ಸೇವೆಯಿಂದ ನಿವೃತ್ತರಾದ ಎಎಸ್‍ಐ ಟಿ.ಬಸವರಾಜಗೆ ಸನ್ಮಾನ

0
129

ಬಳ್ಳಾರಿ,ಸೆ.30 : ರಾಜ್ಯ ಗುಪ್ತ ವಾರ್ತೆಯ ಬಳ್ಳಾರಿ ಘಟಕದ ಎಎಸ್‍ಐ ಟಿ.ಬಸವರಾಜ ಅವರು ಸೇವಾ ನಿವೃತ್ತಿಗೊಂಡಿದ್ದು, ಅವರ ನಿವೃತ್ತಿ ಕಾರ್ಯಕ್ರಮವು ಅನಂತಪುರ ರಸ್ತೆಯ ಪವನ್ ಹೋಟೆಲ್‍ನ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಸೇವಾ ನಿವೃತ್ತಿ ಹೊಂದಿದ ಟಿ.ಬಸವರಾಜ ಅವರನ್ನು ಗುಪ್ತ ವಾರ್ತೆಯ ಬಳ್ಳಾರಿ ಘಟಕದ ಸಿಬ್ಬಂದಿ ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬಸವರಾಜು ಅವರೊಂದಿಗಿನ ಒಡನಾಟ ಹಾಗೂ ರಾಜ್ಯ ಗುಪ್ತವಾರ್ತೆಯಲ್ಲಿ ಸಲ್ಲಿಸಿದ ಸೇವೆಯನ್ನು ಅನೇಕ ಸಹದ್ಯೋಗಿಗಳು ಸ್ಮರಿಸಿಕೊಂಡರು.
ರಾಜ್ಯ ಗುಪ್ತ ವಾರ್ತೆಯ ಬಳ್ಳಾರಿ ಘಟಕದ ಡಿಎಸ್‍ಪಿ ಬಿ.ಎಸ್.ತಳವಾರ್, ಸಬ್‍ಇನ್ಸ್‍ಪೆಕ್ಟರ್‍ಗಳಾದ ಶಶಿಧರ್, ಬಸಮ್ಮ, ಪವಿತ್ರಾ ಮತ್ತು ಎಎಸ್‍ಐಗಳಾದ ಭಾಗ್ಯಲಕ್ಷ್ಮಿ, ಗುರುಮೂರ್ತಿ, ಗಿರೀಶ್ ಮತ್ತು ಹೆಡ್‍ಕಾನ್‍ಸ್ಟೇಬಲ್‍ಗಳಾದ ಕೆ.ಬುಡೇನ್‍ಸಾಬ್, ಬಿ.ಬಸವರಾಜ್, ಮಂಜುನಾಥ, ಹೆಚ್.ಜಿ.ಎಂ.ಗುರುಬಸವರಾಜ್, ಸಿಜೆ ಗುರುಬಸವರಾಜ್ ಪ್ರಕಾಶ್‍ರಾವ್, ರಾಘವೇಂದ್ರ ಸಿಂಗ್, ಕಾನ್‍ಸ್ಟೇಬಲ್‍ಗಳಾದ ಈರಣ್ಣ, ವಿಜಯ್ ಕಮಾರ್ ಮತ್ತು ಸಿಬ್ಬಂದಿ ಹಾಜರಿದ್ದರು.

LEAVE A REPLY

Please enter your comment!
Please enter your name here