ಸಂಡೂರು ತಾಲೂಕಿನ ಹಲವು ಪಂಚಾಯತಿಗಳಲ್ಲಿ ಕೋವಿಡ್ ವ್ಯಾಕ್ಸಿನ್ ಕುರಿತು ಜಾಗೃತಿ.

0
137

ಅಜೀಮ್ ಪ್ರೇಮ್ ಜೀ ಫೌಂಡೇಷನ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ ಮತ್ತು ವಿಜಯನಗರ ಇವರ ಸಂಯುಕ್ತ ಆಶ್ರಯದಲ್ಲಿ ಕೋವಿಡ್ ವ್ಯಾಕ್ಸಿನ್ ಮತ್ತು ಕೋವಿಡ್ ತಾಲೂಕಿನಾಧ್ಯಾಂತ ಪ್ರಚಾರ ಆಂದೋಲವನ್ನು ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ತೋರಣಗಲ್ಲು, ಕುರೆಕುಪ್ಪ, ಚೋರನೂರು ಸೇರಿದಂತೆ ಹಲವು ಗ್ರಾಮ ಪಂಚಾಯಿತಿ ಗಳಲ್ಲಿ ಕೋವಿಡ್ ವ್ಯಾಕ್ಸಿನ್ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು

ತೋರಣಗಲ್ಲು ಗ್ರಾಮದಲ್ಲಿ ಜಾಗೃತಿ ವಾಹನಕ್ಕೆ ಗ್ರಾಮದ ಮುಖಂಡರಾದ
ಶ್ರೀ ಕಟ್ಟೆಪ್ಪ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ‌ ಕುಶಾಲ್ ರಾಜ್, ಮತ್ತು ಅಡಳಿತ ವೈದ್ಯಾಧಿಕಾರಿಗಳಾದ ಡಾ.ಗೋಪಾಲ್ ರಾವ್ ಅವರು ಚಾಲನೆ ನೀಡಿದರು,

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಬರಮಾಡಿಕೊಂಡು ಸ್ವಾಗತ ಕೋರಿ ಹದಿನೈದು ದಿನಗಳು ತಾಲೂಕಿನ ಪ್ರತಿ ಹಳ್ಳಿಗೂ ಬೇಟಿಕೊಟ್ಟು ವಾಹನದ ಮೂಲಕ ಜನರಿಗೆ ಕೋವಿಡ್ ಲಸಿಕೆ ಬಗ್ಗೆ ಮತ್ತು ಕೋವಿಡ್ ಮೂರನೆ ಅಲೆಯಲ್ಲಿ ಕೈಗೊಳ್ಳ ಬೇಕಾದ ಮುಂಜಾಗ್ರತೆಗಳ ಬಗ್ಗೆ ವಿವರಿಸಿದರು,

ಜಿಲ್ಲಾ ಶಿಕ್ಷಣಾಧಿಕಾರಿಗಳಾದ ಈಶ್ವರ್ ದಾಸಪ್ಪನವರ್ ಜಾಗೃತಿ ಜಾಥದ ಉದ್ದೇಶಗಳನ್ನು ವಿವರಿಸಿದರು, ಹಾಗೇ ಅಜೀಮ್ ಪ್ರೇಮ್ ಜೀ ಪೌಂಡೇಷನ್ ಅವರ ಕೊಡುಗೆಗೆ ಆರೋಗ್ಯ ಇಲಾಖೆ ಕೃತಜ್ಞತೆಯನ್ನು ಅರ್ಪಿಸಿದರು,ತಾಲೂಕು ಆರೋಗ್ಯಾಧಿಕಾರಿ ಡಾ.ಕುಶಾಲ್ ರಾಜ್ ಅವರು ಮಾತನಾಡಿ ಜಾಗೃತಿ ಆಂದೋಲನಕ್ಕೆ ತಾಲೂಕುವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಪ್ರತಿ ಹಳ್ಳಿಗೂ ಅರಿವು ಮೂಡಿಸುವ ಕಾರ್ಯವನ್ನು ಯಶಸ್ವಿ ಗೊಳಿಸುವುದಾಗಿ ತಿಳಿಸಿದರು,

ಡಾ.ಕುಶಾಲ್ ರಾಜ್,ಡಾ.ಗೋಪಾಲ್ ರಾವ್, ಡಾ.ನವೀನ್ ಕುಮಾರ್,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್,ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,ಡಾ. ಫರಾನಾ ಅಹಮದ್, ಡಾ. ದೀಪಾ ಪಾಟೀಲ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್ ಅಹಮದ್, ಮಂಜುನಾಥ್, ಶಶಿಧರ,ನಿಜಾಮುದ್ದೀನ್,ಆಶಾ ಕಾರ್ಯಕರ್ತೆಯರಾದ ನಿಲಮ್ಮ, ಎರ್ರಮ್ಮ, ಮೇಘನಾ, ಸವಿತ, ವಿಜಯಲಕ್ಷ್ಮಿ, ಇತರರು ಇದ್ದರು

LEAVE A REPLY

Please enter your comment!
Please enter your name here