ಆನೆಕಾಲು ರೋಗ ಅಥವಾ ಫೈಲೇರಿಯಾಸಿಸ್ ರೋಗದ ಬಗ್ಗೆ ತೋರಣಗಲ್ ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮ,

0
625

ಸಂಡೂರು:ಡಿ:28:-ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಅಂಗನವಾಡಿಯಲ್ಲಿ ಹಮ್ಮಿಕೊಂಡಿದ್ದ ಆನೆಕಾಲು ರೋಗ ಅಥವಾ ಪೈಲೆರಿಯಾಸಿಸ್ ರೋಗದ ಬಗ್ಗೆ ಜಾಗೃತಿ
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

ಗ್ರಾಮದಲ್ಲಿ ಆನೆಕಾಲು ರೋಗದ ಮೂರು ಪ್ರಕರಣಗಳು ಈಗಾಗಲೇ ಕಂಡು ಬಂದ ಹಿನ್ನೆಲೆಯಲ್ಲಿ ರೋಗಿಗಳು ಇರುವ ಪ್ರದೇಶದಲ್ಲಿ ರಕ್ತದ ಮಾದರಿ ಸಂಗ್ರಹಣೆ ಮಾಡುವ ಕಾರಣ ಅಲ್ಲಿನ ಜನರಿಗೆ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ, ಆನೆಕಾಲು ರೋಗವು ಕ್ಯುಲೆಕ್ಸ್ ಜಾತಿಯ ಕ್ವಿಂಕಿಫಿಷಿಯಾ ಪ್ರಬೇಧದ ಸೊಳ್ಳೆಗಳಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ, ಸೋಂಕಿತ ಸೊಳ್ಳೆಗಳು ಪದೇಪದೇ ಹಲವು ಬಾರಿ ಕಚ್ಚಿದರೆ ರೋಗದ ಲಕ್ಷಣಗಳು ಕಂಡು ಬರುವವು ನಂತರ ಆನೆಕಾಲು ತರಹ ಕಾಲು ಬಾವು ಕಂಡು ಬರುವುದು,ಪುರುಷರಲ್ಲಿ ಕೆಲವರಿಗೆ ವೃಷಣದ ಬಾವು ಕಂಡು ಬರುವುದು, ಇದಕ್ಕೆ ಪೂರ್ಣ ಚಿಕಿತ್ಸೆ ಇರದಿದ್ದರೂ ಪ್ರಾಥಮಿಕವಾಗಿ ಪತ್ತೆ ಹಚ್ಚಿ ರೋಗ ಉಲ್ಬಣವಾಗದಂತೆ ಎರಡು ಮಾದರಿ ಮಾತ್ರೆಗಳಿಂದ ಚಿಕಿತ್ಸೆ ನೀಡಲಾಗುವುದು,

ಚರಂಡಿಯಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳನ್ನು ನಿಯಂತ್ರಣ ಮಾಡುವುದು, ರಾತ್ರಿ ತಪ್ಪದೇ ಸೊಳ್ಳೆ ಪರದೆ ಕಟ್ಟಿಕೊಂಡು ಮಲಗಬೇಕು, ಸೊಳ್ಳೆ ನಿಯಂತ್ರಣಕ್ಕೆ ಮಸ್ಕಿಟೋ ಕಾಯಿಲ್ ಬಳಕೆ, ಕ್ರೀಮ್ ಲೇಪನ,ಚರಂಡಿಯಲ್ಲಿ ನಿಂತ ನೀರಿಗೆ ವೇಸ್ಟ್ ಆಯಿಲ್ ಹಾಕುವುದು, ಚರಂಡಿ ಸ್ವಚ್ಚ ಗೊಳಿಸುವುದು ಮಾಡಬೇಕಿದೆ ಎಂದು ತಿಳಿಸಿದರು,

ಗ್ರಾಮದಲ್ಲಿ ಆನೆಕಾಲು ರೋಗಿಗಳು ಸಂಖ್ಯೆ ಸಧ್ಯ ಕಡಿಮೆ ಇದ್ದು ಉಲ್ಬಣವಾಗದಂತೆ ತಡೆಯಲು ಪತ್ತೆ ಹಚ್ಚುವ ಕಾರ್ಯ ಇಲಾಖೆ ಮಾಡಲಿದೆ, ರಾತ್ರಿ ರಕ್ತ ಮಾದರಿ ಸಂಗ್ರಹಣೆ ಕಾರ್ಯ ಚಟುವಟಿಕೆಗೆ ಎರಡು ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಸಹಕಾರ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಸುಂಕಮ್ಮ ಸೋಮಶೇಖರ್ ಅವರು ಮಾತನಾಡಿ ಇಂತಹ ಉತ್ತಮ ಕಾರ್ಯಗಳಿಗೆ ಗ್ರಾಮ ಪಂಚಾಯತಿ ಮತ್ತು ಸಾರ್ವಜನಿಕರ ಸಹಕಾರ ಸಂಪೂರ್ಣ ಇರುವುದಾಗಿ ತಿಳಿಸಿದರು,
ಇತರೆ ರಾಜ್ಯಗಳಿಂದ ಕಾರ್ಖಾನೆ ಕೆಲಸಕ್ಕೆ ವಲಸೆ ಬಂದ ಜನರಿಗೆ ಅರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್ ಅಹಮದ್ ಹಿಂದಿ ಬಾಷೆಯಲ್ಲಿ ಕಾರ್ಯಕ್ರಮದ ಬಗ್ಗೆ ಮನವರಿಕೆ ಮಾಡಿದರು,

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಸುಂಕಮ್ಮ ಸೋಮಶೇಖರ್, ಮಾಜಿ ಸದಸ್ಯರಾದ ಪದ್ಮಾವತಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಹಿರಿಯ ಅರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್ ಅಹಮದ್, ಎಮ್.ಟಿ.ಎಸ್ ಸಾಗರ್ ಕುಮಾರ್, ನಿಜಾಮುದ್ದೀನ್, ಆಶಾ ಕಾರ್ಯಕರ್ತೆ ಹನುಮಂತಮ್ಮ, ನೀಲಮ್ಮ, ಸುಮಾ ಹೊಸಕೋಟೆ, ಗ್ರಾಮಸ್ಥರಾದ ರಾಮನಗೌಡ,ವೆಂಕಟೇಶ, ಶ್ರೀನಿವಾಸ, ಸಿದ್ದರಾಮಪ್ಪ,ಪಂಪಾಪತಿ, ಅನಿತಾ ಸಿಂಗ್,ಲಕ್ಷ್ಮೀದೇವಿ, ದುರ್ಗಾ, ರಾಧ ದೇವಿ, ಕಲ್ಯಾಣಿ, ರಶ್ಮಿ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here