ಯಾವುದೇ ವ್ಯಕ್ತಿ ಏಕಾಂಗಿಯಾಗಿ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರೆ ಅಂತವರ ಬಗ್ಗೆ ನಿಗಾವಹಿಸಿ ಆತ್ಮಸ್ಥೈರ್ಯ ತುಂಬಿ: ಡಾ.ಗೋಪಾಲ್ ರಾವ್.

0
182

ಸಂಡೂರು:ಸೆ:20:- ವಿಶ್ವ ಆತ್ಮಹತ್ಯೆ ತೆಡ ದಿನಾಚರಣೆಯ ಅಂಗವಾಗಿ ತೋರಣಗಲ್ಲು ಆರೋಗ್ಯ ಕೇಂದ್ರದಲ್ಲಿ ಪ್ಯಾರಾ ಮೆಡಿಕಲ್ ಸ್ಟಾಪ್ ಮತ್ತು ಆಶಾ ಕಾರ್ಯಕರ್ತೆಯರಿಗೆ ಮಾನಸಿಕ ಆರೋಗ್ಯ ಕುರಿತು ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು,

ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್ ಜನರು ಹಲವಾರು ಚಿಕ್ಕ ಚಿಕ್ಕ ಕಾರಣಗಳನ್ನು ದೊಡ್ಡದಾಗಿ ಊಹಿಸಿಕೊಂಡು ಮಾನಸಿಕ ಒತ್ತಡಕ್ಕೆ ಒಳಗಾಗುವರು, ಅಂತವರಿಗೆ ಬದುಕಿನ ಮೌಲ್ಯಗಳನ್ನು ತಿಳಿಸಿ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎನ್ನುವುದು ಇದ್ದೇ ಇರುತ್ತೆ, ಪರಿಹಾರ ಕಂಡುಕೊಳ್ಳುವುದನ್ನು ಬಿಟ್ಟು ಆತ್ಮಹತ್ಯೆಗೆ ಶರಣಾಗುವುದು ಮೂರ್ಖತನ, ಮಾನಸಿಕ ಖಿನ್ನತೆಯಿಂದಲೆ ಆತ್ಮಹತ್ಯೆಗೆ ಶರಣಾಗಿ ತಮ್ಮ ಅಪಾರವಾದ ಜೀವನವನ್ನು ಅಂತ್ಯಗೊಳಿಸಿ ಕುಟುಂಬದವರ ಜೀವನವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವರು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಜಿಲ್ಲೆಯ ಮಾನಸಿಕ ಕಾರ್ಯಕ್ರಮದ ತರಬೇತಿಯ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಕಾವ್ಯ ಮಾತನಾಡಿ ಕೌನ್ಸಲಿಂಗ್ ಮೂಲಕ ಹಲವಾರು ಜನರ ಮನಸ್ಸು ಆತ್ಮಹತ್ಯೆ ಕಡೆಗೆ ಸೆಳೆಯದಂತೆ ಮಾಡಬಹುದು, ಆರು ವಾರಗಳ ನಂತರವೂ ಯಾವುದೇ ಬದಲಾವಣೆ ಕಾಣದಿದ್ದಾಗ ಚಿಕಿತ್ಸೆ ನೀಡಬೇಕಾಗುತ್ತದೆ, ಚಿಕಿತ್ಸೆಗೆ ಔಷಧಗಳು ಈಗ ಎಲ್ಲಾ ಆರೋಗ್ಯ ಕೇಂದ್ರಗಳಲ್ಲೂ ಲಭ್ಯವಿದೆ ಸಂಡೂರು ಮತ್ತು ತೋರಣಗಲ್ಲು ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ಮೂರನೇ ಮಂಗಳವಾರ ಶಿಬಿರ ನಡೆಸಲಾಗುವುದು ಮಾನಸಿಕ ಒತ್ತಡ,ಖಿನ್ನತೆ, ಅಸಹಜ ನಡವಳಿಕೆ, ವಿಚಿತ್ರ ವರ್ತನೆ,ಮಾದಕ ವ್ಯಸನದಿಂದ ಬಳಲುವವರನ್ನು ಕರೆತನ್ನಿ, ಉತ್ತಮ ಚಿಕಿತ್ಸೆ ನೀಡಿದರೆ ಗುಣಮುಖರಾಗುವರು ಎಂದು ತಿಳಿಸಿದರು,

ಹಾಗೇ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಾತನಾಡಿ ದೇಶದಲ್ಲಿ ಪ್ರತಿವರ್ಷ 1 ಲಕ್ಷದ 30 ಸಾವಿರ ಜನರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ,ದೇಶದಲ್ಲಿ ಒಂದು ಲಕ್ಷ ಜನರಲ್ಲಿ 10 ಜನರು ಆತ್ಮಹತ್ಯೆ ಪ್ರಯತ್ನ ಮಾಡುವರು ವೈಯಕ್ತಿಕ ನಷ್ಟ, ಸಾಲ, ಅತೀವೃಷ್ಟಿ,ಅನಾವೃಷ್ಟಿ, ಬೆಳೆ ಹಾನಿ, ಪ್ರತಿಷ್ಠೆ‌, ಪ್ರೀತಿ ಪಾತ್ರರ ಸಾವು ನೋವುಗಳು, ಕೌಟುಂಬಿಕ ಕಲಹ ಕಾರಣವಾಗಿರುತ್ತವೆ, ಇತ್ತಿಚೆಗೆ ಮಕ್ಕಳ ಪಬ್ಬಜೀ ದಂತಹ ವಿಡಿಯೋ ಗೇಮ್ ಗಳು, ಕೊರೋನಾ ಹೆದರಿಕೆ ಸಹ ಆತ್ಮಹತ್ಯೆಗೆ ಕಾರಣವಾಗಿದ್ದು ಮೀಡಿಯಾ ಗಳಲ್ಲಿ ಕಂಡಿದ್ದೇವೆ ಎಂದು ತಿಳಿಸಿದರು, ದೂರವಾಣಿ ಮೂಲಕ 104 ಆರೋಗ್ಯ ಸಹಾಯವಾಣಿಗೆ ಕರೆ ಮಾಡಿ ಆಪ್ತ ಸಮಾಲೋಚನೆಯನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು,

ಈ ತರಬೇತಿಯಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಗೋಪಾಲ್ ರಾವ್, ಡಾ.ದೀಪಾ ಪಾಟೀಲ್, ಜಿಲ್ಲಾ ಮಾನಸಿಕ ಕಾರ್ಯಕ್ರಮದ ಸೈಕ್ರಿಯಾಸಿಸ್ಟ್ ಕಾವ್ಯಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್ ಅಹಮದ್, ಮತ್ತು ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here