ತೋರಣಗಲ್ಲು DYFI ಗ್ರಾಮಘಟಕದಿಂದ “ಶಿಕ್ಷಣಕ್ಕಾಗಿ ಸಾಲುಗಟ್ಟಿ ಪತ್ರ ಸಲ್ಲಿಸಿದ ವಿದ್ಯಾರ್ಥಿ ಸಮೂಹ”

0
172

ಸಂಡೂರು:ಸೆ: ದಿನಾಂಕ 17- 09-2021 ರಂದು ತೋರಣಗಲ್ಲು ಗ್ರಾಮ ಘಟಕ ನೇತೃತ್ವದಲ್ಲಿ ತೋರಣಗಲ್ ಗ್ರಾಮದ ಪ್ರೌಢಶಾಲೆ ಕೈಗಾರಿಕಾ ತರಬೇತಿ ಕೇಂದ್ರ (ಐಟಿಐ) ಕಾಲೇಜ್ ಬೈಪಾಸ್ ರಸ್ತೆ ಯಿಂದ ಬಿಎಚ್ ಮೇನ್ ರೋಡ್ ಮುಖ್ಯ ರಸ್ತೆ ಮಾರ್ಗವಾಗಿ ಗ್ರಾಮದ ಅಂಚೆ ಕಚೇರಿಗೆ ರ್ಯಾಲಿ ಮೂಲಕ ವಿದ್ಯಾರ್ಥಿಗಳು ಮತ್ತು ಯುವಜನರು ಪತ್ರ ಚಳುವಳಿ ಮಾಡಿ ಮಾನ್ಯ ಶ್ರೀ ಶಾಸಕರು ಈ ತುಕಾರಾಂ ಸಂಡೂರು ಇವರಿಗೆ ಪತ್ರ ಬರೆದು ಪೋಸ್ಟ್ ಮಾಡುವುದರ ಮುಖಾಂತರ ಪ್ರತಿಭಟಿಸಿದರು..

ಈ ಪತ್ರ ಚಳುವಳಿ ಕುರಿತು DYFI ನ ಸಂಡೂರು ತಾಲ್ಲೂಕು ಸಹಾ ಕಾರ್ಯದರ್ಶಿ ಸೈಯದ್ ಶರೀಪ್ ಅವರು ಮಾತನಾಡಿ ತೋರಣಗಲ್ಲು ಗ್ರಾಮಕ್ಕೆ ಈಗಾಗಲೇ ಪಿಯುಸಿ ಕಾಲೇಜು ಮಂಜೂರಾಗಿದ್ದು ಕೆಲವು ರಾಜಕೀಯ ವ್ಯಕ್ತಿಗಳ ಕೈವಾಡದಿಂದ ಇವತ್ತು ಗಾದಿಗನೂರು ಗ್ರಾಮಕ್ಕೆ ಸೇರಿದೆ.ಒಂದು ಕಡೆ ದೇಶದ ಜನತೆ ನಿರುದ್ಯೋಗ ಹಸಿವಿನಿಂದ ಸತ್ತರೆ ಇನ್ನೊಂದು ಕಡೆ ಶಿಕ್ಷಣ ಕೇವಲ ಶ್ರೀಮಂತರ ಸ್ವತ್ತ ಆಗುವಂತಹ ಪರಿಸ್ಥಿತಿ ಈ ದೇಶದಲ್ಲಿ ನಿರ್ಮಾಣವಾಗಿದೆ.

