ಎಲ್ಲಾ ಕಡೆ ಕೋವಿಡ್ ಕೋವಿಡ್ ಪಾಸಿಟಿವ್ ಹೆಚ್ಚುತ್ತಿವೆ ಮಕ್ಕಳು ಎಚ್ಚರಿಕೆಯಿಂದಿರಿ; ಶಾಸಕ ಈ.ತುಕಾರಾಂ

0
346

ಸಂಡೂರು:ಜ: 3: ಸೂಕ್ತ ಸಮಯಕ್ಕೆ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ,ಸದ್ಯ ಮೂರನೇ ಅಲೆಯ ಆತಂಕ ಮಕ್ಕಳಿಗೆ ದೂರವಾಗಲಿದೆ ಎಂದು ಸಂಡೂರಿನ ಶಾಸಕರಾದ ಇ.ತುಕಾರಾಂ, ಸಂಡೂರು ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ “ಕಿರಿಯರಿಗಾಗಿ ಕೋವ್ಯಾಕ್ಸಿನ್ ಲಸಿಕಾಕರಣ” ಕಾರ್ಯಕ್ರಮದಲ್ಲಿ ತಿಳಿಸಿದರು.

ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಮಕ್ಕಳು ಒಳಗೊಳಗೆ ಭಯದಿಂದ ಶಾಲೆಗೆ ಬರುತ್ತಿದ್ದರು ಆ ಭಯ ಕಡಿಮೆಯಾಗಲಿದೆ, ವ್ಯಾಕ್ಸಿನೇಷನ್‌ ನಂತರವೂ ಸುರಕ್ಷಾ ಕ್ರಮಗಳನ್ನು ಪಾಲಿಸಬೇಕಿದೆ, ಯಾವುದೇ ಕಾರಣಕ್ಕೂ ಮೈ ಮರೆಯುವಂತಿಲ್ಲ ಎಲ್ಲಾ ಕಡೆ ಕೋವಿಡ್ ಪಾಸಿಟಿವ್ ಬರುತ್ತಿವೆ ಎಚ್ಚರಿಕೆಯಿಂದ ಇರಿ ಎಂದು ಮಕ್ಕಳಿಗೆ ಸಲಹೆ ನೀಡಿದರು,

ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ಮಾತನಾಡಿ ಈದಿನ ಮಹಾಸುದಿನ ಶಿಕ್ಷಣ ತಜ್ಞೆ ಭಾರತದ ಮೊದಲ ಮಹಿಳಾ ಶಿಕ್ಷಕಿ ಶ್ರೀಮತಿ ಸಾವಿತ್ರಿ ಬಾಯಿ ಪುಲೆ ಅವರ ಜನ್ಮದಿನ ಇಂದು ಮಕ್ಕಳಿಗೆ ಲಸಿಕೆ ನೀಡುತ್ತಿದ್ದಾರೆ ಅದು ಸಂತೋಷದ ವಿಷಯ ಎಂದು ತಿಳಿಸಿದರು,ತಾಲೂಕು ಆರೋಗ್ಯಾಧಿಕಾರಿ ಡಾ.ಕುಶಾಲ್ ರಾಜ್ ಮಾತನಾಡಿ ತಾಲೂಕಿನಲ್ಲಿ ಲಸಿಕೆ ನೀಡುವ ಸಾಧನೆ ಉತ್ತಮವಾಗಿದೆ, ಇದೀಗ ಒಟ್ಟು 61 ಸರ್ಕಾರಿ ಮತ್ತು ಅನುದಾನಿತ, ಖಾಸಗಿಯ ಪ್ರೌಢಶಾಲೆ, ಪದವಿ ಕಾಲೇಜು,ತಾಂತ್ರಿಕ ಕಾಲೇಜು ಸೇರಿ 13359 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದೇವೆ, ಇಂದು 5780 ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆರ್ ಜ್ಯೋತಿಬಾಯಿ ಅವರು ಪ್ರಾರ್ಥನೆ ಹೇಳಿದರು, ಆರ್ ಕೆ ಎಸ್ ಕೆ ಆಪ್ತ ಸಮಾಲೋಚಕ ನಾಗಭೂಷಣ ಸ್ವಾಗತ ಕೋರಿದರು,
ಕಾರ್ಯಕ್ರಮದಲ್ಲಿ ಡಾಕ್ಟರ್ ರಾಮಶೆಟ್ಟಿ ಮುಖ್ಯ ವೈದ್ಯಾಧಿಕಾರಿಗಳ ಸಾರ್ವಜನಿಕ ಆಸ್ಪತ್ರೆ ಸಂಡೂರು,ಡಾ.ಚಂದ್ರಪ್ಪ, ಡಾ.ಭರತ್ ಕುಮಾರ್, ಇಮಾಮ್ ಸಾಬ್ ಮುಖ್ಯಾಧಿಕಾರಿಗಳು ಪುರಸಭೆ,
ಉಮಾಪತಿ ಕ್ಷೇತ್ರ ಸಮನ್ವಯಾಧಿಕಾರಿಗಳು, ಎಸ್ ಡಿ ಸಂತಿ ದೈಹಿಕ ಶಿಕ್ಷಣ ಪರಿವೀಕ್ಷಕರು, ಬಸವರಾಜ್ ಶಿಕ್ಷಣ ಸಂಯೋಜಕರು, ಭೊಂಸ್ಲೆ ಉಪ ಪ್ರಾಚಾರ್ಯರು ಸರ್ಕಾರಿ ಪ್ರೌಢಶಾಲೆ, ಎಂ ಯಫ್ ಹುಗ್ಗಿ ಪ್ರಾಚಾರ್ಯರು ಸರಕಾರಿ ಪಿಯು ಕಾಲೇಜ್ ಸಂಡೂರು, ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ, ಶಿಕ್ಷಣ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು

LEAVE A REPLY

Please enter your comment!
Please enter your name here