ಡಾ.ಬಿ.ಅರ್.ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸಲು ಕರ್ನಾಟಕ ರಿಪಬ್ಲಿಕನ್ ಸೇನಾ ಮನವಿ

0
77

ಬಳ್ಳಾರಿ:06:ಎ:-ಬಾರತರತ್ನ, ಸಂವಿಧಾನ ಶಿಲ್ಪಿ ಡಾ|| ಬಿ.ಅರ್. ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ ಜಿಲ್ಲಾ ನ್ಯಾಯಾಧೀಶರನ್ನು ಕೂಡಲೇ ಸೇವೆಯಿಂದ ವಜಾ ಮಾಡಲು ಒತ್ತಾಯಿಸಿ ಬಳ್ಳಾರಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ನ್ಯಾಯಾಧೀಶರಿಗೆ ಒತ್ತಾಯದ ಮನವಿಯನ್ನು ಸಲ್ಲಿಸಲಾಯಿತು

ರಾಜ್ಯಾಧ್ಯಕ್ಷರಾದ ಜಿಗಣಿ ಶಂಕರ್ ಅವರು ಮಾತನಾಡಿ ದಿನಾಂಕ:26-01-2022 ಗಣರಾಜ್ಯೋತ್ಸವ (ರಾಷ್ಟ್ರೀಯ ಹಬ್ಬ)ದ ದಿನದಂದು ರಾಯಚೂರುನಲ್ಲಿ ಹೈಕೋರ್ಟ್ ಆವರಣದಲ್ಲಿ ಸತ್ರ ನ್ಯಾಯದೀಶರಾಧ ಮಲ್ಲಿಕಾರ್ಜುನ ಗೌಡ ಪಾಟೀಲ್ ರವರು ತಾವೊಬ್ಬ ನ್ಯಾಯದೀಶನೆಂಬುದು ಮರೆತು ಒಬ್ಬ ಅನಾಗರಿಕನ ತರ ಬಾಬಾಸಾಹೇಬ್ ಅಂಬೇಡ್ಕರ್ ರವರ ಬಾವ ಚಿತ್ರವನ್ನು ತೆರವುಗೊಳಿಸಿ ಅಂಬೇಡ್ಕರ್ ರವರನ್ನು ಅವಮಾನ ಪಡಿಸಿದ್ದು ಅಕ್ಷಮ್ಯ ಅಪರಾಧ, ಇದು ದೇಶಕ್ಕೂ ಮತ್ತು ಶ್ರೇಷ್ಠ ಬಾರತ ಗ್ರಂಥವಾದ ಸಂವಿಧಾನಕ್ಕೂ ಹಾಗೂ ಪ್ರಜಾ ಪ್ರಭುತ್ವಕ್ಕೆ ಮಾಡಿದ ಬಹುದೊಡ್ಡ ಅಪಮಾನ ಕೂಡ ಹೌದು, ಇದು ಎಂದಿಗೂ ಮಾಸದೇ ಉಳಿಯುವಂತದ್ದಾಗಿದೆ. ಪ್ರಕರಣ ನಡೆದು 2 ತಿಂಗಳು ಪೂರ್ತಿ ಮುಗಿದರು ಇಲ್ಲಿಯವರೆಗೂ ಅವರನ್ನು ವಜಾಗೊಳಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಸರಿಯಾದ ಶಿಕ್ಷೆಗೆ ಒಳಪಡಿಸದೆ ಕೇವಲ ವರ್ಗಾವಣೆ ಮಾಡಿ ಅವರನ್ನು ಬಚಾವ್ ಮಾಡುವ ಪ್ರಯತ್ನ ಮಾಡಿದೆ ನಮ್ಮ ರಾಜ್ಯ ಸರ್ಕಾರ

ಇಡೀ ವಿಶ್ವವೇ ಗೌರವಿಸುತ್ತಿರುವ ಅ ವಿಶ್ವಮಾನವರನ್ನು ಈ ರೀತಿ ಅವಮಾನ ಗೊಳಿಸಿದ್ದನ್ನು ಖಂಡಿಸಿ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡನಿಗೆ ಶಿಕ್ಷೆ ಅಗಲೇಬೇಕೆಂದು.3ನೇ ಹಂತದ ಹೋರಾಟಕ್ಕೆ ನಮ್ಮ ಕರ್ನಾಟಕ ರಿಪಬ್ಲಿಕನ್ ಸೇನಾ ಮತ್ತು ಮೂಲ ನಿವಾಸಿ ಮಹಾ ಒಕ್ಕೂಟದ ರಾಜ್ಯ ಸಮಿತಿಗಳು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸುವ ಹೋರಾಟ ಹಮ್ಮಿಕೊಂಡಿರುವ ಕಾರಣ ರಾಜ್ಯ ಸಮಿತಿಯವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಸ್ಥಳೀಯ ದಲಿತಪರ ಹಾಗೂ ಇನ್ನಿತರ ಸಂಘಟನೆಗಳ ಸಹಯೋಗದೊಂದಿಗೆ ಮಲ್ಲಿಕಾರ್ಜುನ ಗೌಡನಿಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಸೇವೆಯಿಂದ ಸಂಪೂರ್ಣ ವಜಾಮಾಡಲು ಅಗ್ರಹಿಸುತ್ತೇವೆ ಎಂದು ಹೇಳಿದರು

ಈ ಸಂಧರ್ಭದಲ್ಲಿ ರಾಜ್ಯಾಧ್ಯಕ್ಷ ಜಿಗಣಿ ಶಂಕರ್, ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಸಿ. ಹೊನ್ನೆಳಪ್ಪ, ಸಂಡೂರು ತಾಲೂಕು ಅಧ್ಯಕ್ಷರಾದ ಕಿರುನಾಯ್ಕ್ ಮತ್ತು ಜಿಲ್ಲಾ ಪರಿಸರ ಸಂರಕ್ಷಣ ವೇಧಿಕೆ ಸಂಡೂರು, ಡಾ.ಬಿ ಆರ್, ಅಂಬೇಡ್ಕರ್ ಸಂಘ ಸಂಡೂರು, ರೈತಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಗಣಿ ಕಾರ್ಮಿಕರ ಸಂಘ ಸಂಡೂರು, ಡಿ ಎಸ್ ಎಸ್ ಸಂಡೂರು, ಚಲವಾಧಿ ಮಹಾಸಭಾ ಸಂಡೂರು, ಸಂಘಟನೆಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here