ಮಟ್ಕಾ ಕರಾಳ ದಂಧೆ..!!ಮಟ್ಕಾ ಖೇಲ್, ಮೊಬೈಲ್‌ನಲ್ಲೇ ಡೀಲ್ ಓಪನ್ನಿಗೆ ಊಟ ಇಲ್ಲ, ಕೋಸ್‌ಗೆ ನಿದ್ದೆ ಇಲ್ಲ.

0
412

ವಿಜಯನಗರ/ಕೊಟ್ಟೂರು:ಮೇ:10:-ಕೊಟ್ಟೂರು ತಾಲೂಕಿನಲ್ಲಿ ಮತ್ತೆ ಮತ್ತೆ ಮಟ್ಕಾ ಮಾಫಿಯಾ ತಲೆ ಎತ್ತುತ್ತಿದೆ. ಕೆಲ ತಿಂಗಳುಗಳ ಹಿಂದೆ ನಿಂತು ಹೋಗಿದ್ದ ಈ ದೋ-ನಂಬರ್ ಹಲ್ಕಟ್ ಮಟ್ಕಾ ಖೇಲ್ ಇಂದು ತಾಲೂಕಿನ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಇದರ ಹಾವಳಿ ಹೇಳತೀರದಾಗಿದೆ. ಸಣ್ಣವರಿಂದ ಹಿಡಿದು ದೊಡ್ಡವರ ತನಕ ಈ ದೋ-ನಂಬರ್‌ ಓಸಿ ಎಂಬ ಪಾಸಿಯ ಆಟ ಇಂದು ಅನೇಕ ಬಡ ಕೂಲಿಕಾರ್ಮಿಕರ ಮಡದಿ ಮಕ್ಕಳನ್ನು
ಬೀದಿಗೆ ತಂದು ನಿಲ್ಲಿಸಿದೆ. ದುರಂತವೆಂದರೆ ಈ ದೂ-ನಂಬರ್‌ನ ಖೇಲ್‌ನಲ್ಲಿ

ಏನಿದು ಮಟ್ಕಾ ಖೇಲ್ :
ಈ ಮಟ್ಕಾ ಎಂಬ ದೋ-ನಂಬರ್ ಆಟ 01 ರಿಂದ 99 ರ ಅಂಕಿಗಳ ಆಟ ಬಾಂಬೆ ಮತ್ತು ಕಲ್ಯಾಣಿ ಎಂಬ ಎರಡು ಪ್ರಕಾರದಲ್ಲಿ ನಡೆಯುವ ಈ ಆಟ ರೂ.ಗೆ 80ರಿಂದ 90ರೂ ಸಿಗುತ್ತದೆ. ಬೆಳಗಿನಿಂದ ಸಂಜೆ 7ರ ತನಕ ಅಂಕಿಗಳನ್ನು ಬರೆಸುವುದು ನಡೆಯುತ್ತದೆ. ನಂತರದಲ್ಲಿ ರಾತ್ರಿ ಸುಮಾರು 10.30ಕ್ಕೆ ಮಟ್ಕಾ ನಂಬರ್‌ನ ಒಂದು ಅಂದರೆ ಓಪನ್ ನಂಬರ್ ಬರುತ್ತದೆ. ನಂತರ ಒಂದು ಗಂಟೆ ಬಿಟ್ಟು ಕೊನೆಯ ನಂಬರ್ ಅಂದರೆ ಕ್ಲೋಸ್ ಬರುತ್ತದೆ. ಈ ರೀತಿಯಾಗಿ ಪ್ರತಿ ದಿನಲೂ ಎಲ್ಲರನ್ನು ಮರುಳು ಮಾಡಿ ತನ್ನದೆ ಆದ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡಿದೆ. ಓಪನ್ನಿಗೆ ಊಟ ಇಲ್ಲ. ಕ್ಲೋಸ್‌ಗೆ ನಿದ್ದೆ ಇಲ್ಲ.

