“ದೈವ ಬಲ ಬಲದೊಂದಿಗೆ ನಮ್ಮ ನಂಬಿಕೆ ಅಷ್ಟೆ’

0
290

ದೇವರು ಎಂದರೆ ಆಧ್ಯಾತ್ಮ ಅಸ್ತಿತ್ವದ ನಂಬಿಕೆ ಅಷ್ಟೆ .ದೇವರು ಇದ್ದಾನೆ ಅಥವಾ ಇಲ್ಲವೋ ಅದನ್ನು ಒಪ್ಪಬೇಕಾದ ಅನಿವಾರ್ಯತೆಯೂ ಇದೆ. ಒಪ್ಪದೇ ಇದ್ದರೆ ಈ ಭೌತಿಕ ಜಗತ್ತಿನ ಎಲ್ಲ ಸೂತ್ರಗಳು ತಲೆ ಕೆಳಗಾಗಿಬಿಡುತ್ತವೆ, ಜಗತ್ತಿನಲ್ಲಿ ದೇವರು ಎನ್ನುವ ಅಸ್ತಿತ್ವ ಪ್ರಖರತೆಯಲ್ಲಿರಬೇಕಾದರೆ ಪ್ರಪಂಚದಲ್ಲಿ ನಡೆಯುವ ಘಟನೆಗಳ ಹಾಗು ಹೋಗುಗಳನ್ನು ಮುಂದಿಟ್ಟುಕೊಂಡು ನಮ್ಮ ಹುಟ್ಟಿನಿಂದ ನಾವು ಗತಿಸುವವರೆಗೂ ನಮ್ಮ ದೈನಂದಿನ ಜೀವನದಲ್ಲಿ ನಡೆಯುವ ಘಟನೆಗಳ ಅನುಭವಗಳ ಹೂರಣವನ್ನೇ ಅವಲೋಕಿಸಿದಾಗ ನಮ್ಮ ಇರುವಿಕೆಯನ್ನು ದೈವಬಲದ ನಂಬಿಕೆಯ ಮೇಲೆ ತೋರ್ಪಡಿಸುತ್ತೇವೆ.

ಬಸವಾದಿ ಶರಣರ ವಚನಗಳ ಸಾರವನ್ನೇ ನಾವು ಅವಲೋಕಿಸಿದಾಗ ನಮ್ಮ ದೈನಂದಿನ ಜೀವನದ ಪ್ರತಿ ಹೆಜ್ಜೆ ಹೆಜ್ಜೆಗೂ ಪ್ರಸ್ತುತವೆನಿಸಿವೆ. ಯಾಕೆಂದರೆ ” ಕಾಯಕವೇ ಕೈಲಾಸ” “ಮನಸ್ಸು ಮಾರ್ಗಕ್ಕೆ ದಾರಿ’ “ದಯವೇ ಧರ್ಮದ ಮೂಲ’ ಹೀಗೆ ನಾವು ಅವಲೋಕಿಸಿದಾಗ ದೇವರು ಮತ್ತು ಧರ್ಮ ನಂಬಿಕೆಯಲ್ಲಿ ತನ್ನ ಏಳು ಬೀಳುಗಳಗಳ ಲೆಕ್ಕಾಚಾರಗಳನ್ನು ಅವಲೋಕಿಸುತ್ತಾ ಬಂದಿದ್ದಾನೆ. ಇಲ್ಲಿ ‘ನಾಸ್ತಿಕ’ ಅಂದರೆ ದೇವರ ಅಸ್ತಿತ್ವವನ್ನು ನಂಬದವನು ಅರಿಯದವನು ಎಂದು ಹಾಗೂ ‘ಆಸ್ತಿಕ’ ಎಂದರೆ ಸದಾ ದೈವಸ್ವರೂಪಿಯಾಗಿ ದೇವರ ಧ್ಯಾನದಲ್ಲಿ ಮನಸ್ಸು ಕಲ್ಪಿಸಿಕೊಂಡವನು ಎಂದೆಲ್ಲಾ ಈ ಆಧ್ಯಾತ್ಮಿಕ ವಿಚಾರವೇ ಬೇರೆ.

ನಮ್ಮ ಮೆದುಳು ಮನಸ್ಸು ಹಾಗೂ ಹೃದಯಕ್ಕೆ ಸಂಬಂಧಿಸಿದ್ದು ಇವುಗಳಲ್ಲಿ ಮುಖ್ಯವಾಗಿ ಬೇಕಾಗಿದ್ದು ಹೃದಯವಂತಿಕೆ. ಮುಖಸ್ತುತಿ ನೋಡಿ ದೇವರ ಭಾವ ದೈವತ್ವದ ರೂಪ ಪಡೆಯುವುದಲ್ಲ, ಅವನಲ್ಲಿ ಹೃದಯವಂತಿಕೆ ಇದ್ದಾಗ ಮಾತ್ರ ದೈವತ್ವದ ನಂಬಿಕೆ ಸಾಕಾರಗೊಳ್ಳುತ್ತದೆ ಅಮೂಲ್ಯವಾದ ಮುತ್ತು ರತ್ನಗಳನ್ನು ತನ್ನ ಮಡಿಲಲ್ಲಿಟ್ಟುಕೊಂಡು ತ್ಯಾಜ್ಯವನ್ನು ಮಾತ್ರ ಹೊರದೂಡುವ ಸಮುದ್ರದಂತೆ ನಾವೂ ಕೂಡ ನಮ್ಮ ಬದುಕನ್ನು ನಾಶಗೊಳಿಸವ ದುರ್ಗುಣ ಕೆಟ್ಟ ವಿಚಾರ ಮೂರ್ಖ ಚಿಂತನೆಗಳನ್ನು ಬಿಟ್ಟು ಸನ್ಮಾರ್ಗದಲ್ಲಿ ಅಂದರೆ ಆಸ್ತಿಕ ಅಸ್ತಿತ್ವದ ನಂಬಿಕೆಯಲ್ಲಿ ನಮ್ಮ ಮನಸ್ಸು ಹಾಗೂ ಹೃದಯವನ್ನು ಶುಚಿತ್ವಗೊಳಿಸಿಕೊಂಡಾಗ ಮಾತ್ರ ನಾವು ಪೂಜಿಸುವ ಆಧ್ಯಾತ್ಮಿಕ ಸ್ವರೂಪಿಯಾದ ಆ ಭಗವಂತ ಅಂದರೆ ಶಿವ ನಮ್ಮ ನಂಬಿಕೆಯಲ್ಲಿ ಬಂದು ಅಗೋಚರವಾದ ರೂಪದಲ್ಲಿ ಪೂಜಿಸಿ ನಮ್ಮ ನಂಬಿಕೆ ಮನಸ್ಸು ಹಾಗೂ ಹೃದಯವನ್ನು ಶುಚಿತ್ವಗೊಳಿಸಿಕೊಂಡಾಗ ಮಾತ್ರ ನಾವೆಲ್ಲಾ ಭಗವಂತನ ಸ್ವರೂಪಿಗಳಾದಾಗ ಭಗವಂತನು ನಮ್ಮನ್ನು ಹಿಂಬಾಲಿಸುತ್ತಾನೆ ಅಂದ್ರೆ ಕಾಪಾಡುತ್ತಾನೆ ಇದುವೇ ದೈವ ಬಲ…
Work is worship ….

-ವೀರನಗೌಡ ಪಾಟೀಲ್.
ವಕೀಲರು.ಕೂಡ್ಲಿಗಿ

LEAVE A REPLY

Please enter your comment!
Please enter your name here