ಅಡ್ಡಾದಿಡ್ಡಿ ವಾಹನ ನಿಲುಗಡೆಗೆ ಟ್ರಾಫಿಕ್‌ ಜಾಮ್‌: ಅಧಿಕಾರಿಗಳ ನಿರ್ಲಕ್ಷ್ಯ!!

0
236

ಕೊಟ್ಟೂರು:17:ಏ:ಪೊಲೀಸರ ನಿರ್ಲಕ್ಷ್ಯದಿಂದ ಪಟ್ಟಣದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ವಾಹನಗಳು ಮತ್ತು ಸಾರ್ವಜನಿಕರು ಓಡಾಡಲು ಹರಸಾಹಸ ಪಡುವಂತಾಗಿದೆ. ಪಟ್ಟಣದ ಗಾಂಧಿ ಸರ್ಕಲ್ ಇಂದ ಉಜ್ಜಿನಿ ಸರ್ಕಲ್ ವರೆಗೂ ರಸ್ತೆಗಳಲ್ಲಿ ಬೈಕ್‌ ರಸ್ತೆಯ ಎರಡೂ ಬದಿಗಳಲ್ಲಿ ನಿಲುಗಡೆ ಮಾಡುತ್ತಿದ್ದು, ಇದರಿಂದ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗಿದೆ

ಕ್ರಮ ಕೈಗೊಳ್ಳಿ:
ಪೊಲೀಸ್‌ ಇಲಾಖೆಯವರು ಬಸ್‌ ನಿಲ್ದಾಣದ ಎದುರು ವಾಹನಗಳನ್ನು ಅಡ್ಡ ಹಾಕಿ ದೂರು ದಾಖಲು ಮಾಡುವುದರ ಹಿಡಿದು ದೂರು ದಾಖಲಿಸುವುದರಲ್ಲಿ ನಿರತರಾಗಿದ್ದು, ಟ್ರಾಫಿಕ್‌ ಸಮಸ್ಯೆ ಬಗೆಹರಿಸಲು ಗಮನಹರಿಸುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಟ್ಟುನಿಟ್ಟನ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ವಾಹನ ಸವಾರರು ಹಾಗೂ ಪಾದಚಾರಿಗಳು ಆಗ್ರಹಿಸಿದ್ದಾರೆ.

ಕನ್ನಹಳ್ಳಿ. ಪ್ರಕಾಶ್ ಗೌಡ್ರು ಕೊಟ್ಟೂರು

ಪಾರ್ಕಿಂಗ್‌ನಿಂದ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಹದಗೆಡಲು ಅಧಿಕಾರಿಗಳ ನಿರ್ಲಕ್ಷ ಹಾಗೂ ಸ್ಥಳೀಯ ಪೊಲೀಸರ ತಾತ್ಸಾರವೇ ಪ್ರಮುಖ ಕಾರಣ. ಕಿರಿದಾದ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್‌ ಬೇಕಾಬಿಟ್ಟಿ ವ್ಯವಸ್ಥೆ. ಇದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ನಾಗರೀಕರು ನಿತ್ಯ ಎದುರಿಸುತ್ತಿರುವ ಗೋಳು ಕೇಳುವವರಿಲ್ಲ. ಆದಷ್ಟು ಬೇಗ ಬಗೆಹರಿಸಿ

ಶಿವಕುಮಾರ್ ಗೌಡ್ರು, ಕೊಟ್ಟೂರು

ವರದಿ: ಶಿವರಾಜ್ ಗಡ್ಡಿ

LEAVE A REPLY

Please enter your comment!
Please enter your name here