ಅತಿಥಿ ಉಪನ್ಯಾಸಕರ ಸಂಘಟನೆಯಿಂದ ಶಾಸಕ ಸೋಮಶೇಖರ್ ರೆಡ್ಡಿಗೆ ಮನವಿ

0
102

ಬಳ್ಳಾರಿ:ಸೆ:12:-ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆ ವತಿಯಿಂದ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಒಳಗೊಂಡ ಮನವಿ ಪತ್ರವನ್ನು ಬಳ್ಳಾರಿಯ ಶಾಸಕರಾದ ಸೋಮಶೇಖರ್ ರೆಡ್ಡಿಯವರಿಗೆ ಸಲ್ಲಿಸಲಾಯಿತು.

ಅತಿಥಿ ಉಪನ್ಯಾಸಕರು ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ, ಕೆಲಸವನ್ನು ಪರ್ಮನೆಂಟ್ ಮಾಡದಿರುವುದು, ಹಾಗೂ 12 ತಿಂಗಳ ಸಂಬಳವನ್ನು ಕೊಡಬೇಕೆಂದು ಮತ್ತು ಪಿಎಫ್, ಇಎಸ್ಐ ಮುಂತಾದ ಸೌಲಭ್ಯಗಳನ್ನು ಒದಗಿಸಬೇಕೆಂದು ಮನವಿ ಪತ್ರದಲ್ಲಿ ಬೇಡಿಕೆಗಳನ್ನು ಇಡಲಾಗಿದೆ. ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆಯಬೇಕೆಂದು ನಾವು ಶಾಸಕ ಸೋಮಶೇಖರ್ ರೆಡ್ಡಿ ಅವರಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆ ವತಿಯಿಂದ ಮನವಿ ಮಾಡಲಾಗಿದೆ ಎಂದು ತಿಳಿಸಿದರು

LEAVE A REPLY

Please enter your comment!
Please enter your name here