ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ದೊಡ್ಲ ಡೈರಿ ಲಿಮಿಟೆಡ್‍ನಿಂದ ವೈದ್ಯಕೀಯ ಉಪಕರಣಗಳ ಕೊಡುಗೆ

0
86

ಬಳ್ಳಾರಿ,ಏ.12 : ಕೋವಿಡ್-19 ವಿರುದ್ಧ ಹೊರಡುವ ಸಲುವಾಗಿ ದೊಡ್ಲಾ ಡೈರಿ ಲಿಮಿಟೆಡ್ ವತಿಯಿಂದ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ 1ಕೋಟಿ ರೂಪಾಯಿಗಳ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ನೀಡಿದೆ.
ದೊಡ್ಲ ಡೈರಿ ಪ್ರಾಯೋಜಿತ ಜಿಲ್ಲಾ ಆಸ್ಪತ್ರೆಯು ಮೇಲ್ದರ್ಜೆಗೇರಿದ ಐಸಿಯು ವಾರ್ಡ್‍ನ್ನು ದೊಡ್ಲ ಡೈರಿ ಲಿಮಿಟೆಡ್‍ನ ಮಾನವ ಸಂಪನ್ಮೂಲ ಮತ್ತು ಪೂರ್ಣಾವಧಿಯ ನಿರ್ದೇಶಕರಾದ ಮಧುಸೂಧನ್ ರೆಡ್ಡಿ ಹಾಗೂ ಕಾರ್ಖಾನೆಯ ವ್ಯವಸ್ಥಾಪಕರಾದ ಆರ್.ಟಿ.ರಾಘವೇಂದ್ರ, ಪ್ರಾದೇಶಿಕ ಹಾಲು ಸಂಗ್ರಹಣೆ ಉಸ್ತುವಾರಿ ವೆಂಕಟ ರೆಡ್ಡಿ.ಕೆ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎನ್.ಬಸರೆಡ್ಡಿ ಅವರು ಜಿಲ್ಲಾಸ್ಪತ್ರೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಅವರು, ನಮ್ಮ ಆಸ್ಪತ್ರೆಯ ಪರವಾಗಿ ದೊಡ್ಲ ಡೈರಿಗೆ ಮತ್ತು ಪ್ರಾಯೋಜಕತ್ವದ ಕಾಪೆರ್Çರೇಟ್‍ನ ಎಲ್ಲಾ ಸದಸ್ಯರಿಗೆ ಹೃದಯ ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಹಾಗೂ ನಮ್ಮ ಆಸ್ಪತ್ರೆಯಲ್ಲಿ “ಪ್ರಾಜೆಕ್ಟ್-ಐಸಿಯು” ಅನುμÁ್ಠನವನ್ನು ಮುಂದುವರಿಸುವಲ್ಲಿ ಅವರ ಉತ್ಸಾಹ ಮತ್ತು ನಿರಂತರ ಬೆಂಬಲಕ್ಕಾಗಿ ಸಿಇಒ-ನಿರ್ಮಾನ್ ಸಂಸ್ಥೆ ಮತ್ತು ಅವರ ತಂಡಕ್ಕೆ ನಮ್ಮ ವಿಶೇಷ ಧನ್ಯವಾದಗಳು ಭವಿಷ್ಯದಲ್ಲಿಯೂ ಅವರ ನಿರಂತರ ಬೆಂಬಲಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.
ಬಳ್ಳಾರಿ ಜಿಲ್ಲಾಸ್ಪತ್ರೆಯ ಸುಧಾರಣೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಆಗಿದ್ದ ನಂದಿನಿ ಅವರ ಶ್ರಮ ಅಪಾರವಾಗಿದೆ ಎಂದರು.
ದೊಡ್ಲ ಡೈರಿಯ ಮುಖ್ಯಸ್ಥ, ಮಾನವಸಂಪನ್ಮೂಲರಾದ ಮಧುಸೂಧನ ರೆಡ್ಡಿ ಅವರು ಮಾತನಾಡಿ, ಕೋವಿಡ್-19 ಸಾಂಕ್ರಾಮಿಕ ರೋಗಕ್ಕೂ ಮುನ್ನ ನಾವು ನಮ್ಮ ಸಮುದಾಯಗಳಿಗೆ ಬೆಂಬಲ ನೀಡುತ್ತಿದ್ದೇವೆ ಮತ್ತು ಜಿಲ್ಲಾ ಆಸ್ಪತ್ರೆಗೆ ನಿರ್ಣಾಯಕ ವೈದ್ಯಕೀಯ ಉಪಕರಣಗಳನ್ನು ಒದಗಿಸಲು ಈ ಅವಕಾಶವನ್ನು ಹೊಂದಲು ನಾವು ಸಂತೋಷ ಪಡುತ್ತೇವೆ ಎಂದು ತಿಳಿಸಿದರು.
ಮೂರನೇ ತರಂಗದ ಸಂಭವನೀಯ ಆಕ್ರಮಣದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಪ್ರಯತ್ನಗಳನ್ನು ಬಲಪಡಿಸುತ್ತದೆ ಮತ್ತು ಸಮುದಾಯಕ್ಕೆ ಪ್ರಯೋಜನಕಾರಿಯಾದ ದೀರ್ಘಾವಧಿಯ ಅಗತ್ಯಗಳನ್ನು ಹೊಂದಿದೆ. ಸಂಪೂರ್ಣ ಆಸ್ಪತ್ರೆಯನ್ನು ಗಮನಿಸಿದ ನಂತರ ನನಗೆ ತುಂಬಾ ಸಂತೋಷವಾಗಿದೆ ಎಂದರು.
*ದಾನಮಾಡಿದ ಸಲಕರಣೆ ವಿವರಗಳು: ಚಲನಶೀಲತೆಯೊಂದಿಗೆ ಐಸಿಯು ಫೌಲರ್ ಹಾಸಿಗೆಗಳು 30, ಬಹು-ಚಾನೆಲ್ ಮಾನಿಟರ್‍ಗಳು 20, ಇನ್ಫ್ಯೂಷನ್ ಪಂಪ್ಗಳು 15, ಆಮ್ಲಜನಕ ಡಿ ಮಾದರಿಯ ಸಿಲಿಂಡರ್‍ಗಳು 50, ಕ್ರ್ಯಾಶ್ ಕಾರ್ಟ್ ಐಸಿಯು ವೈದ್ಯಕೀಯ ಟ್ರಾಲಿ 10, ಇಸಿಜಿ ಯಂತ್ರಗಳು 4, ಎಕ್ಷ್ ರೇ 1, ಗಾಲಿ ಕುರ್ಚಿಗಳು 10, ಸ್ಟ್ರೆಚರ್ಸ್ 8, ಸರ್ಜಿಕಲ್ ಟ್ರಾಲಿ 5, ಗಣಕಯಂತ್ರ 2 ಸೇರಿದಂತೆ ಇತರೆ ಉಪಕರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

LEAVE A REPLY

Please enter your comment!
Please enter your name here