ಈ ಮಟ್ಕಾ ಆಟದಲ್ಲಿ ನಂಬರ್ ಬರೆಸಿದವರ ಗೋಳು ಹೇಳತೀರದು, ತಾನು ಬರೆಸಿದ ಅಂಕಿಯಲ್ಲಿ ಮೊದಲನೆ ನಂಬರ್ ಬಂದಿತೆಂದರೆ ಅವನ ಸ್ಥಿತಿ ಹೇಳತಿರದು. ಅವನು ಕ್ಲೋಸ್ ಅಂದರೆ ಕೊನೆಯ ನಂಬರ್ ಬರುವ ತನಕ ನಿದ್ದೆನೇ ಮಾಡುವುದಿಲ್ಲ. ಕೊನೆಯ ಸಂಖ್ಯೆಗಾಗಿ ಚಡಪಡಿಸುತ್ತಲೇ ಇರುತ್ತಾನೆ. ಊಟ ಬಿಟ್ಟು ಬಕ ಪಕ್ಷಿಯಂತೆ ಕಾಯುತ್ತಾನೆ ಕೊನೆಗೆ ಕೊನೆ ನಂಬರ್‌ ಬಂದ ಮೇಲಂತೂ ನಿದ್ದೆಯನ್ನೆ ಮಾಡುವುದಿಲ್ಲ ಛೇ ಎಂತ ಮೋಸವಾಯಿತು ಓಪನ್ ನಂಬರ್ ಹಿಡಿದಿದ್ದ ಕ್ಲೋಸ್ ಕೈಕೊಟ್ಟಿತೆಂದು ಸಂಕಟಪಡುತ್ತಾ ರಾತ್ರಿಹಿಡಿ ಮಡದಿ ಮಕ್ಕಳ ಜೊತೆ ಸರಿಯಾಗಿರದೆ ತನ್ನ ಲೋಕದಲ್ಲೇ ದ್ಯಾನ ಮಾಡುತ್ತಾ ಅರೆ ಬರೆ ನಿದ್ದೆ ಮಾಡುತ್ತಾನೆ. ಎಂತ ವಿಚಿತ್ರ ನೋಡಿ ಓಪನ್
ಬರೋತನಕ ಊಟ ಇಲ್ಲ. ಕ್ಲೋಸ್ ಬಂದ ಮೇಲೂ ಊಟ ನಿದ್ದೆ ಇಲ್ಲ. ಹೋಟೆಲ್ ಬೀಡಾ ಅಂಗಡಿಗಳೇ ಅಡ್ಡಾ.. ಇವತ್ತು ಯಾರ ಹೆದರಿಕೆ ಇಲ್ಲದೆ ರಾಜರೋಷವಾಗಿ ನಡೆಯುತ್ತಿರುವ ಮಟ್ಕಾ ಎಂಬ ಮೂರಬಟ್ಟೆ ಮನೆಮುರುಕ ಆಟಕ್ಕೆ ಪಟ್ಟಣ ಹಾಗೂ ಹಳ್ಳಿಗಳಲ್ಲಿನ ಹೋಟೆಲ್ ಹಾಗೂ ಬೀಡಿ ಅಂಗಡಿಗಳ ಇದರ ಅಡ್ಡ, ಬೆಳಗಿನಿಂದ ಸಂಜೆಯ ತನಕ ಇಲ್ಲಿಂದಲೇ ಮಾಹಿತಿ ಶುರುವಾಗುವುದು. ಹೆಸರಿಗಷ್ಟೆ ಬೀಡಿ ಅಂಗಡಿ ಹೋಟೆಲ್‌ಗಳು ಇಲ್ಲಿ ಒಳಗಡೆ ನಡೆಯುವುದು ಮಟ್ಕಾ ಎಂಬ ಅಡಬಿ ಆಟ, ಕಮೀಷನ್‌ ಆಸೆಗೆ ಜೋತುಬಿದ್ದು ಕೆಲವರಂತೂ ಇದನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಮಟ್ಕಾ ಬರೆಯುವವರೇನು ಯಾವುದೇ ತರ ಬಂಡವಾಳ ಹಾಕಬೇಕಾಗಿಲ್ಲ. ಕುಂತಲ್ಲೇ ದಿನಕ್ಕೆ ಕನಿಷ್ಟ 500ರಿಂದ 1000ರೂ ತನಕ ಅಡಬಿ ಹಣ ಸಿಗುತ್ತದೆ. ಹೀಗಾಗಿ ಹಳ್ಳಿಗಳಲ್ಲಿ ಈ ಆಟ ಸಾಕಷ್ಟು ಪ್ರಮಾಣದಲ್ಲಿ ಬೇರೂರಿದೆ. ಯಾವುದೇ ಬಂಡವಾಳ ಹಾಕದೆ 500 ಸಾವಿರ ರೂ ಸಿಗುತ್ತದೆ ಎಂದರೆ ಯಾವ ಮೂರ್ಖ ಬೇಡವೆನ್ನುತ್ತಾನೆ. ಇವತ್ತು 10ರಿಂದ 12 ಎಕರೆ ನೀರಾವರಿ ಇರುವ ರೈತ ಕೂಡ ದಿನಕ್ಕೆ ಇಷ್ಟೊಂದು ಹಣ ಗಳಿಸಲಾರ.

