ಮಡಿವಾಳ ಮಾಚಿದೇವರ ಸಮುದಾಯ ಭವನ ಕಾಮಗಾರಿಗೆ ಚಾಲನೆ.. “ಕಾಯಕಯೋಗಿಗಳನ್ನು ಗುರುತಿಸೋಣ”. ಈ.ತುಕಾರಾಮ್

0
158

ಸಂಡೂರು:06:ಎ:-ಮಡಿವಾಳರು ಸೇರಿ ಪುರಾತನ ಕಾಲದಿಂದ ಸಮಾಜ ಸೇವೆಯಲ್ಲಿ ತೊಡಗಿದ ಕಾಯಕಯೋಗಿಗಳನ್ನು ಗುರುತಿಸಿ ಗೌರವಿಸಬೇಕು ಎಂದು ಶಾಸಕ ಹಾಗೂ ಸಿ ಎಲ್ ಪಿ ಕಾರ್ಯದರ್ಶಿ ಈ. ತುಕರಾಮ್ ಹೇಳಿದರು.

ಪಟ್ಟಣದ ಲಕ್ಷ್ಮೀಪುರ ರಸ್ತೆಯಲ್ಲಿ ಜೆ ಎಸ್ ಡಬ್ಲ್ಯೂ ,ಸಿಎಸ್ಆರ್,ನಿಧಿಯಡಿ 30 ಲಕ್ಷ ರೂ ವೆಚ್ಚದ ಮಡಿವಾಳ ಮಾಚಿದೇವರ ಸಮುದಾಯ ಭವನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಸೋಮವಾರ ಮಾತನಾಡಿದರು.

ಸಮುದಾಯ ಭವನದಲ್ಲಿ ಇ-ಲೈಬ್ರರಿ ಸ್ಥಾಪಿಸಲಾಗುವುದು, 3 ಕಂಪ್ಯೂಟರ್ ಗಳನ್ನು ನೀಡಲಾಗುತ್ತದೆ. 41 ಲಕ್ಷ ರೂ ವೆಚ್ಚದಲ್ಲಿ ಸಮುದಾಯ ಭವನಕ್ಕೆ ರಸ್ತೆ, ಬೀದಿ ದೀಪ ವ್ಯವಸ್ಥೆ ಮಾಡಲಾಗುತ್ತದೆ, ಪೊಲೀಸ್ ಠಾಣೆಯಿಂದ ಲಕ್ಷ್ಮೀಪುರ ಸೇತುವೆವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು 371 (ಜೆ) 70 ಲಕ್ಷ ರೂ, ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುವುದು. 9.80 ಕೋಟಿ ರೂ ವೆಚ್ಚದಲ್ಲಿ ನಾರಿಹಳ್ಳ ಶುದ್ಧಿಕರಣ ಮಾಡಲಾಗುವುದು ಎಂದರು.

ಮುಠ್ಠಾಳನೊಬ್ಬ ನಾರಿಹಳ್ಳ ಶುದ್ಧಿಕರಣದ ಹೆಸರಿನಲ್ಲಿ ಅಕ್ರಮ ಮರಳು ದಂಧೆ ನಡೆಸುತ್ತಾರೆ ಎಂದು ದೂರಿದ ಹಿನ್ನೆಲೆಯಲ್ಲಿ ಕೆಲಸಕ್ಕೆ ಅಡಚಣೆಯಾಗಿತ್ತು.ನಂತರ ಅಧಿಕಾರಿಗಳಿಗೆ ಇಲ್ಲಿ ಮರಳು ಇಲ್ಲ, ದಂಧೆ ಮಾಡಲು ಹೇಗೆ ಸಾಧ್ಯ ಎಂದು ತಿಳಿ ಹೇಳಿದ ನಂತರ ಕಾಮಗಾರಿಗೆ ಚಾಲನೆ ಸಿಕ್ಕಿದೆ ಎಂದರು.

ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷೆ ಅನಿತಾ ವಸಂತ್ ಕುಮಾರ್, ಉಪಾಧ್ಯಕ್ಷ ವೀರೇಶ್ ಸಿಂಧೆ, ಮುಖಂಡರಾದ ಪಿ. ಜಯರಾಮ್, ನಿಂಗಪ್ಪ ಐಹೊಳೆ, ಸದಸ್ಯರಾದ ಎ. ಪಂಪಾಪತಿ, ಎಲ್.ಹೆಚ್.ಶಿವಕುಮಾರ್, ಕೆ.ವಿ.ಸುರೇಶ, ಮಾಳ್ಗಿ ರಾಮಣ್ಣ, ಸಂತೋಷ್, ಅಶೋಕ್, ಮಡಿವಾಳ ಸಂಘದ ಅಧ್ಯಕ್ಷ ಕೆ.ಎಂ.ಕುಮಾರಸ್ವಾಮಿ, ಉಪಾಧ್ಯಕ್ಷ ಎಂ. ನಾಗರಾಜ, ಪ್ರ.ಕಾರ್ಯದರ್ಶಿ ಡಿ ಕೃಷ್ಣಮೂರ್ತಿ, ಖಜಾಂಚಿ ಎನ್. ನಾಗರಾಜ,ನಿರ್ದೇಶಕ ಎಂ. ಗಂಗಣ್ಣ, ಸಹ ನಿರ್ದೇಶಕ ದೇವಗಿರಿ ಕಾರ್ತಿಕ್, ಕಾರ್ಯದರ್ಶಿ ಎಂ. ಕುಮಾರಸ್ವಾಮಿ, ಸಹ ಕಾರ್ಯದರ್ಶಿ ಉಗ್ರನರಸಿಂಹ, ಸಂಚಾಲಕ ಎಂ. ಶ್ರೀನಿವಾಸ್, ಅಂಬಿಗರ ಚೌಡಯ್ಯ ಸಂಘದ ಅಧ್ಯಕ್ಷ ರಾಘವೇಂದ್ರ, ವಾಲ್ಮೀಕಿ ಮುಖಂಡ ಡಿ. ವೀರಣ್ಣ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here