ಓಪನ್ ಏರ್ ಜಿಮ್ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ,

0
162

ಸಂಡೂರು:ಪೆ: 21:-ದೈಹಿಕ ಕಸರತ್ತಿನಿಂದ ಮನುಷ್ಯನ ಮನಸ್ಸು ಮತ್ತು ದೇಹ ಸದೃಢಗೊಳ್ಳುತ್ತವೆ ಎಂದು ಶಾಸಕ ತುಕಾರಾಂ ಹೇಳಿದರು

ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯ ಬಂಡ್ರಿ ಕೆಪಿಎಸ್ ಶಾಲೆಯ ಆವರಣದಲ್ಲಿ, ಡಿಎಂಎಫ್ ನಿಧಿಯ ಸುಮಾರು 14 ಲಕ್ಷ ರೂಪಾಯಿಗಳ ಅನುದಾನದಲ್ಲಿ ನಿರ್ಮಿಸಲಾಗುವ ಓಪನ್ ಏರ್ ಜಿಮ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

14 ಲಕ್ಷ ರೂ ವೆಚ್ಚದಲ್ಲಿನ ಜಿಮ್ ಕೊಠಡಿಗೆ ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಈ ತುಕಾರಾಂ ರವರು ಗುದ್ದಲಿ ಪೂಜೆಯನ್ನು ನೆರವೇರಿಸಿ ಗ್ರಾಮಸ್ಥರು, ಶಾಲೆಯ ವಿದ್ಯಾರ್ಥಿಗಳು ಕ್ರೀಡಾಸಕ್ತರಿಗೆ, ಯುವಕರಿಗೆಈ ಓಪನ್ ಏರ್ ಜಿಮ್ ಬಳಕೆ ಮಾಡುವ ಮೂಲಕ ದೈಹಿಕ ದೃಡತೆ ಹೊಂದಬೇಕು ಎಂದರು, ನಿತ್ಯ ಜಿಮ್ ಗೆ ಬರುವವರಿಂದ ಕನಿಷ್ಠ ಸೇವಾ ಶುಲ್ಕ 50 ರೂ ಪಡೆದರೆ ಜಿಮ್ ನ ಪರಿಕರಗಳನ್ನು ದುರಸ್ತಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಈ ಸಂಧರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಗಂಟಿ ಕುಮಾರಸ್ವಾಮಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪಿ. ರವಿಕುಮಾರ್, ಕಾಂಗ್ರೆಸ್ ಮುಖಂಡ ಹಾಗೂ ಗ್ರಾಪಂ ಮಾಜಿ ಸದಸ್ಯರಾದ ಕೆ. ನಾಗರಾಜ್. ಮುಖಂಡರಾದ ಪಿ. ಜಯರಾಮ್, ರಮೇಶ್ ಗಡಾದ್, ಅಧಿಕಾರಿಗಳು, ಗ್ರಾಮಸ್ಥರು ಇದ್ದರು

LEAVE A REPLY

Please enter your comment!
Please enter your name here