ದಾರಿ ವಿವಾದ ಪರಿಹರಿಸಿದ :ತಹಶೀಲ್ದಾರ್ ಕುಮಾರಸ್ವಾಮಿ ಭೇಟಿ

0
247

ಕೊಟ್ಟೂರು:ಜೂನ್:16:-ತಾಲ್ಲೂಕಿನ ಗಂಗಮ್ಮನಹಳ್ಳಿ ಗ್ರಾಮದ ರೈತರು ಜಮೀನುಗಳಿಗೆ ತೆರಳುವ ರಸ್ತೆ ಸಮಸ್ಯೆಯನ್ನು ಪರಿಹರಿಸುವಂತೆ ಮಾಡಿದ ಮನವಿಗೆ ತಹಶೀಲ್ದಾರ ಎಂ.ಕುಮಾರ್ ಸ್ವಾಮಿ ಸ್ಪಂದಿಸಿ ಗುರುವಾರ ಸಮಸ್ಯೆಯನ್ನು ಪರಿಹರಿಸಿದ್ದಾರೆ.

ಗಂಗಮ್ಮನಹಳ್ಳಿ ಗ್ರಾಮದ ರೈತರು ಭೀಮನಕೆರೆ ರಸ್ತೆ ಕಡೆ ತಮ್ಮ ಜಮೀನುಗಳಿಗೆ ಜಾಗಟಗೆರೆ ಮಾರುತಿ ಇವರ ಜಮೀನಿನಲ್ಲಿದ್ದ ಬಂಡಿದಾರಿಯಲ್ಲಿಇದುವರೆಗೂ ಸಾಗುತ್ತಿದ್ದರು.

ಜಮೀನಿನ ಮಾಲೀಕ ತನ್ನ ಜಮೀನಿನಲ್ಲಿದ್ದ ರಸ್ತೆಯಲ್ಲಿ ಸಂಚರಿಸುತ್ತಿದ್ದವರಿಗೆ ಈಚೆಗೆ ಅಡ್ಡಿಪಡಿಸಿದ್ದಲ್ಲದೇ ದಾರಿಗೆ ಅಡ್ಡ ಮಣ್ಣು ಹಾಕಿಸಿದ್ದಾರೆ. ರೈತರು ತಮ್ಮ ಜಮೀನುಗಳಿಗೆ ಸಾಗಲು ರಸ್ತೆ ಇಲ್ಲದೆ ವಿಚಲಿತರಾಗಿ ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸುವಂತೆ ಈಚೆಗೆ ಮನವಿ ಸಲ್ಲಿಸಿದ್ದರು.

ಬಿತ್ತುವ ಸಮಯವಾಗಿರುವುದರಿಂದ ಸಮಸ್ಯೆ ಅರ್ಥಮಾಡಿಕೊಂಡ ತಹಶೀಲ್ದಾರ್ ಗುರುವಾರ ಕಂದಾಯ ನಿರೀಕ್ಷಕ ಎಸ್.ಎಂ. ಹಾಲಸ್ವಾಮಿ, ತಾಲ್ಲೂಕು ಭೂಮಾಕರೊಂದಿಗೆ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಈಗಿರುವ ರಸ್ತೆ ಕಾನೂನು ಬದ್ಧವಾದದ್ದು ಎಂದು ರೈತರಿಗೆ ವಿವರಿಸಿ ಸಮಸ್ಯೆ ಪರಿಹರಿಸಿದ್ದಾರೆ.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ಭರಮಣ್ಣ, ಪ್ರಕಾಶ್,ಚೌಡಪ್ಪ, ಬಸಪ್ಪ, ರಾಮಪ್ಪ,ಹಾಗೂ ಗ್ರಾಮಸ್ಥರು ಇದ್ದರು.

ಕೊಟ್ಟೂರು ತಾಲ್ಲೂಕಿನ ಗಂಗಮ್ಮನಹಳ್ಳಿ ಗ್ರಾಮದಲ್ಲಿ ರಸ್ತೆ ಸಮಸ್ಯೆಯನ್ನು ತಹಶೀಲ್ದಾರ್ ಎಂ.ಕುಮಾರಸ್ವಾಮಿ ಪರಿಹರಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here