ಶಿಕ್ಷಕರ ದಿನಾಚರಣೆ ಸನ್ಮಾನ

0
110

ಬಳ್ಳಾರಿ,ಸೆ.13 : ಶಿಕ್ಷಕರ ದಿನಾಚರಣೆ ಅಂಗವಾಗಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಫೆಲೋಷಿಪ್ ಜಿಲ್ಲಾ ಘಟಕದ ವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಅತಿ ಹೆಚ್ಚು ಸೇವೆ ಸಲ್ಲಿಸಿರುವ ಸಂಡೂರಿನ ಎಸ್‍ಇಎಸ್ ಶಾಲೆಯ ಗೈಡ್ ಕ್ಯಾಪ್ಟನ್ (ಮಹಿಳಾ ಶಿಕ್ಷಕಿ) ಎಸ್.ಆರ್ ಅನುರಾಧ ಮತ್ತು ರೂಪನಗುಡಿ ಸರಕಾರಿ ಪ್ರಾಥಮಿಕ ಶಾಲೆಯ ಸುಜಾತಾ ಎಂ ಅವರನ್ನು ಸನ್ಮಾನಿಸಲಾಯಿತು.
ಅನುರಾಧಾ ಅವರು ಸುಮಾರು 32 ವರ್ಷಗಳಿಂದ ಹಾಗೂ ಸುಜಾತಾ ಅವರು ಕಳೆದ 17 ವರ್ಷಗಳಿಂದ ಸ್ಕೌಟ್ಸ್ ಗೈಡ್ಸ್‍ನಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಫೆಲೋಷಿಪ್‍ನ ಎಂ.ಎ.ಷಕೀಬ್ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಲ್ಲೇಶ್ವರಿ ಜುಜಾಲೆ, ಕೆಎಸ್‍ಜಿಎಫ್ ಉಪಾಧ್ಯಕ್ಷ ವಿರುಪಾಕ್ಷಯ್ಯ, ಎಜಾಜ್, ಶಿವಸಾಗರ್, ಖಾಜಾ ಮೈನೂದ್ದೀನ್, ಕುಲ್ಲುಸುಂ, ವಿಜಯಲಕ್ಷ್ಮಿ ಮತ್ತು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಮೆಹಬೂಬ್ ಭಾಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here