ವಿದ್ಯಾರ್ಥಿಯ ಮೇಲೆ ಮನಸ್ಸೋ ಇಚ್ಛೆ ಥಳಿಸಿದ ಶಿಕ್ಷಕ : ಶಿಕ್ಷಕನ ವಜಾಕ್ಕೆ ಸ್ಥಳಿಯರ ಅಗ್ರಹ.

0
201

◆ಆರನೇ ತರಗತಿಯ ವಿಧ್ಯಾರ್ಥಿಯ ಮೇಲೆ ದೈಹಿಕ ಶಿಕ್ಷಕನಿಂದ ಹಲ್ಲೆ

◆ಶಿಕ್ಷಕನ ವಜಾಗೆ ಆಗ್ರಹಿಸಿ ಸ್ಥಳಿಯರು ಆಕ್ರೋಶ

ಚಿಕ್ಕಮಗಳೂರು:ಜೂನ್:02:- ಕೊಪ್ಪ ತಾಲೂಕಿನ ಬಂಡೀಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಲೆನೋವಾಗುತ್ತಿದೆ ಎಂದು ಹೇಳಿದ 6ನೇ ತರಗತಿ ವಿದ್ಯಾರ್ಥಿಗೆ ದೈಹಿಕ ಶಿಕ್ಷಣ ಶಿಕ್ಷಕನೊಬ್ಬ ಬಾಸುಂಡೆ ಬರುವಂತೆ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮಕ್ಕಳನ್ನು ಶಿಕ್ಷಿಸುವಂತಿಲ್ಲ ಎಂಬ ಸರ್ಕಾರದ ಆದೇಶ ಮತ್ತು ನಿಯಮಾವಳಿಗಳನ್ನು ಮೀರಿ, ದೈಹಿಕ ಶಿಕ್ಷಣದ ಶಿಕ್ಷಕ ನಾಗರಾಜ್ ಎಂಬುವರು ಶ್ರೇಯಸ್ ಎಂಬ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದ್ದು, ತರಗತಿಯಲ್ಲಿ ಸರಿಯಾಗಿ ಬರೆಯಬೇಕು ಎಂದು ಶ್ರೇಯಸ್ ತಲೆಗೆ ಶಿಕ್ಷಕ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ತಲೆನೋವಾಗುತ್ತಿದೆ ಎಂದು ವಿಧ್ಯಾರ್ಥಿ ಹೇಳಿದ್ದಕ್ಕೆ ಶ್ರೇಯಸ್ ಕಾಲಿಗೆ-ಬೆನ್ನಿಗೆ ಮನಸ್ಸೋ ಇಚ್ಛೆ ಹೊಡೆದರೆನ್ನಲಾಗಿದೆ. ಇದರಿಂದ ಬಾಲಕನ ಬೆನ್ನ ಮೇಲೆ ಬಾಸುಂಡೆ ಬರುವಂತೆ ಹಲ್ಲೆ ನಡೆಸಿದ್ದಾರೆ.

ವಿದ್ಯಾರ್ಥಿ ಎಂಬ ಕರುಣೆ ಇಲ್ಲದೆ ಥಳಿಸಿದ ದೈಹಿಕ ಶಿಕ್ಷಣ ಶಿಕ್ಷಕ ನಾಗರಾಜ್ ವಿರುದ್ಧ ಸ್ಥಳೀಯರು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here