ಮಕ್ಕಳ ಆರೋಗ್ಯದ ಕಾಳಜಿ ವಹಿಸಲು ಸಲಹೆ-ಗಂಗಾಧರ್

0
49

ರಾಮನಗರ, ಸೆ,೨೦: ರಾಮನಗರ ಟೌನ್, ವ್ಯಾಪ್ತಿಯ ಮಂಜುನಾಥ ನಗರದ ಶಾಲಾ ಆವರಣ ಮತ್ತು ಅಳ್ಳಿಮಾಳ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆವತಿಯಿAದ, ಜ್ಞಾನವಿಕಾಸ ಸಂಘಗಳ ಸದಸ್ಯರ ಸಭೆಯನ್ನು ಆಯೋಜಿಸಲಾಗಿತ್ತು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್ ಅವರು ಮಾತನಾಡಿ ಉತ್ತಮವಾದ ಆರೋಗ್ಯ ಪಡೆಯಬೇಕಾದರೆ ಪೌಷ್ಠಿಕ ಆಹಾರ ಸೇವನೆ, ವೈಯುಕ್ತಿಕ ಸ್ಚಚ್ಛತೆ, ನಿಯಮಿತ ವ್ಯಾಯಾಮ, ಯೋಗ, ಧ್ಯಾನ, ಇತ್ಯಾದಿ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಜೊತೆಗೆ ಕೋವಿಡ್ ೩ ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಬೇಕಾದರೆ ಪೌಷ್ಠಿಕ ಆಹಾರ ನೀಡಿ, ರೋಗ ನಿರೋಧಕ ಶಕ್ತಿ ವೃದ್ಧಿಸುವಂತೆ ಮಾಡಬೇಕು, ಪೋಷಕರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಬೇಕು. ಮಕ್ಕಳಲ್ಲಿ ಜ್ವರ, ನೆಗಡಿ, ಕೆಮ್ಮು ಇತ್ಯಾದಿ ಲಕ್ಷಣಗಳು ಕಂಡುಬAದ ತಕ್ಷಣ ಮಕ್ಕಳ ತಜ್ಞರಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು. ಹಾಗೂ ಕೋವಿಡ್ ಸೋಂಕು ನಿಯಂತ್ರಿಸಲು ಮಾಸ್ಕ್, ಕೈಗಳ ಸ್ವಚ್ಛತೆ, ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಚಂದ್ರಮ್ಮ, ಸೇವಾ ಪ್ರತಿನಿಧಿಗಳಾದ ರೂಪ, ಲಲಿತ, ಪ್ರಭಂಧಕರಾದ ಶಾಂತಮ್ಮ, ಶಿಲ್ಪಕಲಾ ಹಾಗೂ ಜ್ಞಾನ ವಿಕಾಸ ಸಂಘದ ಎಲ್ಲಾ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here