ಎಲ್.ಇ.ಡಿ ಪ್ರೊಜೆಕ್ಟರ್ ಮೂಲಕ ಆರೋಗ್ಯ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸುತ್ತಿರುವುದು ಹೆಚ್ಚು ಪರಿಣಾಮಕಾರಿಯಾಗಲಿದೆ; ಡಾ.ರಾಮಶೆಟ್ಟಿ,

0
223

ಸಂಡೂರು; ಸೆ:30:- ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾಹಿತಿ ಶಿಕ್ಷಣ ಸಂಪರ್ಕ ವಿಭಾಗ, ಆರೋಗ್ಯ ಸೌಧ,ಬೆಂಗಳೂರು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಆಯ್ದ ಗ್ರಾಮಗಳಲ್ಲಿ ಎಲ್.ಇ.ಡಿ ಪ್ರೊಜೆಕ್ಟರ್ ಮೂಲಕ ಅಪೌಷ್ಟಿಕತೆ ಪುನಃ ಚೇತನ ಕಾರ್ಯಕ್ರಮ, ಶಿಶು ರಕ್ಷಣೆಯ ಕಾಂಗೋರೊ ಕೇರ್,ಎದೆ ಹಾಲೀನ ಮಹತ್ವ, ಮನೆಯಲ್ಲಿ ಶಿಶು ಆರೈಕೆ,ಸಾರ್ವಜನಿಕ ಆರೋಗ್ಯ, ಮತ್ತು ಕೋವಿಡ್-19 ಜಾಗೃತಿ ಹಾಗೂ ಕೋವಿಡ್ ಲಸಿಕೆ ಮಹತ್ವ ಸಾರುವ, ಇತರ ಹಲವು ವಿಷಯಗಳ ಕುರಿತು ವಿಡಿಯೋ ಪ್ರದರ್ಶನವನ್ನು ಮಾಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು ಈ ಜಾಗೃತಿ ರಥಕ್ಕೆ ಸಂಡೂರು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ರಾಮಶೆಟ್ಟಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು,

ಈ ಸಂದರ್ಭದಲ್ಲಿ ಜಾಗೃತಿ ಮೂಡಿಸಲು ಅರಿವಿನಲ್ಲಿ ಹಿಂದುಳಿದ ಅಂಕಮನಾಳು, ದೇವರಮಲ್ಲಾಪುರ,ಸ್ವಾಮಿಹಳ್ಳಿ, ತೊಣಸಗೇರಿ,ಗೊಲ್ಲಲಿಂಗಮ್ಮನಹಳ್ಳಿ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿರುವುದು ಒಳ್ಳೆಯದೇ ಆಗಿದೆ ವಾಹನ ಗ್ರಾಮಕ್ಕೆ ಬಂದಾಗ ಹೆಚ್ಚು ಹೆಚ್ಚು ಜನರನ್ನು ಸೇರಿಸಿ ಪ್ರದರ್ಶನ ಏರ್ಡಿಸುವಂತೆ ತಿಳಿಸಿದರು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆವರು ಹಾಜರಿದ್ದು ಜನರ ಸಂದೇಹಗಳಿಗೆ ಪರಿಹರಿಸುವ ಕಾರ್ಯ ಕೈಗೊಳ್ಳಿ, ಉದಾಹರಣೆಗೆ, ಆಸ್ಪತ್ರೆ ಹೆರಿಗೆ,ಎದೆಹಾಲಿನ ಮಹತ್ವ,ಕೋವಿಡ್ ಲಸಿಕೆ ಹಾಕಿಸಿಕೊಂಡ ನಂತರ ಬರುವ ಜ್ವರ ಇತರೆ ಹಲವಾರು ಸಂದೇಶಗಳನ್ನು ಇಟ್ಟುಕೊಂಡು ಜನ ಸೇವೆ ಪಡೆಯಲು ಹಿಂಜರಿಯುತ್ತಾರೆ ಅವರಿಗೆ ಪ್ರದರ್ಶನ ಮುಗಿದ ನಂತರ ಮಾತಾಡಲು ಅವಾಕಾಶ ಕೊಟ್ಟು ಸಂದೇಹಗಳನ್ನು ಪರಿಹರಿಸುವ ಪ್ರಯತ್ನ ಮಾಡಿ ಮತ್ತು ಶೇಕಡ 100% ಫಲಾನುಭವಿಗಳು ಲಸಿಕೆ ಹಾಕಿಸಿಕೊಳ್ಳುವಂತೆ ಮನೊಲಿಸಿ ಎಂದು ಸಲಹೆ ನೀಡಿದರು,

ಈ ಸಂದರ್ಭದಲ್ಲಿ ಡಾ.ರಾಮಶೆಟ್ಟಿ, ಡಾ.ಕಿರಣ್ ಕುಮಾರ್,ಬಂಡೇ ಗೌಡ,ವಿಜಯಲಕ್ಷ್ಮಿ , ನಾಗಭೂಷಣ, ಯೋಗೀಶ, ಜಾತಪ್ಪ, ಮರೇಗೌಡ,ಶಿವಣ್ಣ,ಮಂಜುನಾಥ್ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here