ಸಿಂಧನೂರು ನಗರದಲ್ಲಿ 500ಹೂವಿನ ಗಿಡ ನೆಡುವ ಕಾರ್ಯ: ಶಾಸಕ ನಾಡಗೌಡರಿಂದ ಚಾಲನೆ

0
87

ಸಿಂಧನೂರು ನಗರ ಸೇರಿದಂತೆ ಗ್ರಾಮಾಂತರದಲ್ಲಿ ಮೂರುಸಾವಿರ ಗಿಡಗಳನ್ನು ನೆಡುತ್ತಿರುವ ವೆಂಕಟೇಶ್ವರ ಆಗ್ರೋಸ್ ಮಾಲೀಕರಾದ ಶ್ರೀ ನೆಕ್ಕುಂಟಿ ಸುರೇಶ್ ಮತ್ತು ತಂಡ, ಹಾಗೂ ನೇತ್ರ ತಜ್ಞ ಡಾ ಚನ್ನನಗೌಡ ಪಾಟೀಲ್ ಮತ್ತು ಬಳಗ, ನಗರಸಭೆ ಸದಸ್ಯರಾದ ಶ್ರೀ ದಾಸರಿ ಸತ್ಯನಾರಾಯಣರಾವ್ ಮತ್ತು ಅಭಿಮಾನಿಗಳು ಹಲವು ಪರಿಸರ ಪ್ರೇಮಿಗಳು ಈಗ ನಗರದ ವೆಂಕಟೇಶ್ವರ ನಗರ ಹಾಗೂ ಆದರ್ಶ ಕಾಲೋನಿಯಲ್ಲಿ ಸುಮಾರು 500 ಹೂವಿನ ಗಿಡಗಳನ್ನು ಹಾಕಿದರು. ಈ ಕಾರ್ಯಕ್ಕೆ ಚಾಲನೆ ನೀಡಿ ಶಾಸಕರಾದ ವೆಂಕಟರಾವ್ ನಾಡಗೌಡರು ಮಾತನಾಡಿದರು.
ನಂತರ ನೆಕ್ಕಂಟಿ ಸುರೇಶ್ ಹಾಗೂ ನಗರಸಭೆ ಸದಸ್ಯರಾದ ದಾಸರಿ ಸತ್ಯನಾರಾಯಣರಾವ್ ಅವರಿಗೆ ಎಲ್ಲರೂ ಸೇರಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಹಲವಾರು ಸಂಘಟನೆಗಳ ಮುಖಂಡರು,ಪರಿಸರ ಪ್ರೇಮಿಗಳು ಇದ್ದರು.

ವರದಿ: ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here