ಸಂಕ್ರಾಂತಿಗೆ ಬಿಡುಗಡೆಯಾಗಲಿದೆ ಡಾರ್ಲಿಂಗ್​ ಪ್ರಭಾಸ್ ರವರ ಬಹುನಿರೀಕ್ಷಿತ ಚಿತ್ರರಾಧೆ ಶ್ಯಾಮ್

0
626

ಪ್ಯಾನ್ ಇಂಡಿಯಾ ಸ್ಟಾರ್ ಆದ ಡಾರ್ಲಿಂಗ್ ಪ್ರಭಾಸ್ ಬಾಹುಬಲಿ ಚಿತ್ರದ ನಂತರ ಹಲವಾರು ಸಿನಿಮಾಗಳ ಶೂಟಿಂಗ್‍ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಆದಿಪುರುಷ್, ಸಲಾರ್, ಇನ್ನೂ ಹೆಸರಿಡದ ಪ್ರಾಜೆಕ್ಟ್-ಕೆ, ರಾಧೆ ಶ್ಯಾಮ್ ಸಿನಿಮಾಗಳ ಶೂಟಿಂಗ್‍ಗಳಲ್ಲಿ ತೊಡಗಿಕೊಂಡಿದ್ದು, ಆದಿಪುರುಷ್ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ಪ್ರಭಾಸ್​ ನಾಯಕರಾಗಿ ಕಾಣಿಸಿಕೊಂಡಿರುವ ರಾಧೆ ಶ್ಯಾಮ್ ಸಿನಿಮಾದ ಚಿತ್ರೀಕರಣ ಗುರುವಾರ (ಜುಲೈ 29) ಮುಕ್ತಾಯವಾಗಿದೆ. ಈ ಸಿನಿಮಾದ ಶೂಟಿಂಗ್‍ 2018ರಲ್ಲಿಯೇ ಪ್ರಾರಂಭಿಸಲಾಗಿತ್ತು. ಆದರೆ, ವಿಎಫ್‍ಎಕ್ಸ್ ಕೆಲಸ, ಸೆಟ್ ನಿರ್ಮಾಣ ಮತ್ತು ಕೊರೋನಾ ವೈರಸ್ ಲಾಕ್‍ಡೌನ್‍ಗಳಿಂದಾಗಿ ಚಿತ್ರೀಕರಣವು ವಿಳಂಬವಾಗಿದ್ದು, ಶೂಟಿಂಗ್ ಮುಗಿಸಲು 3 ವರ್ಷ ತೆಗೆದುಕೊಂಡಿತು. ತಯಾರಕರು ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಿಸುವ ನಿರೀಕ್ಷೆಯಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಅಂದರೆ 2022ರ ಜನವರಿಯಲ್ಲಿ ಈ ಸಿನಿಮಾವನ್ನು ಪ್ರೇಕ್ಷಕರು ತೆರೆಗಪ್ಪಳಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗಿತ್ತು.

ಈಗ ರಾಧೆ ಶ್ಯಾಮ್​ ಚಿತ್ರತಂಡ ಸಿನಿಮಾ ರಿಲೀಸ್​ ದಿನಾಂಕದ ಬಗ್ಗೆ ಅಪ್ಡೇಟ್​ ಕೊಟ್ಟಿದೆ. ಹೌದು, ಇತ್ತೀಚೆಗಷ್ಟೆ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿರುವ ತಂಡ ಈಗ ರಿಲೀಸ್ ದಿನಾಂಕ ಪ್ರಕಟಿಸಿದೆ. ರಾಧೆ ಶ್ಯಾಮ್ ಸಿನಿಮಾದ ನಿರ್ದೇಶಕರಾದ ರಾಧಾ ಕೃಷ್ಣ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಿಡುಗಡೆ ದಿನಾಂಕದ ಕುರಿತಾಗಿ ಹಂಚಿಕೊಂಡಿದ್ದಾರೆ.


