ಕ್ಷಯ ರೋಗವನ್ನು ಮುಕ್ತಗೊಳಿಸಲು ಜನತೆ ಸಂಕಲ್ಪ ಮುಖ್ಯ; ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ. ಇಂದ್ರಾಣಿ

0
96

ಹಾಯ್ ಸಂಡೂರ್,ನ್ಯೂಸ್
ಸಂಡೂರು :ಆ:15. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು ಬರುವುದು ರಾತ್ರಿ ಸಮಯದಲ್ಲಿ ಬೆವರು ಬರುವುದು ಹಸಿವೇ ಇಲ್ಲದೇ ಇರುವುದು ತೂಕ ಕಡಿಮೆಯಾಗುವುದು ಕೆಮ್ಮಿದಾಗ ಕಫದಲ್ಲಿ ರಕ್ತ ಮಿಶ್ರಿತವಾಗುವುದು ಈ ಲಕ್ಷಣಗಳಿದ್ದಲ್ಲಿ ಸಂಶಯಾಸ್ಪದವಾಗಿ ಟಿ.ಬಿ. ಎಂದೇ ಪರಿಗಣಿಸಬೇಕಾಗಿರುವುದು ಅವಶ್ಯವಿದೆ. ಕಾರಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂತಹ ರೋಗದ ಲಕ್ಷಣಗಳು ಕಂಡು ಬಂದಾಗ ಕೂಡಲೇ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಈ ರೋಗಕ್ಕೆ ಚಿಕಿತ್ಸೆ ಪಡೆಯುವುದು ಅತೀ ಅವಶ್ಯ ಎಂದು ಬಳ್ಳಾರಿ ಜಿಲ್ಲಾ ಕ್ಷಯ ರೋಗ ಅಧಿಕಾರಿ ಡಾ.ಇಂದ್ರಾಣಿಯವರು ತಿಳಿಸಿದರು.
ಅವರು ಬಿ.ಡಿ.ಓ ಕ್ವಾಟರ್ಸ್ ಹಿಂಭಾಗದ ತಾ.ಪಂ.ಯ ಸಾಮರ್ಥ್ಯ ಕೇಂದ್ರದಲ್ಲಿ ಕ್ಷಯ ರೋಗದ ಜಾಗೃತಿ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಅವರು ಮುಂದುವರೆದು ಕ್ಷಯ ರೋಗವನ್ನು ಸೋಲಿಸಿ ಸಂಡೂರನ್ನು ಗೆಲ್ಲಿಸಿ ಎನ್ನುವ ಘೋಷಣೆಯಿಂದ ಕಾರ್ಯಕ್ರಮವನ್ನು ಪ್ರಾರಂಬಿಸಿದರು. ಡಾ. ಕುಶಾಲ್ ರಾಜ್ ಅವರು ಮಾತನಾಡಿ 2ನೇ ಅಲೆಗೆ ಕೋವಿಡ್ ಪಾಸಿಟಿವ್ ಆದ ವ್ಯಕ್ತಿಯನ್ನ ಎ.ಸಿ.ಎಫ್.ನ ಸೇವೆಯಲ್ಲಿ ಸರ್ವೆಯಲ್ಲಿ ಕಫ ಪರೀಕ್ಷೆ ಮಾಡಲು ತಿಳಿಸಿದರಲ್ಲದೇ ಈ ರೋಗ ಮಾರಕವಾಗಿ ಭಯಂಕರವಾಗಿ ಕಾಡುವುದರಿಂದ ಪ್ರತಿಯೊಬ್ಬ ರೋಗಿಯು ಕೂಡ ಜಾಗೃತಿಯಿಂದ ಇರಬೇಕಾದುದು ಅತೀ ಅವಶ್ಯ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ|| ಕುಶಾಲ್ ರಾಜ್ ಟಿ.ಎಚ್.ಒ. ಎನ್.ಜಿ. ಓ ಮಲ್ಲಿಕಾರ್ಜುನ ಕೆ.ಎಚ್.ಪಿ.ಟಿ. ಪುನಿತ ಬಳ್ಳಾರಿ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ಹಾಗೂ ಹಿರಿಯ ಪ್ರಾಥಮಿಕ ಸುರಕ್ಷಾ ಅಧಿಕಾರಿಗಳು ಮತ್ತು ಸಮುದಾಯ ಅಧಿಕಾರಿಗಳು ಜೆ.ಎಸ್.ಡಬ್ಲ್ಯೂ ವೈದ್ಯಾದಿಕಾರಿ ಅನ್ನಪೂರ್ಣಮ್ಮ,ಸಂಡೂರು ತಾಲ್ಲೂಕಿನ ಪ್ರಾಥಮಿಕ ಕೇಂದ್ರದ ಎಲ್ಲಾ ವೈದ್ಯಾಧಿಕಾರಿಗಳು, ಆರೋಗ್ಯ ಕ್ಷೇತ್ತ ಅಧಿಕಾರಿ ಬಂಡೆಗೌಡ, ಸಾಗರ್, ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ:-ರಾಜು ಪಾಳೇಗಾರ್

LEAVE A REPLY

Please enter your comment!
Please enter your name here