ದೇವರ ದಾಸಿಮಯ್ಯ ಜಯಂತಿ‌ಯ ಪೂರ್ವಭಾವಿ ಸಭೆ; ದೇವರ ದಾಸಿಮಯ್ಯ ಅವರ ವಚನ ಸಾರ ಅರಿತು ನಡೆಯಿರಿ
-ತಹಶೀಲ್ದಾರ ಪ್ರಕಾಶ ನಾಶಿ

0
134

ಹುಬ್ಬಳ್ಳಿ;ಏ.4 : ಸಮಾಜದ ಏಳಿಗೆಗೆ ಶ್ರಮಿಸಿದ ದೇವರ ದಾಸಿಮಯ್ಯ ಅವರ ಸ್ಮರಣೆ ಮಾಡುವ ನಿಟ್ಟಿನಲ್ಲಿ ಏ.6ರಂದು ಜಯಂತಿ ಆಚರಣೆ ಮಾಡಲಾಗುವುದು. ಅವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು. ಅವರ ವಚನಗಳ ಸಾರವನ್ನು ಅರಿತು ಎಲ್ಲರೂ ನಡೆಯಬೇಕಾಗಿದೆ ಎಂದು ತಹಶೀಲ್ದಾರ ಪ್ರಕಾಶ್ ನಾಶಿ ಹೇಳಿದರು.

ಹುಬ್ಬಳ್ಳಿಯ ಮಿನಿವಿಧಾನಸೌಧದ ಸಭಾಂಗಣದಲ್ಲಿ ನಡೆದ
ದೇವರ ದಾಸಿಮಯ್ಯ ಜಯಂತಿ‌ಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಎರಡು ವರ್ಷಗಳಿಂದ ಕರೋನಾದಿಂದ ಸರಳವಾಗಿ ದೇವರ ದಾಸಿಮಯ್ಯ ಜಯಂತಿಯನ್ನು ಆಚರಿಸಲಾಗಿತ್ತು. ಈ ಬಾರಿ ತಾಲೂಕು ಮಟ್ಟದಲ್ಲಿ ಏ.6ರಂದು ಬೆಳಿಗ್ಗೆ 11 ಗಂಟಗೆ ಮಿನಿವಿಧಾನಸೌಧದ ಸಭಾಂಗಣದಲ್ಲಿ ಆಚರಣೆ ಮಾಡಲಾಗುವುದು. ಅಂದು ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಪೂಜೆ ಸಲ್ಲಿಸಲಾಗುವುದು. ಜಯಂತಿಯಂದು ದೇವರ ದಾಸಿಮಯ್ಯ ಅವರ ಬಗ್ಗೆ ಅಧ್ಯಯನ ಮಾಡಿದವರಿಂದ ಉಪನ್ಯಾಸ ಏರ್ಪಡಿಸಲಾಗುತ್ತದೆ. ಸಮಾಜದ 10 ಜನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು‌. ವಚನ ಗಾಯನ ನಡೆಯಲಿದೆ ಎಂದು ತಿಳಿಸಿದರು.

ಹುಬ್ಬಳ್ಳಿ ಶಹರ ತಹಶೀಲ್ದಾರ ಶಶಿಧರ್ ಮಾಡ್ಯಾಳ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ್,
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ನಂದಾ ಹಣಬರಟ್ಟಿ, ಹುಬ್ಬಳ್ಳಿ ದೇವಾಂಗ ಕೇಂದ್ರೀಯ ಸಮಿತಿಯ ಗೌರವಾಧ್ಯಕ್ಷರಾದ ಡಾ‌.ಕೆ.ಜಿ.ಬ್ಯಾಕೋಡಿ, ಸಮಿತಿಯ ಅಧ್ಯಕ್ಷ ನಾಗೇಶ ಬಾಪ್ರಿ, ಉಪಾಧ್ಯಕ್ಷೆ ತಾರಾಮತಿ ವಾಸಪ್ಪನ್ನವರ್, ಕಾರ್ಯದರ್ಶಿ ವೀರಣ್ಣ ನಿಂಬರಗಿ, ಸಂಘಟನಾ ಕಾರ್ಯದರ್ಶಿ ನಾರಾಯಣ ಎಚ್, ಪಟ್ಟದ ಸಾಲಿ ನೇಕಾರ ಸಮಾಜದ ಆಡಳಿತ ಮಂಡಳಿಯ ನಿರ್ದೇಶಕರಾದ ಪ್ರದೀಪ್ ಪಂಜಿ, ಬಸವರಾಜ ಬೊಬ್ಬಿ ಸೇರಿದಂತೆ ಸಮಾಜದ ಪ್ರಮುಖರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here