ಶ್ರೀ ವ್ಯಾಸರಾಜರ ಮಠದಲ್ಲಿ ಶ್ರೀ ಮಧ್ಭಾಗವತ ಪ್ರೋಷ್ಠಪದಿ‌ ಪ್ರವಚನ ಕಾರ್ಯಕ್ರಮ

0
79

ಬಳ್ಳಾರಿ:ಸೆ:21:-ಭಾದ್ರಪದ ಮಾಸದ ಅಂಗವಾಗಿ ರೇಡಿಯೋ ಪಾಕ೯ ಶ್ರೀ ವ್ಯಾಸರಾಜರ ಮಠದಲ್ಲಿ ಶ್ರೀ ಮಧ್ಭಾಗವತ ಪ್ರೋಷ್ಠಪದಿ‌ಪ್ರವಚನ ನನ್ನು
ಪಂಡಿತ್ ಜಯತೀರ್ಥ ಆಚಾರ್ಯಜೋಶಿ ರಾಯದುರ್ಗ ಇವರಿಂದ ಏಪ೯ಡಿಲಾಗಿತ್ತು.
ಮೂರುದಿನಗಳ ಕಾಲ ನಡೆದ ಪ್ರವಚನದಲ್ಲಿ ಆಚಾರ್ಯರು ಭಾಗವತದಲ್ಲಿ ಬರುವ ವಿಷ್ಣು ವಿನ ದಶಾವತಾರಗಳಬಗ್ಗೆ ತುಂಬಾ ವಿಸ್ತಾರವಾಗಿ ಹೇಳಿ
ದಶಮ ಸ್ಕಂಧಗಳಲ್ಲಿರುವ ಪ್ರತಿಯೊಂದು ಅಂಶಗಳು ಇಂದಿನ ದೈನಂದಿನ ಜೀವನಕ್ಕೆ ಆದಶ೯ಪ್ರಾಯವಾಗಿದ್ದು ಅವುಗಳನ್ನು ಪಾಲಿಸಿಕೊಂಡು ಹೋಗಬೇಕೆಂದು ಆಚಾಯ೯ರು ಕರೆ ನೀಡಿದರು.
ಮೂರು ದಿನಗಳ ಕಾಲ ನಡೆದ ಪ್ರವಚನದ ಮಂಗಳ ಕಾರ್ಯ ಕ್ರಮದಲ್ಲಿನೂರಾರು ಭಕ್ತಾಧಿಗಳು ‌ಭಾಗವಹಿಸಿದ್ದರು. ಈ‌ ಸಂಧಭ೯ದಲ್ಲಿ ಮಂತ್ರಾಲಯ ದಲ್ಲಿ ನಡೆದ ಹಾಗೂ ಕೃಷ್ಣ ಜನ್ಮಾಷ್ಟಮಿ ಯಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ದ ಭಜನಾ ಮಂಡಳಿ ಸದಸ್ಯರಿಗೆ ಮತ್ತು
ಚಿಕ್ಕಮಕ್ಕಳಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಆಚಾರ್ಯರು ವಿತರಿಸಿದರು. ಮಠದ ಅಚ೯ಕರಾಧ ಕೆ.ಪಾಂಡುರಂಗಾಚಾಯ೯ ಹಾಗೂ ಮಠದ ವ್ಯವಸ್ಥಾಪಕ ರಾದ ಅಶೋಕ್ ಕುಲಕರ್ಣಿ ಮತ್ತು ಹೆಚ್.ವೇಣುಗೋಪಾಲ್,ಬಿ. ಅನಂತಾಚಾಯ೯,ಸಿ.ಕೆ.ನಾಗರಾಜ,ಎಂ.ಭೀಮರಾವ್ ಕುಲಕರ್ಣಿ,.ಬಿ.ಅನಂತ ಕೃಷ್ಣ,ಡಿ.ಹೆಚ್,ರಘುನಾಥ, ಸತ್ಯವಧ೯ನ್ ಆಚಾರ್ಯ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ವರದಿ:-ಮಹೇಶ್

LEAVE A REPLY

Please enter your comment!
Please enter your name here