‘ದುಬಾರಿ ರೊಕ್ಕಾಕೊಟ್ಟು ಲೆಕ್ಕ ಹೇಳಾಕ ಬರಲಾರದಂತ ಶಾಲೆಗೆ ಕಳಿಸೋ ಬದಲು, ಸರ್ಕಾರಿ ಕೆಪಿಎಸ್ ಶಾಲೆಗೆ ಮಕ್ಕಳನ್ನು ಸೇರಿಸಿ’; ಡಾ.ಐ.ಅರ್.ಅಕ್ಕಿ

0
246

ಸಂಡೂರು/ಬಂಡ್ರಿ:08:ಎ:-ತಾಲೂಕಿನ ಬಂಡ್ರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ (ಕೆಪಿಎಸ್) ಎಲ್.ಕೆ.ಜಿ ಹಾಗೂ ಯು.ಕೆ.ಜಿ ಮಕ್ಕಳಿಗೆ ಆಹಾರ ಪದಾರ್ಥಗಳ ಕಿಟ್ ಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಿಇಓ ಡಾ.ಐ.ಅರ್. ಅಕ್ಕಿಯವರು ವಿತರಣೆ ಮಾಡಿದರು.

ಆಹಾರ ಪಧಾರ್ಥಗಳ ಕಿಟ್ ವಿತರಿಸಿ ಮಾತನಾಡಿ.. ಶಿಕ್ಷಣ ಪ್ರೇಮಿ, ಜನಪ್ರಿಯ ಶಾಸಕರಾದ ತುಕರಾಮ್ ರವರ ದೂರದೃಷ್ಟಿಯ ಫಲವಾಗಿ ಬಂಡ್ರಿ ಗ್ರಾಮಕ್ಕೆ ಕೆಪಿಎಸ್ ಶಾಲೆ ಬರುವಂತಾಯಿತು,ಈ ಬಾಗದ ಮಕ್ಕಳೆಲ್ಲಾ ಶಿಕ್ಷಣದಲ್ಲಿ ಬಹಳ ಹಿಂದುಳಿದಿರುವುದೇ ಮುಖ್ಯ ಕಾರಣ.
“ದುಬಾರಿ ರೊಕ್ಕ ಕೊಟ್ಟು ಲೆಕ್ಕಾ ಹೇಳಕಾ ಬರಲಾರದಂತ ಶಾಲೆಗೆ ಹೋಗಿ ಕಷ್ಟಪಟ್ಟರು ಏನೂ ಕಲಿಯದೇ ಕೊರಗುವ ಬದಲು, ಏನನ್ನೂ ತೆಗೆದುಕೊಳ್ಳದೇ ಎಲ್ಲವನ್ನೂ ಉಚಿತವಾಗಿ ಕಲಿಸುವ ಸರ್ಕಾರಿ ಕೆಪಿಎಸ್ ಶಾಲೆಗೆ ನಿಮ್ಮ ಮಕ್ಕಳನ್ನು ಸೇರಿಸಿ, ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳ ಮಕ್ಕಳಿಗೆ ಮಧ್ಯಾಹ್ನದ ಉಪಹಾರ ಹಾಗೂ ಕ್ಷೀರಬಾಗ್ಯ ಯೋಜನೆಯಡಿ ಕೆಪಿಎಸ್ ಶಾಲೆಯ 60 ಜನ ಪುಟ್ಟ ಮಕ್ಕಳಿಗೆ 111 ದಿನಗಳ ಕೋವಿಡ್-19ರ ಹಿನ್ನೆಲೆಯಲ್ಲಿ ಶಾಲೆಗಳು ತೆರೆಯದೆ ಇರುವ ಪ್ರಯುಕ್ತ ಈ ಅವಧಿಯಲ್ಲಿ ಸರ್ಕಾರವು ಮಧ್ಯಾಹ್ನ ಬಿಸಿಯೂಟದ ಬದಲಿಗೆ ಆಹಾರ ಭದ್ರತೆ ಕಾಯ್ದೆ 2013ರಂತೆ ನಿಗದಿತ ಪ್ರಮಾಣದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಪಧಾರ್ಥಗಳನ್ನು ವಿತರಿಸುತ್ತಿದ್ದು,ಈ ನಿಟ್ಟಿನಲ್ಲಿ ಪ್ರತಿ ವಿದ್ಯಾರ್ಥಿಗೆ ಲಭ್ಯವಾಗುವ 850.98 ರೂಗಳನ್ನು ನೀಡಿದ್ದು, ತುಪ್ಪ-ಒಂದು ಕೆ.ಜಿ, ಇನ್ನುಳಿದಂತೆ ಶೇಂಗಾ ಬೀಜ, ಬೆಲ್ಲ , ತೊಗರಿಬೇಳೆ, ಹೆಸರುಕಾಳು- 1ಕೆ.ಜಿ ಗಳಂತೆ ಆಹಾರದ ಪಧಾರ್ಥಗಳನ್ನು ನೀಡಿದೆ, ಪೋಷಕರು ತಮ್ಮ ಮಗುವನ್ನು ಶಾಲೆಗೆ ಸೇರಿಸಿದರೆ ಅಷ್ಟೆ ಸಾಲದು. ನಿರಂತರವಾಗಿ ಮಗುವಿನ ಚಟುವಟಿಕೆ, ಕಲಿಕೆ ಅಭಿವೃದ್ಧಿ ವಿಷಯಗಳಲ್ಲಿ ಗಮನಹರಿಸಬೇಕು. ಅವರೊಂದಿಗೆ ಕಲಿತ ಪಾಠಗಳ ಬಗ್ಗೆ ಪ್ರತಿಕ್ರಿಯೆಗಳನ್ನು ಕೇಳಬೇಕು.
ಆಗಾಗ ಶಾಲಾ ಶಿಕ್ಷಕರನ್ನು ಭೇಟಿ ಮಾಡಿ ಮಕ್ಕಳ ಪ್ರೋಗ್ರೆಸ್‌ ಬಗ್ಗೆ ವಿಚಾರಣೆ ಮಾಡಬೇಕು. ಅವರ ಚಟುವಟಿಕೆಗಳು, ಕ್ರೀಡೆಗಳ ಆಸಕ್ತಿ, ಗುಣ ಹೀಗೆ ಹತ್ತು ಹಲವು ವಿಷಯಗಳನ್ನು ಕೇಳಿ ತಿಳಿಯಬೇಕು. ಹೀಗೆ ಮಾಡುವುದರಿಂದ ಅವರು ತಮ್ಮ ಶಾಲಾ ಹಂತದಲ್ಲಿ ಯಶಸ್ವಿಯಾಗಲು ಸಹಾಯ ಮಾಡಬಹುದು ಎಂದು ತಿಳಿಸಿದರು

