ಸರ್ಕಾರಿ ಜಮೀನಿನಲ್ಲಿ ವಾಸಮಾಡುತ್ತಿರುವ ನಮಗೆ ನಿವೇಶನದ ಹಕ್ಕುಪತ್ರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

0
137

ಬಳ್ಳಾರಿ:ಸೆ:20:- ಬಳ್ಳಾರಿ ಜಿಲ್ಲಾ ಕಂಪ್ಲಿ ತಾಲೂಕು ಎಮ್ಮಿಗನೂರು ಗ್ರಾಮದ 3ನೇ ವಾರ್ಡ್ ಜಡೇಶ ನಗರದಲ್ಲಿ ಕಾಯಂ ಸುಮಾರು 30ರಿಂದ 35 ವರ್ಷಗಳಿಂದ ನೆಲ್ಲುಡಿ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ 225/ಎ 3 ವಿಸ್ತೀರ್ಣ 5 ಎಕರೆ ಸರಕಾರಿ ಭೂಮಿಯಲ್ಲಿ ವಾಸ ಮಾಡುತ್ತಿದ್ದು ಇಲ್ಲಿನ ಜನಗಳಿಗೆ ನಿವೇಶನ ಹಕ್ಕುಪತ್ರ ಇಲ್ಲದಿರುವುದರಿಂದ ಇವರಿಗೆ ಗ್ರಾಮ ಪಂಚಾಯಿತಿಯಿಂದ ತೆರಿಗೆ ಕಟ್ಟಿಸಿ ಕೊಳ್ಳುತ್ತಿಲ್ಲ ಶೌಚಾಲಯಗಳಿಗೆ ಅವಕಾಶ ಕೊಡುತ್ತಿಲ್ಲ ವಿದ್ಯುತ್ ಸಂಪರ್ಕ ಕೊಡುತ್ತಿಲ್ಲ ನೀರಿನ ಸೌಲಭ್ಯ ಸಹ ಇರುವುದಿಲ್ಲ ಇಲ್ಲಿ ವಾಸಮಾಡುವ ಜನರು ಕಡುಬಡವರಾಗಿದ್ದು ಸದ್ರಿ ಜಾಗದಲ್ಲಿ ಸುಮಾರು ವರ್ಷಗಳಿಂದ ಗುಡಿಸಲಿನಲ್ಲಿ ಜೀವ ಸಾಗಿಸುತ್ತಾ ಬಂದಿದ್ದಾರೆ ಇವರುಗಳಿಗೆ ಯಾವುದೇ ತರಹದ ನಿವೇಶನ ಇರುವುದಿಲ್ಲ ಅದಕ್ಕಾಗಿ ನಿವೇಶನದ ಹಕ್ಕುಪತ್ರಗಳನ್ನು ನೀಡಬೇಕು ಎಂದು ಮತ್ತು ಗ್ರಾಮ ಪಂಚಾಯಿತಿಗೆ ನಿವೇಶನ ಮಂಜೂರು ಮಾಡಿ ಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರಿಂದ ಮನವಿ ಪತ್ರ ನೀಡಲಾಯಿತು

LEAVE A REPLY

Please enter your comment!
Please enter your name here