ವಿಜಯನಗರ: ಪಲ್ಸ್ ಪೋಲಿಯೋ ತಾಲ್ಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆ.

0
98

ಹೊಸಪೇಟೆ(ವಿಜಯನಗರ ಜಿಲ್ಲೆ),ಫೆ.23: ಹೊಸಪೇಟೆ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಪ್ರಭಾರ ತಹಶೀಲ್ದಾರರಾದ ಮೇಘ ಅವರ ಅಧ್ಯಕ್ಷತೆಯಲ್ಲಿ ಬುಧವಾರದಂದು ಪಲ್ಸ್ ಪೋಲಿಯೋ ತಾಲ್ಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಪ್ರಭಾರ ತಹಶೀಲ್ದಾರರಾದ ಮೇಘ ಅವರು ಮಾತನಾಡಿ ಫೆ.27ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿಯನ್ನು ಹಾಕಿಸಬೇಕು ಮತ್ತು ಈ ಮೂಲಕ ಪೋಲಿಯೋ ಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಹಾಗೆಯೇ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ಹಾಗೂ ಸಂಘಟನೆಗಳಿಂದ ಸಲಹೆ ಸೂಚನೆಗಳನ್ನು ಪಡೆದರು.

ತಾಲ್ಲೂಕು ಆರೋಗ್ಯಾಧಿಕಾರಿಯಾದ ಭಾಸ್ಕರ್ ಅವರು ಮಾತನಾಡಿ, ಫೆ.27ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಎರಡು ಹನಿ ಪೋಲಿಯೋ ಹಾಕಿಸಲು ತಿಳಿಸಿದರು ಮತ್ತು ಮಕ್ಕಳಿಗೆ ಪೋಲಿಯೋ ಹಾಕಲು ನಗರ ಮತ್ತು ಗ್ರಾಮೀಣ ಸೇರಿ ಒಟ್ಟು 285 ಬೂತ್‍ಗಳಿದ್ದು, 285 ತಂಡಗಳನ್ನು ರಚನೆ ಮಾಡಲಾಗಿದೆ ಹಾಗೂ ಪ್ರತಿಯೊಂದು ತಂಡಗಳಲ್ಲಿ ಇಬ್ಬರು ಸಿಬ್ಬಂದಿಗಳು ಸೇರಿ ಒಟ್ಟು 602 ಸಿಬ್ಬಂದಿಗಳು, 56 ಜನ ಸೂಪರ್ ವೈಸರ್‍ಗಳಾಗಿ ಪಿಡಿಒ ಮತ್ತು ಬಿಲ್ ಕಲೆಕ್ಟರ್‍ಗಳು ಕಾರ್ಯನಿರ್ವಹಿಸಲಿದ್ದಾರೆ ಮತ್ತು ಅಂಗನವಾಡಿ ಕೇಂದ್ರಗಳು ಹಾಗೂ ಇನ್ನೂ ಕೆಲ ಶಾಲೆಗಳನ್ನು ಸಹ ಬೂತ್‍ಗಳನ್ನಾಗಿ ಮಾಡಲಾಗಿದೆ ಎಂದರು.
ನಗರಸಭೆಯ ಆಯುಕ್ತರಿಗೆ ಪಲ್ಸ್ ಪೋಲಿಯೋ ಕಾರ್ಯಕ್ರಮದ ನಿಮಿತ್ತ ಎರಡು ದಿನದವರೆಗೆ ಬೂತ್ ಮಟ್ಟದ ಅಧಿಕಾರಿಗಳಿಗೆ ಊಟ ಮತ್ತು ನೀರಿನ ವ್ಯವಸ್ಥೆಯನ್ನು ಮಾಡಿಕೊಡಲು ತಿಳಿಸಿದರು.

ಕೆಎಸ್‍ಆರ್‍ಟಿಸಿ ವಿಭಾಗದವರಿಗೆ ಪಲ್ಸ್ ಪೋಲಿಯೋ ಬಗ್ಗೆ ಪ್ರಚಾರ ಮಾಡಲು ತಿಳಿಸಿದರು. ಹಾಗೆಯೇ ಪಲ್ಸ್ ಪೋಲಿಯೋ ಕಾರ್ಯಕ್ರಮದ ದಿನದಂದು ಬೂತುಗಳಿಗೆ ವ್ಯಾಕ್ಸಿನ್ ಪೂರೈಕೆ ಮಾಡಲು ವಾಹನದ ವ್ಯವಸ್ಥೆ ಮಾಡಿಕೊಡಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪ್ರಭಾರ ತಹಸೀಲ್ದಾರರು ತಿಳಿಸಿದರು ಹಾಗೂ ಮರಿಯಮ್ಮನಹಳ್ಳಿ, ಕಮಲಾಪುರ ಮತ್ತು ಹೊಸಪೇಟೆ ಬಸ್ ನಿಲ್ದಾಣಗಳಲ್ಲಿ ಸಂಚಾರಿ ಪಲ್ಸ್ ಪೋಲಿಯೋ ತಂಡಗಳು ಕಾರ್ಯನಿರ್ವಹಿಸಲಿವೆ ಎಂದರು.
ಜೆಸ್ಕಾಂ ಅವರಿಗೆ ಪಲ್ಸ್ ಪೋಲಿಯೋ ಕಾರ್ಯಕ್ರಮದ ಎರಡು ದಿನದ ಮುಂಚಿತವಾಗಿ ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಲು ತಿಳಿಸಿದರು.
ಸಿಡಿಪಿಓ ಅವರಿಗೆ ಅಂಗನವಾಡಿ ಟೀಚರ್‍ಗಳೂ ಸಹ ತಂಡಗಳಲ್ಲಿ ಒಬ್ಬರಂತೆ ಕೆಲಸ ನಿರ್ವಹಿಸಲು ತಿಳಿಸಿದರು ಹಾಗೂ ಅಂಗನವಾಡಿ ಕೇಂದ್ರದ ಅಂಗನವಾಡಿ ಟೀಚರ್‍ಗಳು ಹಾಗೂ ಆಶಾ ಕಾರ್ಯಕರ್ತರರು ಸಾರ್ವಜನಿಕರಿಗೆ ಪಲ್ಸ್ ಪೋಲಿಯೋ ಹಾಕಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದರು.
ತಾಲ್ಲೂಕು ಮಟ್ಟದ ಕೆಲ ಸಂಘಟನೆಗಳು ಪಲ್ಸ್ ಪೋಲಿಯೋ ಕಾರ್ಯಕ್ರಮದ ಒಂದು ದಿನದ ಮುಂಚೆ ಪಲ್ಸ್ ಪೋಲಿಯೋ ಬಗ್ಗೆ ಜಾಗೃತಿ ಮೂಡಿಸಲು ರ್ಯಾಲಿಯನ್ನು ಪ್ರತಿ ವರ್ಷದಂತೆ ಈ ವರ್ಷ ಸಹ ರ್ಯಾಲಿಯನ್ನು ನೇರವೇರಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆಯ ಆಯುಕ್ತರಾದ ಮನ್ಸೂರ್ ಅಲಿ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here