ಮಧ್ಯಾನ್ಹ ಬಿಸಿಯೂಟದ ಅಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ..
ಸಣ್ಣ ಮಕ್ಕಳ ಮನೆಪಾಠವು ಅವರ ಓದಿರುವುದನ್ನು ಬಲಪಡಿಸಲು ಮತ್ತು ಹೆಚ್ಚಿಸಲು ಸಹಕಾರಿಯಾಗುತ್ತದೆ. ಇದು ಅವರಲ್ಲಿ ಶಾಲೆಯ ಹೊರತಾದ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಮಕ್ಕಳಿಗೆ ಮನೆಪಾಠವು ಮೊದಲ ಆದ್ಯತೆಯಂದು ತಿಳಿಸಿ ಹೇಳುವುದರ ಜೊತೆಗೆ ಓದಿನ ಪರಿಸರವನ್ನು ಸೃಷ್ಟಿಸಬೇಕು. ಮನೆಪಾಠಕ್ಕೆ ಬೇಕಾದ ಸಲಕರಣೆಗಳನ್ನು ಒದಗಿಸಬೇಕು ಮತ್ತು ಅದಕ್ಕೆ ತೊಂದರೆಯಾಗುವ ವಿಷಯಗಳನ್ನು ತಪ್ಪಿಸಬೇಕು ಉದಾಹರಣೆಗೆ ಟಿವಿ ನೋಡುವುದನ್ನು ತಡೆಯುವುದು. ಸುಮಾರು ಹತ್ತು ನಿಮಿಷಗಳ ಕಾಲ ಸಣ್ಣ ಮಕ್ಕಳ ಮನೆಪಾಠಕ್ಕೆ ಸಾಕಾಗುತ್ತೆ ಮತ್ತು ನಾಲ್ಕನೇ ತರಗತಿಯ ನಂತರದ ವಿದ್ಯಾರ್ಥಿಗಳಿಗೆ ನಲವತ್ತು ನಿಮಿಷಗಳು ವ್ಯಯಿಸಿದರೆ ಸಾಕು. ಮಕ್ಕಳು ಮನೆಪಾಠ ಮಾಡುವಾಗ ಶಾಲೆಯಲ್ಲಿ ಕೊಟ್ಟಿರುವ ಅಸೈನ್ಮೆಂಟ್ ಅರ್ಥ ಮಾಡಿಸಬೇಕು, ಪ್ರಶ್ನೆಗಳಿಗೆ ಉತ್ತರಿಸಲು ಸಹಕಾರ ನೀಡಬೇಕು, ಸಲಹೆ ಸೂಚನೆಗಳನ್ನು ನೀಡಿ
ಆದರೆ ಸರಿಯಾದ ಉತ್ತರ ನೀಡದೆ ಅವರಿಗೆ ಯೋಚಿಸುವಂತೆ ಪ್ರೇರೇಪಿಸಬೇಕು. ತಪ್ಪುಗಳಿಂದ ಕಲಿತಾಗಲೇ ಮಕ್ಕಳಿಗೆ ನೆನಪಿನಲ್ಲಿ ಉಳಿಯುತ್ತದೆ, ಪ್ರತಿಷ್ಠಿತ ಶಾಲೆಗಳಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ಶಾಲೆಗಳಿಗೆ ಸೇರಿಸಬೇಕೆಂದರೆ ಒಂದೂವರೆ ಲಕ್ಷದಿಂದ ಎರಡು ಲಕ್ಷ ರೂಪಾಯಿಗಳವರೆಗೆ ಖರ್ಚಾಗುತ್ತದೆ, ಈ ಸರ್ಕಾರಿ ಶಾಲೆಯಲ್ಲಿ ಎಲ್ಲವೂ ಉಚಿತ ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು

