ಮಕ್ಕಳ ಹಕ್ಕುಗಳ ರಕ್ಷಣೆಗಾಗಿ 1098 ಸಹಾಯವಾಣಿ ಕರೆಮಾಡಿ;ಡಾ.ಗೋಪಾಲ್ ರಾವ್

0
681

ಸಂಡೂರು: ಮೇ:17: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಯಾವುದೇ ಸಮಯದಲ್ಲಾಗಲಿ 1098 ಮಕ್ಕಳ ಸಹಾಯವಾಣಿಗೆ ಕರೆಮಾಡಿ; ಡಾ.ಗೋಪಾಲ್ ರಾವ್ ತಿಳಿಸಿದರು

ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ, “ಮಕ್ಕಳ ಸಹಾಯವಾಣಿ-1098 ದಿನಾಚರಣೆ” ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳ ಅಭಿವೃದ್ಧಿಗೆ ಇರುವ ಎಲ್ಲಾ ಹಕ್ಕುಗಳನ್ನು ದೊರೆಯುವಂತೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ, ಮಕ್ಕಳಿಗೆ ಸಿಗಬೇಕಾದ ವಿದ್ಯಾಭ್ಯಾಸ ಸಿಗುವಂತೆ ಮಾಡುವುದು, ಮಕ್ಕಳು ಗೌರವಯುತವಾಗಿ ಬದುಕುವ ಹಕ್ಕನ್ನು ದೊರಕಿಸಿ ಕೊಡಬೇಕಾದ್ದು ಆದ್ಯ ಕರ್ತವ್ಯವಾಗಿದೆ, ಮಕ್ಕಳನ್ನು ಬಾಲ ಕಾರ್ಮಿಕ ಪದ್ದತಿಗೆ ದೂಡೂವುದು, ಬಾಲ್ಯ ವಿವಾಹ ಮಾಡುವುದು ಅಕ್ಷಮ್ಯ ಅಪರಾಧವಾಗಿದೆ, ಯಾವುದೇ ಮಕ್ಕಳ ಪೋಷಣೆಗೆ ಮತ್ತು ರಕ್ಷಣೆಗೆ ಅವಶ್ಯಕತೆ ಇದೆ ಎಂದು ಗೊತ್ತಾದ ಕೂಡಲೆ ಉಚಿತ ಮಕ್ಕಳ ಸಹಾಯ ವಾಣಿ 1098 ಗೆ ಕರೆಮಾಡಿ ಮಾಹಿತಿ ಮುಟ್ಟಿಸುವ ತಮ್ಮ ಕರ್ತವ್ಯದ ವೈಶಾಲತೆ ಮೆರಯಬೇಕು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಸರ್ಕಾದ ಆದೇಶದಂತೆ ಎಲ್ಲಾ ಕಛೇರಿಗಳಲ್ಲಿ ಇಂದು ಮೇ 17 ರಂದು “ಮಕ್ಕಳ ಸಹಾಯವಾಣಿ-1098 ದಿನಾಚರಣೆ”ಯನ್ನು ಅಚರಿಸಿ ಮಕ್ಕಳ ರಕ್ಷಣೆ ಮಾಡುವ ಪ್ರತಿಜ್ಞೆ ಕೈಗೊಳ್ಳುವಂತೆ ಆದೇಶ ಮಾಡಿದ್ದು ಅದರಂತೆ ಕಾರ್ಯಕ್ರಮವನ್ನು ಆಯೋಜಿಸಿ ಸಾರ್ವಜನಿಕರಿಗೆ ಮಕ್ಕಳ ರಕ್ಷಣೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು, ನಂತರ ಅವರು ಮಕ್ಕಳ ರಕ್ಷಣೆ ಬಗ್ಗೆ ಪ್ರತಿಜ್ಞೆಯನ್ನು ಬೋಧಿಸಿದರು,

ಈ ಕಾರ್ಯಕ್ರಮದಲ್ಲಿ ಸಮುದಾಯ ಅರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್, ಡಾ. ವೆಂಕಟೇಶ್ವರ ರಾವ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಹರ್ಷ,ಶಕೀಲ್ ಅಹ್ಮದ್, ಮಂಜುನಾಥ್,ವೆಂಕಟೇಶ್, ಶಶಿಧರ್,ಚೈತ್ರ, ರೂಪಾ,ಗೀತಾ,ಮಾರೇಶ,ವೆಂಕಪ್ಪ,ಪ್ರಶಾಂತ್,ರೋಜಾ,ಸುಧಾ,ಶಿವಕುಮಾರ್, ಶಿವರಾಜ್, ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here