ರಸ್ತೆ ಸುರಕ್ಷತಾ ಮಾಸಾಚರಣೆ : ಹೆಲ್ಮೆಟ್ ಜಾಗೃತಿ ಜಾಥಾ

0
94

ಬಳ್ಳಾರಿ,ಫೆ.08 : ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ಜಿಲ್ಲಾ ಪೊಲೀಸ್ ಮತ್ತು ಸಂಜೀವಿನಿ ಬಳ್ಳಾರಿ ಚಾರಿಟಬಲ್ ಟ್ರಸ್ಟ್, ಫಿಸ್ಟನ್ ಬುಲ್ ರೈಡರ್ಸ್ ಸಂಯಕ್ತಾಶ್ರಯದಲ್ಲಿ ನಗರದಲ್ಲಿ ಸೋಮವಾರ ಹೆಲ್ಮೆಟ್ ಜಾಗೃತಿ ಜಾಥಾ ನಡೆಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ಲಾವಣ್ಯ ಅವರು ಮಾತನಾಡಿ ಪ್ರತಿಯೊಬ್ಬರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಸಂಚಾರಿಯನ್ನು ನಿಯಮವನ್ನು ಪಾಲಿಸುವ ಮೂಲಕ ಪೊಲೀಸ್ ಇಲಾಖೆಯ ಜತೆ ಕೈಜೋಡಿಸಿ. ನಿಮ್ಮ ಮತ್ತು ನಿಮ್ಮ ಕುಟುಂಬದ ಸುರಕ್ಷತೆಗಾಗಿ ತಪ್ಪದೇ ಹೆಲ್ಮೆಟ್ ಧರಿಸಿ. ಯಾವುದೇ ನಿರ್ಲಕ್ಷ್ಯ ವಹಿಸಬೇಡಿ ಎಂದು ಅವರು ತಿಳಿಸಿದರು.
ಇಂತಹ ಅಪರೂಪದ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಎಎಸ್ಪಿ ಲಾವಣ್ಯ ಅವರನ್ನು ಸಂಜೀವಿನಿ ಟ್ರಸ್ಟ್‍ನ ಸದಸ್ಯರನ್ನು ಶ್ಲಾಘಿಸಿದರು.
ಸಂಜೀವಿನಿ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಪ್ರಭಂಜನ ಕುಮಾರ್ ಎಂ, ಅವರು ಮಾತನಾಡಿ, ಶೇ.70ರಷ್ಟು ಜನರು ಹೆಲ್ಮೆಟ್ ಧರಿಸದಿರುವುದರಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅವರಿಂದ ಇಡೀ ಕುಟುಂಬ ಅನಾಥವಾಗುತ್ತಿದೆ. ಹೆಲ್ಮೆಟ್ ಧರಿಸುವುದರಿಂದ ಅನೇಕರ ಪ್ರಾಣಗಳನ್ನು ಉಳಿಸಬಹುದು. ಈ ನಿಟ್ಟಿನಲ್ಲಿ ಹೆಲ್ಮೆಟ್ ವಿತರನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ನಗರದ ಕನಕ ದುರ್ಗಮ್ಮ ದೇವಸ್ಥಾನದಿಂದ ಆರಂಭವಾದ ಹೆಲ್ಮೆಟ್ ಜಾಗೃತಿ ಜಾಥಾದಲ್ಲಿ 300ಕ್ಕೂ ಹೆಚ್ಚು ಬೈಕ್‍ಗಳಲ್ಲಿ ಸವಾರರು ಹೆಲ್ಮೆಟ್ ಧರಿಸಿ ಜಾಥಾದಲ್ಲಿ ಪಾಲ್ಗೊಂಡಿದ್ದರು. ಜಾಥಾ ಸಮಯದಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ ಮಾಡುತ್ತಿದ್ದವರನ್ನು ತಡೆದು ಹೆಲ್ಮೆಟ್ ಧರಿಸದೆ, ಅಪಘಾತವಾದಾಗ ಆಗುವ ಅನಾಹುತಗಳ ಕುರಿತು ಸವಾರರಿಗೆ ಅರಿವು ಮೂಡಿಸಲಾಯಿತು.
ಕನಕ ದುರ್ಗಮ್ಮ ದೇವಿ ಆವರಣದಿಂದ ಶುರುವಾದ ಜಾಥಾವು ರಾಯಲ್ ವೃತ್ತ, ಬ್ರೂಸ್ ಪೇಟೆ ಪೊಲೀಸ್ ಠಾಣೆ, ಎಪಿಎಂಸಿ ಮುಂಭಾಗ, ಹೆಚ್.ಆರ್.ಗವಿಯಪ್ಪ ವೃತ್ತ, ಫಸ್ಟ್ ಗೇಟ್, ಕೌಲ್ ಬಜಾರ್, ವಾಲ್ಮೀಕಿ ವೃತ್ತ, ಮುಖಾಂತರ ಕೊನೆಗೆ ದುರ್ಗಮ್ಮ ದೇವಸ್ಥಾನದ ಹತ್ತಿರ ಜಾಥಾ ಕೊನೆಗೊಂಡಿತು.
ನಗರದ ರಾಯಲ್ ವೃತ್ತದಲ್ಲಿ ಸಂಜೀವಿನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ 1000 ಹೆಲ್ಮೆಟ್‍ಗಳನ್ನು ವಿತರಿಸಲಾಯಿತು. ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವವರಿಗೆ ಗುಲಾಬಿ ಹೂವನ್ನು ನೀಡಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಡಿವೈಎಸ್ಪಿ ರಮೇಶ್‍ಗಳಾದ ಹೆಚ್.ಎಂ.ಡಿ ಸರ್ದಾರ್, ಸತ್ಯ ನಾರಾಯಣರಾವ್, ಕುಮಾರ್, ಮಹದೇವ್, ಮುಜಿಬ್, ವೇಣು ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here