ಯರ್ರಲಿಂಗನಹಳ್ಳಿ ಗ್ರಾಮದ ಹೇಮಣ್ಣನ ಕನಸು ನನಸಾಗುತ್ತಾ..!?

0
184

ವಿಜಯನಗರ:ಸೆ:29:-ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬೆಳ್ಳಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರ್ರಲಿಂಗನಹಳ್ಳಿ ಗ್ರಾಮದ ಹೇಮಣ್ಣ ಸುಮಾರು ವರ್ಷಗಳಿಂದ ಗುಡಿಸಲು ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಗುಡಿಸಲು ಮುಕ್ತ ರಾಜ್ಯ ನಿರ್ಮಾಣವಾಗಬೇಕು ಎನ್ನುವ ಕಲ್ಪನೆಯನ್ನು ಇಟ್ಟುಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ವಸತಿ ಯೋಜನೆಗಳ ಅನುದಾನ ಸಕಾಲಕ್ಕೆ ಬಾರದೆ ಮನೆಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದುವರೆಗೂ ಅವರಿಗೆ ಸರ್ಕಾರದಿಂದ ಮನೆ ಬಂದಿಲ್ಲ. ಗ್ರಾಮ ಪಂಚಾಯಿತಿಯಿಂದ ಸಹ ಯಾವುದೇ ರೀತಿಯಿಂದ ಮನೆ ಮಂಜೂರು ಆಗಿಲ್ಲ.

ಹೇಮಣ್ಣ ಮಾತನಾಡಿ ನಾವು ಸುಮಾರು ವರ್ಷಗಳಿಂದ ಗ್ರಾಮ ಪಂಚಾಯಿತಿ ಅವರನ್ನು ಮನೆಯ ಬಗ್ಗೆ ಕೇಳುತ್ತಾ ಬರುತ್ತಿದ್ದೇವೆ ಆದರೆ ನಮಗೆ ಯಾವುದೇ ರೀತಿಯಿಂದ ಮನೆ ಮಂಜೂರಾಗಿಲ್ಲ ನಾವು ಸೋರುವ ಈ ಗುಡಿಸಲು ಮನೆಯಲ್ಲಿ ವಾಸ ಮಾಡುತ್ತಿದ್ದೇವೆ ನಾವು ಕೇಳಿಕೊಳ್ಳುವುದಿಷ್ಟೆ ನಮಗೆ ಆದಷ್ಟು ಬೇಗ ಮೇಲಧಿಕಾರಿಗಳು ಸರ್ಕಾರ ವತಿಯಿಂದ ಮನೆ ಮಂಜೂರು ಮಾಡಿ ಕೊಡಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೂ ಸಹ ಮನವಿ ಮಾಡುತ್ತೇನೆ ಎಂದರು

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಬಸವರಾಜ್ ಮಾತನಾಡಿ ಸರ್ಕಾರದಿಂದ ಸುಮಾರು ವರ್ಷಗಳಿಂದ ಗ್ರಾಮ ಪಂಚಾಯಿತಿಗೆ ಮನೆಗಳು ಬರದೇ ಇದ್ದ ಕಾರಣ ಗ್ರಾಮಗಳಲ್ಲಿ ಬಹಳ ಸಮಸ್ಯೆಯಾಗಿದೆ ಸರ್ಕಾರ ಗ್ರಾಮ ಪಂಚಾಯಿತಿಗೆ ಮನೆ ಮಂಜೂರು ಮಾಡಿದರೆ ಇಂತಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಕಳಿಸುತ್ತೇವೆ ಎಂದು ತಿಳಿಸಿದರು.

ವರದಿ:-ಮಂಜುನಾಥ್ ಹೆಚ್

LEAVE A REPLY

Please enter your comment!
Please enter your name here