ರಾಧೆ ಶ್ಯಾಮ್ ಸಿನಿಮಾದ ಕೊನೆಯ ಶೆಡ್ಯೂಲ್ ಮುಕ್ತಾಯವಾಗಿದೆ. ನನ್ನ ಪ್ರೀತಿಯ ಅಭಿಮಾನಿಗಳಿಗೆ ನಾನು ಅಭಾರಿ. ಕೊರೋನಾ ವೈರಸ್ ನಮ್ಮೆಲ್ಲರ ನಿರೀಕ್ಷೆಗಳನ್ನು ಹುಸಿಯಾಗಿಸಿತು. ನಾವು ಇದರ ಬಗ್ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿ ಹಂಚಿಕೊಳ್ಳುವೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಸಿನಿಮಾ 1970ರ ಯುರೋಪ್‍ ಹಿನ್ನೆಲೆಯನ್ನು ಹೊಂದಿದೆ. ನಾಯಕಿಯಾಗಿ ಪೂಜಾ ಹೆಗ್ಡೆ, ಸಚಿನ್ ಖೇದೆಕರ್, ಪ್ರಿಯದರ್ಶಿನಿ ಪುಲಿಕೊಂಡ, ಭಾಗ್ಯಶ್ರೀ, ಮುರಳಿ ಶರ್ಮಾ, ಕುನಾಲ್ ರಾಯ್ ಕಪೂರ್, ರಿದ್ದಿ ಕುಮಾರ್, ಸಶಾ ಚೆತ್ರಿ, ಸತ್ಯನ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ಪೂಜಾ ಹೆಗ್ಡೆ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ.


ಸಂಗೀತ ಸಂಯೋಜನೆಯನ್ನು ಜಸ್ಟಿನ್ ಪ್ರಭಾಕರನ್ ನಿರ್ವಹಿಸಿದ್ದಾರೆ, ಮನೋಜ್ ಪರಮಹಂಸ ಛಾಯಾಗ್ರಾಹಕರಾಗಿ ತಮ್ಮ ಕೈ ಚಳಕ ತೋರಿಸಿದ್ದಾರೆ. ಇನ್ನು ರಾಧೆ ಶ್ಯಾಮ್ ಅನ್ನು ವಂಶಿ, ಪ್ರಮೋದ್ ಮತ್ತು ಪ್ರಸಿದ್ಧ ಉಪ್ಪಲಪತಿ ಟಿ ಸಹಯೋಗದಲ್ಲಿ ನಿರ್ಮಿಸಿದ್ದಾರೆ.

ರಾಧೆ ಶ್ಯಾಮ್ ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ನೀಡಿರುವ ಪ್ರಭಾಸ್, ರೊಮ್ಯಾಂಟಿಕ್ ಸಿನಿಮಾ ರಾಧೆ ಶ್ಯಾಮ್ ವೀಕ್ಷಿಸಲು ನಿಮ್ಮನ್ನು ಇನ್ನು ಕಾಯಿಸುವುದಿಲ್ಲ. ಜನವರಿ 14ರ ಮಕರ ಸಂಕ್ರಾಂತಿಯಂದು ತೆರೆ ಕಾಣಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು, ಪ್ರಭಾಸ್ ಪ್ರಾಜೆಕ್ಟ್ ಕೆ ಸಿನಿಮಾಗೆ ಸುಮಾರು 200 ದಿನಗಳ ಕಾಲ್‍ಶೀಟ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಮಿತಾಬ್ ಬಚ್ಚನ್, ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಬಾಹುಬಲಿ ನಂತರ ಹೆಚ್ಚುದಿನಗಳ ಕಾಲ ಕಾಲ್‍ಶೀಟ್ ನೀಡಿದ ಸಿನಿಮಾ ಇದಾಗಿದೆ. ಪ್ರಭಾಸ್. ‘ಮಿರ್ಚಿ’ ಯಶಸ್ಸಿನ ನಂತರ 2013ರಿಂದ 2017ರವರೆಗಿನ ಸಮಯವನ್ನು ‘ಬಾಹುಬಲಿ’ ಪಾರ್ಟ್ 1 ಮತ್ತು ಪಾರ್ಟ್ 2 ಸಿನಿಮಾಗಳಿಗಾಗಿಯೇ ಮೀಸಲಿಟ್ಟಿದ್ದರು. ಇದೀಗ ಪ್ರಾಜೆಕ್ಟ್ ಕೆ ಸಿನಿಮಾಕ್ಕೂ 200 ದಿನ ನೀಡುತ್ತಿದ್ದಾರೆ. ಇದರ ಜೊತೆಗೆ ಸಲಾರ್ ಚಿತ್ರದ ಶೂಟಿಂಗ್​ಗೂ ಡೇಟ್ಸ್​ ಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here