ತೋರಣಗಲ್ಲು: ಬಯಲು ಶೌಚ ಮುಕ್ತವಾಗುವ ವರೆಗೂ ಸಾಂಕ್ರಾಮಿಕ ರೋಗಗಳು ತಡೆಯಲು ಅಸಾಧ್ಯ: ಡಾ. ಗೋಪಾಲ್ ರಾವ್,

0
366

ಸಂಡೂರು/ತೋರಣಗಲ್ಲು:ನ:23:- ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಆಯೋಜಿಸಲಾದ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮಕ್ಕೆ ಡಾ.ಗೋಪಾಲ್ ರಾವ್ ಚಾಲನೆ ನೀಡಿ ಮಾತನಾಡಿದರು.

ರೋಗಗಳು ಮುಕ್ತವಾಗಲು ಮೊದಲು ಬಯಲು ಶೌಚ ಮಾಡುವುದನ್ನು ನಿಲ್ಲಿಸಬೇಕಿದೆ, ಹಳ್ಳಿಗಳಲ್ಲಿ ರಸ್ತೆಯ ಬದಿಗಳಲ್ಲೆ ಶೌಚ ಮಾಡುವರು, ರೋಗಾಣುಗಳು ಮನೆಯವರೆಗೂ ಹರಡಿ ದೇಹ ಸೇರಿಕೊಂಡು ರೋಗಗಳನ್ನು ತರುತ್ತವೆ, ಹಲವಾರು ಗ್ರಾಮಗಳು ಬಯಲು ಶೌಚ ಮುಕ್ತ ಗ್ರಾಮವೆಂದು ಘೋಷಣೆ ಮಾಡಿದರು ಶೌಚದಿಂದ ಮುಕ್ತವಾಗಿಲ್ಲ, ಶೌಚಾಲಯ ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೇರಿ ಎ.ಪಿ.ಎಲ್ ಮತ್ತು ಬಿ.ಪಿ.ಎಲ್ ಎಲ್ಲಾ ವರ್ಗದವರಿಗೂ ಸಹಾಯ ಧನ ನೀಡುತ್ತದೆ, ಅದರೆ ಜನರು ಕಟ್ಟಿಸಿದ ಅನೇಕ ಶೌಚಾಲಯಗಳನ್ನು ಬಳಸುವುದಿಲ್ಲ ಕಟ್ಟಿಗೆ, ವ್ಯರ್ಥ ಸಾಮಾಗ್ರಿಗಳನ್ನು ತುಂಬಿಸಿದ್ದು ಅಲ್ಲಲ್ಲಿ ಕಂಡು ಬರುತ್ತವೆ, ನೀರಿನ ಅಭಾವ, ನಮಗೆ ಸರಿಹೊಂದುವುದಿಲ್ಲ ಅಂತ ಕಾರಣ ಹೇಳುವರು, ಜನರಿಗೆ ಶೌಚಾಲಯ ಬಳಕೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಂಡು ಜಾಗೃತಿ ಮೂಡಿಸುವ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಡಾ.ಗೋಪಾಲ್ ರಾವ್, ಡಾ.ವೆಂಕಟೇಶ್ವರರಾವ್, ಡಾ.ಆಯೇಶಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಶಕೀಲ್ ಅಹಮದ್, ಮಂಜುನಾಥ್, ಮಾಲಾ, ತಿಪ್ಪೇಸ್ವಾಮಿ, ವೆಂಕಪ್ಪ, ಮಾರೇಶ, ಶ್ರೀರಾಮ್, ಶಿವಕುಮಾರ್, ಆಶಾ ಕಾರ್ಯಕರ್ತೆ ಲಕ್ಷ್ಮಿ, ನಾಗರಾಜ, ಇತರರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here