ಬ್ಯಾಂಕ್‍ಗಳ ಖಾಸಗಿಕರಣ ವಿರೋಧಿಸಿ ಬ್ಯಾಂಕ್ ಬಂದ್ ಎರಡನೇ ದಿನ

0
111

ಬಳ್ಳಾರಿ:ಡಿ:17:- ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ಖಾಸಗಿಗೆ ವಹಿಸುವ ಕೇಂದ್ರ ಸರ್ಕಾರದ ಯೋಜನೆಯನ್ನು ವಿರೋಧಿಸಿ ಬ್ಯಾಂಕ್‍ಗಳ ಒಕ್ಕೂಟಗಳಿಂದ ಗುರುವಾರ ಆರಂಭವಾದ ಮುಷ್ಕರ ಎರಡನೇ ದಿನ ಬ್ಯಾಂಕ್ ಮುಷ್ಕರ ಮುಂದುವರೆದಿದೆ.

ದೇಶದ ರಾಷ್ಟ್ರೀಕೃತ ಬ್ಯಾಂಕ್ ಗಳ ವಿಲೀನಗೊಳಿಸುವುದು ಮತ್ತು ಖಾಸಗೀಕರಣ ಮಾಡುತ್ತಿರುವುದರ ವಿರುದ್ದ ವಿವಿಧ ಬ್ಯಾಂಕ್ ಗಳ ನೌಕರರ ಸಂಘಟನೆಗಳು ಎರಡನೇ ದಿನವಾದ ಇಂದು ಸಹ ಮುಷ್ಕರ ನಡೆಸಿದವು.
ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ಕಚೇರಿ ಮುಂಭಾಗದಲ್ಲಿ ಸೇರಿದ ಸಂಘಟನೆಗಳ ಮುಖಂಡರು, ಕೇಂದ್ರ ಸರ್ಕಾರದ ಖಾಸಗೀರಣ ನೀತಿಯ ವಿರುದ್ದ ಘೋಷಣೆ ಕೂಗಿ, ಸರಕಾರ ತನ್ನ‌ ನಿಲುವು ಬದಲಿಸಬೇಕು ಎಂದರು.

ಸಂಘಟನೆಗಳ‌ ಮುಖಂಡ ರಾಮಕೃಷ್ಣ, ಟಿ.ಜಿ.ವಿಠ್ಠಲ್ ಮೊದಲಾದವರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಈ ಒಂದು ಮುಷ್ಕರಕ್ಕೆ ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಬೆಂಬಲ‌ ವ್ಯಕ್ತಪಡಿಸಿದ್ದರು.

ವರದಿ:-ಮಹೇಶ್

LEAVE A REPLY

Please enter your comment!
Please enter your name here