ಸಮಾಜ ಸಂಘಟನೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಮಾಜಿ ಸಚಿವ ರಾಮಲಿಂಗ ರೆಡ್ಡಿ.

0
239

ಸಿಂಧನೂರು ನಗರದಲ್ಲಿ ಮೆಡಿಕಲ್ ಕಾಲೇಜು ಮಾಡಿದರೆ ಯಾವದೇ ಸರಕಾರವಿರಲಿ ನನ್ನ ಸಹಕಾರ ಸದಾವಿರುತ್ತದೆ ಸಮಾಜದಿಂದ ಸಂಘಟನೆಯಾದಾಗ ಮಾತ್ರ ಅಭಿವೃದ್ಧಿ ಸಾದ್ಯವೆಂದು ನಗರದ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಅನುಭಾವ ಶ್ರಾವಣ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ಶಾಸಕ ರಾಮಲಿಂಗರೆಡ್ಡಿ ಮಾತನಾಡುತ್ತಾ ಹೈದ್ರಾಬಾದ್ ಕರ್ನಾಟಕದ ಎಲ್ಲಾ ಸಮುದಾಯದವರು ವಿಶಿಷ್ಟ ಗುಣವನ್ನು ಹೊಂದಿದವರು ಎಂದರು.

ನಂತರದಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಮಾತನಾಡಿ ಪ್ರೀತಿ ವಿಶ್ವಾಸದಿಂದ ಸಮಾಜವನ್ನು ಕಟ್ಟುವಂತರಾಗಬೇಕು ವಿಶಾಲವಾದ ಮನೋಭಾವನೆಯಿಂದ ಮಾತ್ರ ಸಮಾಜಲ್ಲಿ ಬೆಳೆಯಲು ಸಾದ್ಯವೆಂದು ಹೇಳಿದರು

ರೆಡ್ಡಿ ಸಮಾಜದೀರ್ಘಕಾಲದ ಇತಿಹಾಸವನ್ನು ಹೊಂದಿದೆ ರಾಷ್ಟ್ರ ಕೂಟರ ಪ್ರಸಿದ್ಧ ಅರಸ ಅಮೋಘವರ್ಷ ನೃಪತುಂಗನ ಕಾಲದಿಂದ ರೆಡ್ಡಿ ಸಮಾಜ ಬೆಳೆದು ಬಂದಿದೆ ರೆಡ್ಡಿ ಸಮಾಜ ಸಂಸ್ಕಾರಯುತವಾದ ಸಮಾಜ ಸಮಾಜದ ಹಿರಿಮೆಯಾದ ಹೇಮರೆಡ್ಡಿ ಮಲ್ಲಮ್ಮನವರು ತಮ್ಮ ಸಲವಾಗಿ ಶಿವನಲ್ಲಿ ಬೇಡಲಿಲ್ಲ ತನ್ನ ಸಮಾಜವಾದ ರೆಡ್ಡಿ ಸಮಾಜಕ್ಕೆ ಬಡತನ ನೀಡ ಬೇಡವೆಂದು ಶಿವನಲ್ಲಿ ಬೇಡಿದವಳು ಎಂದು ಮಹಿಪಾಲ್ ರೆಡ್ಡಿ ಮುನ್ನೂರು ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ವೇಮಾನಂದ ಮಹಾ ಸ್ವಾಮಿಗಳು ರೆಡ್ಡಿ ಗುರುಪೀಠ, ಹರಿಹರ ದಿವ್ಯ ಸಾನಿಧ್ಯವಹಿಸಿದ್ದರು ಅಮರೇಗೌಡ ಬಯ್ಯಾಪುರು ಶಾಸಕರು ಕುಷ್ಟಗಿ, ಬಸವರಾಜ ಪಾಟೀಲ್ ಅನ್ವರಿ ಮಾಜಿ ಕೇಂದ್ರ ಸಚಿವರು ,ಬಸನಗೌಡ ಬ್ಯಾಗವಾಟ್ ಮಾಜಿ ಶಾಸಕರು ಮಾನವಿ, ಬಸವಂತರಾಯ ಕುರಿ, ಹನಮನಗೌಡ ಬೆಳಗುರ್ಕಿ, ಬಸನಗೌಡ ಬಾದರ್ಲಿ, ಅಮರೇಗೌಡ ವಿರುಪಾಪುರ, ಮಲ್ಲಿಕಾರ್ಜುನ ಪಾಟೀಲ್, ಗಿರೀಶ್ ಪಾಟೀಲ್, ಬಾಬುಗೌಡ ಬಾದರ್ಲಿ, ಶಿವನಗೌಡ ಗೋರೆಬಾಳ, ಚಂದ್ರುಭೂಪಾಲ ನಾಡಗೌಡ, ಸರಸ್ವತಿ ಪಾಟೀಲ್, ಮಂಜುಳಾ ಪಾಟೀಲ್, ಅಶೋಕಗೌಡ ಗದ್ರಟಗಿ, ವಿಶ್ವನಾಥ ಪಾಟೀಲ್, ಮತ್ತು ರೆಡ್ಡಿ ಸಮಾಜದ ಎಲ್ಲಾ ಮುಖಂಡರು ಇದ್ದರು.

ವರದಿ: ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here