಜರಿ ಮಹಾಪ್ರಸಾದ ವಿವಿಧ ಬಗೆಯ ಸಿಹಿ ಪದಾರ್ಥಗಳನ್ನು ಮಾಡಿಸಿ ಎಲ್ಲಾ ವೃದ್ಧರು ಹಾಗೂ ಬುದ್ಧಿಮಾಂದ್ಯರಿಗೆ ಹಣ್ಣುಹಂಪಲುಗಳನ್ನು ವಿತರಿಸಿ ಶ್ರೀ ವಿಘ್ನವಿನಾಶಕ ಅಷ್ಟೋತ್ತರ ನಾಮಾವಳಿಗಳನ್ನು ಜಪಿಸುವ ಮೂಲಕ ಶ್ರೀ ಗೌರಿ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಿದರು.

ಈ ಹಬ್ಬದ ಕಾರ್ಯಕ್ರಮದಲ್ಲಿ ಎಲ್ಲಾ ವೃದ್ಧರು ಹಾಗೂ ಬುದ್ಧಿಮಾಂದ್ಯರು ಶ್ರೀಮತಿ ಸುಜಾತ ಪರಶುರಾಮ ಮತ್ತು ಮಕ್ಕಳು ಅವರ ಕುಟುಂಬಕ್ಕೆ ಶ್ರೀ ವಿಘ್ನ ವಿನಾಶಕ ಯಾವುದೇ ತೊಂದರೆಗಳು ಆಗದಂತೆ ಯಾವುದೇ ನೋವುಗಳು ಬರದಂತೆ ಕಾಪಾಡಿ ಸಮಾಜದಲ್ಲಿನ ನಮ್ಮಂತಹ ಹಲವಾರು ನೊಂದು ಬಂದ ಜೀವಿಗಳಿಗೆ ಆಶ್ರಯ ನೀಡಿ ಅನ್ನದಾತರಾಗುವಂತಹ ಇನ್ನೂ ಹೆಚ್ಚಿನ ಶಕ್ತಿಯನ್ನು ಕರುಣಿಸಿ ಇವರ ಕುಟುಂಬಕ್ಕೆ ಸಕಲ ಐಶ್ವರ್ಯ ಸಿರಿ ಸಂಪತ್ತು ಆಯಸ್ಸು ಆರೋಗ್ಯವನ್ನು ಕರುಣಿಸು ಎಂದು ಬೇಡಿಕೊಂಡು ಶುಭಕೋರಿ ಶುಭಹಾರೈಸಿ ಆಶೀರ್ವದಿಸಿದರು.

ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಿದ ಅನುಷಾ ಬ್ಯಾಂಕ್ ಅಧಿಕಾರಿಗಳು ಕರ್ನಾಟಕ ಬ್ಯಾಂಕ್ ಸಿಂಧನೂರು, ವಿಜಯಲಕ್ಷ್ಮಿ ಧ್ಯಾನ ತರಬೇತಿಗಾರರು ಸಿರುಗುಪ್ಪ ಇವರುಗಳು ಶ್ರೀಮತಿ ಸುಜಾತ ಪರಶುರಾಮ ಅವರ ಕುಟುಂಬಕ್ಕೆ ಶುಭಕೋರಿ ಶ್ರೀ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿದರು.

ನಂತರ ಆಶ್ರಮದ ಆಡಳಿತಾಧಿಕಾರಿಗಳಾದ ಶ್ರೀ ಚನ್ನಬಸವ ಸ್ವಾಮಿ ಹಿರೇಮಠ ಪ್ರತಿ ಹಬ್ಬವನ್ನು ಕೂಡ ಶ್ರೀಮತಿ ಸುಜಾತ ಪರಶುರಾಮ ಅವರ ಅಪಾರ ಬಂಧು ಬಳಗ ಮತ್ತು ಕುಟುಂಬದವರು ಎಲ್ಲಾ ಹಬ್ಬಗಳನ್ನು ಬೇರೆ ಬೇರೆ ರೀತಿಯಿಂದ ಕಾರುಣ್ಯಾಶ್ರಮದಲ್ಲಿ ಆಚರಣೆ ಮಾಡುತ್ತಿದ್ದಾರೆ. ಇದು ನಮಗೆ ಬಹಳ ಸಂತೋಷದ ವಿಷಯವಾಗಿದೆ. ಯಾಕೆಂದರೆ ಇಂದಿನ ದಿನಮಾನಗಳಲ್ಲಿ ನಾವು ಮನೆಯಲ್ಲಿ ನಮ್ಮ ಕುಟುಂಬದ ಜೊತೆ ಹಬ್ಬ ಆಚರಣೆ ಮಾಡುವುದನ್ನು ಬಿಟ್ಟರೆ ಬೇರೆ ಯೋಚನೆಗಳು ಬರಲಾರದಂತಹ ಕಾಲದಲ್ಲಿ ಈ ಕುಟುಂಬ ನಮ್ಮಂತಹ ನೊಂದು ಬೆಂದ ಜೀವಿಗಳ ಜೊತೆ ಈ ರೀತಿ ಹಬ್ಬವನ್ನು ಆಚರಿಸಿಕೊಳ್ಳುವುದು ಒಂದು ವಿಶೇಷ ರೀತಿಯ ಸಂಪ್ರದಾಯ ಎಂದು ಭಾವುಕರಾಗಿ ಅವರ ಕುಟುಂಬಕ್ಕೆ ಶ್ರೀ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿ ಶುಭಹಾರೈಸಿ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು

LEAVE A REPLY

Please enter your comment!
Please enter your name here