ರಣಜಿತ್ ಪುರ ಗ್ರಾಮದ ರೈತರಿಗೆ ಮೋಸ ಮಾಡಿರುವುದು ಬಿ.ಎಮ್.ಎಮ್.ಗಣಿ ಕಂಪನಿ

0
140

ಹಾಯ್ ಸಂಡೂರ್, ನ್ಯೂಸ್
ಸಂಡೂರು :ಆ:15 ತಾಲೂಕಿನ ರಣಜಿತ್ ಪುರ ಗ್ರಾಮದ ಹತ್ತಿರವಿರುವ ಬಿ.ಎಂ.ಎಂ.ಗಣಿ ಕಂಪನಿ ಕಂಪನಿಯು ರೈತರಿಗೆ ಸುಳ್ಳು ಭರವಸೆಗಳನ್ನು ಕೊಟ್ಟು ಜಮೀನು ಖರೀದಿ ಮಾಡಿದ್ದು ರೈತರಿಗೆ ಮೋಸ ಮಾಡಿದೆ ಎಂದು ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎರಿಸ್ವಾಮಿ ಆರೋಪಿಸಿ, ನರಸಿಂಗಾಪುರ ಗ್ರಾಮ ಪಂಚಾಯಿತಿಯ ಗ್ರಾಮಾಭಿವೃದ್ಧಿ ಅಧಿಕಾರಿ ಗುರುಪ್ರಸಾದ್ ಅವರ ಮುಖಾಂತರ ತಹಶೀಲ್ದಾರ್ ಹಾಗೂ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು

ನಂತರ ಮಾತನಾಡಿದ ಅವರು ಬಿ.ಎಂ.ಎಂ.ಗಣಿ ಕಂಪನಿ 2011ರಲ್ಲಿ ಅಕ್ರಮ ಗಣಿಗಾರಿಕೆಯಿಂದಾಗಿ ತನ್ನ ಗಣಿ ಚಟುವಟಿಕೆಗಳನ್ನು ನಿಲ್ಲಿಸಿದ್ದು ಕಂಪನಿಯ ಕಾರ್ಮಿಕರಿಗೆ ಮೂರು ತಿಂಗಳುಗಳಲ್ಲಿ ಕಂಪನಿಯು ಪುನರ್ ಆರಂಭಗೊಳ್ಳುವುದು ಎಂದು ಸುಳ್ಳು ಭರವಸೆ ಕೊಟ್ಟು ನಂಬಿಸಿ ಆರು ತಿಂಗಳ ವೇತನವನ್ನು ನೀಡಿ ಕಾರ್ಮಿಕರನ್ನು ಹೊರಹಾಕಿದ್ದು ಇಲ್ಲಿಗೆ ಹತ್ತು ವರ್ಷಗಳೇ ಕಳೆದರೂ ಕಾರ್ಮಿಕರಿಗೆ ಯಾವುದೇ ರೀತಿಯ ಕೆಲಸವಾಗಲಿ, ಪರಿಹಾರವಾಗಲಿ ನೀಡಿಲ್ಲ ಹಾಗಾಗಿ ಇದ್ದ ಜಮೀನನ್ನು ಕಳೆದುಕೊಂಡು ಕೆಲಸವು ಇಲ್ಲದೆ ಬೀದಿಪಾಲಾದ ನಾವು ಕಂಪನಿಯ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದು ನ್ಯಾಯಾಲಯದ ತೀರ್ಪು ಬರುವವರೆಗೂ ಈ ಕಂಪನಿಗೆ ಯಾವುದೇ ರೀತಿಯ ಎನ್.ಒ.ಸಿ. ನೀಡಬಾರದು ಎಂದರು

ಈ ಸಂದರ್ಭದಲ್ಲಿ ಯಂಕಪ್ಪ. ಬಣವಿಕಲ್. ಕುಮಾರಸ್ವಾಮಿ. ಕಾಡಪ್ಪ ಇನ್ನೂ ಅನೇಕ ಕಾರ್ಮಿಕರು ಉಪಸ್ಥಿತರಿದ್ದರು.

ವರದಿ:-ರಾಜು ಪಾಳೇಗಾರ್

LEAVE A REPLY

Please enter your comment!
Please enter your name here