ನರೇಂದ್ರ ಮೋದಿಯವರ ಎರಡು ವರ್ಷಕ್ಕೆ 2 ಕೋಟಿ ಉದ್ಯೋಗ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಸ್ಪಿಸ್ ಬ್ಯಾಂಕಿಂದ ಕಪ್ಪು ಹಣ ಈಗಲೂ ಸಹ ಯಾವುದೇ ರೀತಿಯಾಗಿ ಬಂದಿಲ್ಲ ಕೇವಲ ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ಈ ದೇಶದ ಯುವಜನತೆ ತಪ್ಪುದಾರಿಯಲ್ಲಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ತೋರಣಗಲ್ಲಿನಲ್ಲಿ ಪ್ರತಿವರ್ಷ ಸರ್ಕಾರಿ ಪ್ರೌಢಶಾಲೆಯಲ್ಲಿ ಹಲವಾರು ವಿದ್ಯಾರ್ಥಿಗಳು ಹತ್ತನೇ ತರಗತಿಯನ್ನು ಮುಗಿಸಿ ಪಿಯುಸಿ ವ್ಯಾಸಂಗಕ್ಕೆ ಬೇರೆ ಪ್ರದೇಶಗಳ ಮೇಲೆ ಅವಲಂಬನೆ ಆಗುವಂತಹ ಪರಿಸ್ಥಿತಿ ತೋರಣಗಲ್ಲಿನ ವಿದ್ಯಾರ್ಥಿಗಳಿಗಿದೆ. ಕೂಡಲೇ ಮಾನ್ಯ ಶಾಸಕರಾದ ಶ್ರೀ ತುಕಾರಾಮ ರವರು ವಿದ್ಯಾರ್ಥಿಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ತೋರಣಗಲ್ಲು ಗ್ರಾಮಕ್ಕೆ ಕಾಲೇಜು ಮಂಜೂರು ಮಾಡಿಸಬೇಕಾಗಿ ಒತ್ತಾಯ ಮಾಡಿದರು.

ತಾಲೂಕು ಅದ್ಯಕ್ಷ ಎಸ್. ಕಾಲುಬಾರವರು ಮಾತನಾಡಿ ತೋರಣಗಲ್ಲು ಪ್ರದೇಶವು ಕೈಗಾರಿಕಾ ಪ್ರದೇಶವಾಗಿ ಬೃಹದಾಕಾರವಾಗಿ ಬೆಳೆಯುತ್ತಿದೆ ಇಂತಹ ನಗರದಲ್ಲಿ ಪಿ.ಯು.ಸಿ ಕಾಲೇಜು ಇಲ್ಲದಿರುವುದು ದುರಂತ, ಈ ಹೋಬಳಿಯ ಹಳ್ಳಿಗಳ ನೂರಾರು ವಿದ್ಯಾರ್ಥಿಗಳಿಗೆ ಬಳ್ಳಾರಿ, ಹೊಸಪೇಟೆ, ಸಂಡೂರು ನಗರಗಳಿಗೆ ವಿದ್ಯಾಭ್ಯಾಸ ಮಾಡಲು ಆರ್ಥಿಕವಾಗಿ ಕಷ್ಟವಾಗುತ್ತಿದೆ, ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಆದ್ದರಿಂದ ದಯವಿಟ್ಟು ಶಿಕ್ಷಣ ಪ್ರೇಮಿಗಳಾದ ಶಾಸಕರನ್ನು ವಿದ್ಯಾರ್ಥಿ ಸಮುದಾಯ ಒತ್ತಾಯಿಸುತ್ತಾ ದಯವಿಟ್ಟು ಈ ಶೈಕ್ಷಣಿಕ ವರ್ಷದಲ್ಲಿ ಕಾಲೇಜನ್ನು ಆರಂಭಿಸುವ ಮೂಲಕ ಈ ಪ್ರದೇಶದ ವಿಧ್ಯಾರ್ಥಿ ಸಮುದಾಯವನ್ನು ಪ್ರೋತ್ಸಾಹಿಸಬೇಕೆಂದು ಒತ್ತಾಯಿಸಿ ಮನವಿ ಮಾಡಿದರು.

ತೋರಣಗಲ್ಲು ಪ್ರೌಢ ಶಾಲೆ, ಕೈಗಾರಿಕೆ ತರಬೇತಿ ಕೆಂದ್ರ (ITI) ಕಾಲೇಜ್ ನಿಂದ ಆರಂಭಗೊಂಡ ರ್ಯಾಲಿಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಘೋಷಣೆ ಕೂಗುತ್ತಾ ಅಂಚೆ ಕಚೇರಿ ತಲುಪಿ ಪತ್ರ ಕಳುಹಿಸಲಾಯಿತು.

ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಶಿವಾರೆಡ್ಡಿ, ಕಾರ್ಯದರ್ಶಿ ಹುಲಿಯಪ್ಪ, ಮುಖಂಡರಾದ ಗಣೇಶ್, ರವಿ, ವೇಬಾ ಕುಮಾರಿ,ಅರ್ಪಿತ, ಕುಮಾರ ನಾಯ್ಕ ಇತರರು ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here