ಗೊಲ್ಲಲಿಂಗಮ್ಮನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಮಾಸಾಚರಣೆ ಆಚರಣೆ

0
349

ಸಂಡೂರು:ಸೆ:08:-ಸಂಡೂರು ತಾಲೂಕಿನ ಚೋರುನೂರು ಹೋಬಳಿಯ ಗೊಲ್ಲಲಿಂಗಮ್ಮನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ವತಿಯಿಂದ ರಾಷ್ಟ್ರೀಯ ಪೌಷ್ಟಿಕ ಮಾಸಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪೋಷಣ್ ಅಭಿಯಾನದ ತಾಲೂಕು ಕೋ-ಆರ್ಡಿನೇಟರ್ ಗಂಗಾಧರ್ ಮಾತನಾಡಿ,ಗರ್ಭಿಣಿ ಮತ್ತು ತಾಯಂದಿರಿಗೆ ಅಪೌಷ್ಟಿಕತೆ ನಿವಾರಣೆಗೆ ಸಮತೋಲಿತ ಪೌಷ್ಟಿಕ ಆಹಾರ ಸೇವನೆ ಮಾಡುವಂತೆ ತಿಳಿಸಿದರು,ಹಳ್ಳಿಗಳಲ್ಲಿ ದೊರೆಯುವ ಸೊಪ್ಪು,ತರಕಾರಿ, ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವಂತೆ ತಿಳಿಸಿದರು ಮತ್ತು ಆರು ವರ್ಷದೊಳಗಿನ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬರುವುದು ಸಹಜ ಆರು ತಿಂಗಳಿಂದ ಪೌಷ್ಟಿಕ ಆಹಾರ ನೀಡವುದನ್ನು ತಾಯಂದಿರು ಅಭ್ಯಾಸ ಮಾಡಿಕೊಳ್ಳಬೇಕು, ಮನೆಯಲ್ಲಿ ಉತ್ತಮ ಗುಣಮಟ್ಟದ ಪೌಷ್ಟಿಕಾಂಶ ಉಳ್ಳ ಆಹಾರ ತಯಾರಿಸಿ ಮಕ್ಕಳಿಗೆ ಉಣಿಸಬೇಕು, ಪ್ರತಿ ತಿಂಗಳು ಮಕ್ಕಳ ತೂಕ ಮತ್ತು ಎತ್ತರ, ಹಾಗೂ ತೋಳಿನ ಅಳತೆಯನ್ನು ಪರಿಶೀಲನೆ ಮಾಡಿ ಅಪೌಷ್ಟಿಕತೆ ಹೊಂದಿದೆ ಎಂಬುದನ್ನು ಪತ್ತೆಹಚ್ಚಿ ವೈದ್ಯಕೀಯ ತಪಾಸಣೆ ಮಾಡಿಸಿ,ಚಿಕಿತ್ಸೆ ಕೊಡಿಸಲಾಗುತ್ತದೆ, ಅದಾಗ್ಯೂ ಸುಧಾರಣೆ ಕಂಡು ಬರದೇ ಇದ್ದರೆ ಅಂತಹ ಮಕ್ಕಳನ್ನು, ಪೌಷ್ಟಿಕ ಪುನರ್ ಚೇತನ ಕೇಂದ್ರಕ್ಕೆ ದಾಖಲಿಸಿ ಹದಿನಾಲ್ಕು ದಿನಗಳ ಕಾಲ ಆರೈಕೆ ಮಾಡಲಾಗುವುದು ಎಂದು ತಿಳಿಸಿದರು, ನಂತರ ಗ್ರಾಮದಲ್ಲಿ ಜಾಥ ಮೂಲಕ ಜಾಗೃತಿ ಮಾಡಿಸಿದರು.

ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹನುಮಕ್ಕ, ಉಪಾಧ್ಯಕ್ಷ ಪ್ರೇಮ್ ಕುಮಾರ್, ಸದಸ್ಯರಾದ ಶಿವಲಿಂಹಪ್ಪ, ಸಿ.ಹೆಚ್.ಒ ಭುವನೇಶ್ವರಿ, ಅಂಗನವಾಡಿ ಕಾರ್ಯಕರ್ತೆ ಮಮತಾ,ಜಯಮ್ಮ, ಶೋಭಾ, ಮೀನಾ,ಪದ್ಮಾ,ಇಂದುಮತಿ,ಸಾವಿತ್ರಿ, ಆಶಾ ಕಾರ್ಯಕರ್ತೆ ವಿನೋದ, ಯರ್ರಮ್ಮ ಇತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here