ಶಿಕ್ಷಣಪ್ರೇಮಿ ಮಾಜಿ ಗ್ರಾಪಂ ಸದಸ್ಯ ನಾಗರಾಜ್ ಮಾತನಾಡಿ ಈ ಕೆಪಿಎಸ್ ಶಾಲೆಯು ಬಂಡ್ರಿ ಗ್ರಾಮಕ್ಕೆ ಪರಿಚಯವಾಗಿ ಮೂರು ವರ್ಷ,ಜಗತ್ತಿಗೆ ಪರಿಚಯವಾಗಿ 182 ವರ್ಷ,ಜರ್ಮನ್ ಶಿಕ್ಷಣ ತಜ್ಞ 1840 ರಲ್ಲಿ ಕಿಂಡರ್ ಗಾರ್ಡನ್ ಎಂದು ಹೆಸರಿಸಿದ್ದ ಅದು ಇಂದು ಕೆಪಿಎಸ್ ಎಂದು ಮಾರ್ಪಾಟಾಗಿದೆ
ತನ್ನ ಶಾಲೆಯ ಬಗ್ಗೆ ಮಾತನಾಡಲು ಮಕ್ಕಳಿಗೆ ಸಮಯ ಮೀಸಲಿಡಿ,ಮಗು ಓದುತ್ತಿರುವ ಹೊತ್ತಗೆ ಮತ್ತು ಮಾಡುತ್ತಿರುವ ಕೆಲಸ ತಿಳಿದಿದ್ದರೂ ನಮ್ಮ ಕೆಲಸದ ಒತ್ತಡದಿಂದ ಮಗುವಿನ ಜೊತೆ ಮಾತನಾಡದೆ ಹೋದರೆ ಮಗುವಿನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಕೆಲಸದ ಒತ್ತಡದಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ಮಗುವಿನ ಜೊತೆ ಮಾತನಾಡಿ. ನೀವು ಮಕ್ಕಳ ಶಿಕ್ಷಣದ ಬಗ್ಗೆ ಗಂಭೀರವಾಗಿದ್ದರೆ ಮಕ್ಕಳಿಗೂ ಅದರ ಮೇಲೆ ಗಮನವಿರಿಸಲು ಸಹಕಾರಿಯಾಗುತ್ತದೆ. ಮಗುವಿನ ಮಾತನ್ನ ಗಮನವಿಟ್ಟು ಕೇಳಿ, ಅವರ ಕಣ್ಣನ್ನು ನೋಡಿ ಮಾತನಾಡಿ. ಸುಮ್ಮನೆ ಹೂಂಗುಟ್ಟಬೇಡಿ.
ಈ ಶಾಲಾ ಸಮಯ ಮಕ್ಕಳ ಜೀವನದಲ್ಲಿ ಬಹು ಮುಖ್ಯವಾದದ್ದು. ಇದು ಮಗುವಿನ ಮುಂದಿನ ಶೈಕ್ಷಣಿಕ ಜೀವನದಲ್ಲಿ ಸಹಕಾರಿಯಾಗುತ್ತದೆ.

ಈ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಅರ್.ಅಕ್ಕಿ, ಬಿಸಿಯೂಟ ಯೋಜನಾಧಿಕಾರಿ ತಿಪ್ಪೇಸ್ವಾಮಿ, ಶಿಕ್ಷಣಪ್ರೇಮಿ ಮಾಜಿ ಗ್ರಾಪಂ ಸದಸ್ಯ ಕೆ. ನಾಗರಾಜ್, ಗ್ರಾಪಂ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷೆ, ವಿಶಾಲಾಕ್ಷಿ, ಸದಸ್ಯರಾದ ನಲ್ಲಜರುವಪ್ಪ, ಕರಿಲಿಂಗಪ್ಪ, ಜಯಲಕ್ಷ್ಮಿ, ಮಂಜುಳಾ, ತಾಲೂಕು ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ,ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ಗೋಪಾಲ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಡಿ.ಸಂತಿ, ಪ್ರಾಂಶುಪಾಲ ಯಶವಂತ್, ಮುಖ್ಯಶಿಕ್ಷಕರಾದ ಎಂ.ಡಿ.ನಾಗೇಶ್, ಬಸವರಾಜ್ ಕಂಕ್ರಿ,ದೈ.ಶಿ.ರಾಮಪ್ಪ, ವಿಠ್ಠಲ್,ಶಿಕ್ಷಕಿಯರಾದ ಕೆ. ಉಮಾದೇವಿ, ಈರಮ್ಮ,ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here