ಎಮ್. ಗಂಗಲಾಪುರ ಗ್ರಾಮದಲ್ಲಿ ಸಂಜೆ ವೇಳೆ ಕೋವಿಡ್ ಲಸಿಕೆ ಹಾಕಿ ಗುರಿ ಸಾಧಿಸುವ ವಿನೂತನ ಪ್ರಯತ್ನ:

0
787

ಸಂಡೂರು:ಡಿ:23:-ಸಂಡೂರು ತಾಲೂಕಿನ ಮೆಟ್ರಿಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಜನರು ಲಸಿಕೆ ಪಡೆಯಲು ಇನ್ನೂ ಹಿಂಜರಿಯುತ್ತಿದ್ದಾರೆ ಎಷ್ಟೇ ಹೇಳಿದರೂ ಏನೇನೋ ಮಾತಾಡಿ ತಪ್ಪಿಸಿಕೊಂಡು ಬಿಡೋರು ಅದಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಸ್ಕೊಡ್ವೆಸ್ ಮೊಬೈಲ್ ಮೆಡಿಕಲ್ ಯುನಿಟ್ ನ ತಂಡ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಸ್ನೇಹ ಸಂಸ್ಥೆಯ ಸದಸ್ಯರು ಇಂದು ಗಂಗಲಾಪುರ ಗ್ರಾಮದಲ್ಲಿ ಸಂಜೆ ಐದು ಗಂಟೆಯಿಂದ ಲಸಿಕೆ ನೀಡಲು ಸಿದ್ದತೆ ಮಾಡಿಕೊಂಡು ಓಣಿ ಓಣಿ- ಮನೆ ಮನೆಗೆ ತೆರಳಿ ಜನರಿಗೆ ಲಸಿಕೆ ಬಗ್ಗೆ ಅರಿವು ಮೂಡಿಸಿದರು, ಜನ ಮಾತ್ರ ತಮ್ಮ ಹಠ ಸಾಧಿಸುತ್ತಿದ್ದಾರೆ,

ನಿಮ್ಮ ಹಠ ಬಿಟ್ಟು ಲಸಿಕೆ ಪಡೆಯಿರಿ ಎಂದು ತಿಳಿ ಹೇಳಿದರೂ ಕೇಳುತ್ತಿಲ್ಲ, ನಾಳೆ ಹಾಕಿಸಿ ಕೊಳ್ಳುವೆ, ಬೆಳಿಗ್ಗೆ ಹಾಕಿಸಿ ಕೊಳ್ಳುವೆ, ಆಸ್ಪತ್ರೆಗೆ ಬಂದು ಹಾಕಿಸುವೆ ಎಂದು ಹೇಳುತ್ತಿದ್ದಾರೆ, ಸಿಬ್ಬಂದಿ ವ್ಯಾಕ್ಸಿನ್ ಇಲ್ಲೆ ಇದೆ ಹಾಕಿಸಿಕೊಳ್ಳಿ ಅಂದ್ರು ಆಮೇಲೆ ಬಂದು ಹಾಕಿಸಿಕೊಳ್ಳುವೆ ಎಂದು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು, ಸಿಬ್ಬಂದಿಯವರು ಪಟ್ಟು ಬಿಡದೇ ಮನೆಯ ಮುಂದೆ, ಅಡುಗೆ ಮನೆಯಲ್ಲೆ ಹೋಗಿ ಲಸಿಕೆ ಹಾಕಿದರು, ಹಾಗೇ ಜನರನ್ನು ಮನವೊಲಿಸಿ ಲಸಿಕೆ ನೀಡಿದರು ಇಂದು ಒಟ್ಟಾರೆ 58 ಜನರಿಗೆ ಮೊದಲ ಡೋಸ್, ಹಾಗೂ 13 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಿದರು,

ಇದೇ ತರ ಮೆಟ್ರಿಕಿ ವ್ಯಾಪ್ತಿಯ ಕೆಲವು ಹಳ್ಳಿಗಳು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ, ಅದಕ್ಕಾಗಿ ತಾಲೂಕು ಆರೋಗ್ಯಾಧಿಕಾರಿ ಡಾ. ಕುಶಾಲ್ ರಾಜ್ ಅವರು ಸಂಜೆ ವೇಳೆ ಮನೆಮನೆಗೆ ತೆರಳಿ ಲಸಿಕೆ ನೀಡಲು ಸೂಚಿಸಿದರು,
ಅದರಂತೆ ಇಂದು ಗಂಗಲಾಪುರ ಗ್ರಾಮದಲ್ಲಿ ಲಸಿಕೆ ನೀಡಲಾಗಿದೆ, ಇಲ್ಲಿಯ ವರೆಗೆ 536 ಫಲಾನುಭವಿಗಳಲ್ಲಿ 351 ಜನರು ಮಾತ್ರ ಮೊದಲ ಡೋಸ್ ಪಡೆದಿದ್ದಾರೆ,

ಈ ಸಂದರ್ಭದಲ್ಲಿ ಆರೋಗ್ಯ ಸುರಕ್ಷಾಧಿಕಾರಿ ಶಂಕ್ರಮ್ಮ,ಸ್ಕೊಡ್ವೆಸ್ ಮೊಬೈಲ್ ಮೆಡಿಕಲ್ ಯುನಿಟ್ ನ ಡಾ.ಅಭಿಷೇಕ್,ಫಾರ್ಮಸಿಸ್ಟ್ ಶೃತಿ, ಸ್ಟಾಫ್ ನರ್ಸ್ ಪವಿತ್ರ,ನಾಗವೇಣಿ, ಟೆಕ್ನಿಷಿಯನ್ ಲತಾ, ಶರತ್ ಹಾಗೂ ಆಶಾ ಫೆಸಿಲಿಟೇಟರ್ ಈರಮ್ಮ, ಆಶಾ ಕಾರ್ಯಕರ್ತೆ ಅನುಪಮಾ, ಗೌರಮ್ಮ, ಸ್ನೇಹಾ ಸಂಸ್ಥೆಯ ಕೋಅರ್ಡಿನೇಟರ್ ಜಗದೀಶ್, ಮೋಟಿವೇಟರ್ ತಾಯಮ್ಮ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here