ಮೊಬೈಲ್‌ನಲ್ಲೇ ಡೀಲ್.. ! ಅಂದು ಸಣ್ಣ ಪುಟ್ಟ ಚೀಟಿಗಳ ಮೇಲೆ ನಂಬರ್ ಬರೆದು ಕೊಡುತ್ತಿದ್ದ ಮಟ್ಕಾ ಬುಕ್ಕಿಗಳು ಇಂದು ಜಾಣತನದಿಂದ ಆಟ ನಡೆಸುತ್ತಿದ್ದಾರೆ. ಅಂದು ಪೋಲಿಸ್ ಮಾಮಗಳ ಕೈಗೆ ಸಿಕ್ಕು ಭರ್ಜರಿ ಒದೆ ತಿಂದು ಜೈಲೂಟ ಉಂಡ ಸನ್ನಿವೇಶ ನೆನಪಿಸಿಕೊಂಡು ಜಾಣರಾಗಿ ಎಚ್ಚೆತ್ತುಕೊಂಡು ಮೊಬೈಲ್ ನಲ್ಲೇ ಅಂಕಿ ಸಂಖ್ಯೆಗಳನ್ನು ಮೊಬೈಲ್‌ ನಂಬರ್‌, ನಂಬರ್‌ಗಳನ್ನು ಬರೆದಾರಳ್ಳುತ್ತಿದ್ದಾರೆ. ಇದು ಪಕ್ಕದಲ್ಲೇ ಪೊಲೀಸರು ಇದ್ದರು ಕೂಡ ಅವರಿಗೆ ತಿಳಿದಿರುವುದಿಲ್ಲ ಮೊಬೈಲ್ ನಲ್ಲೇ ಮಾತನಾಡುತ್ತ ಮೊಬೈಲ್ ನಂಬರ್ ಕೇಳುವ ತಡೆ ಹೇಳಿದರೆ ಯಾರಿಗೆ ತಾನೆ ಇದರ ಬಗ್ಗೆ ಅನುಮಾನ ಬರುತ್ತದೆ. ಈ ರೀತಿಯಿಂದಲೇ ಮಟ್ಕಾ ಬುಕ್ಕಿಗಳು ಬರೆಯುವವರ ರಕ್ಷಣಾ ಇಲಾಖೆಯ ಕಣ್ಣಿಗೆ ಮಣ್ಣೆರಚಿ ಹಳ್ಳಿಯಲ್ಲಿ ಕೆಲ ಯುವಕರನ್ನು ಇದಕ್ಕೆಂದು ನೇಮಿಸಿ ಇದನ್ನೇ ಮುಖ್ಯ ಕಸುಬಾಗಿ ಮಾಡಿಕೊಂಡಿದ್ದಾರೆ. ಕಮಿಷನ್ ಆಸೆಗೆ ನಾಲಿಗೆ ಚಾಚಿ ಅಡಬಿ ಹಣಕ್ಕೆ ಕೈ ಚಾಚಿ ಬಡ ಕೂಲಿ ಕಾರ್ಮಿಕರನ್ನು ಯಾಮಾರಿಸಿ ಅವರ ಹೆಂಡತಿ-ಮಕ್ಕಳನ್ನು ಬೀದಿಗೆ ತರುವ ಕೆಲಸ ಮಾಡುತ್ತಿದ್ದಾರೆ. ಇಂದು ಈ ದೋ-ನಂಬರ್ ಖೇಲ್‌ಗೆ ಅದೆಷ್ಟು ಬಡ ಕುಟುಂಬಗಳು ಕಣ್ಣೀರಿನಿಂದ ಕೈತೊಳೆಯುತ್ತೇವೆ. ರಕ್ಷಣಾ ಇಲಾಖೆ ಸಮರ್ಥವಾಗಿದೆ ಈ ದೋ-ನಂಬರ್ ಮಟ್ಕಾ ಖೇಲ್ ಖತಂ ಮಾಡಲು ರಕ್ಷಣಾ ಇಲಾಖೆ ಸಮರ್ಥವಾಗಿದೆ. ಈ ಮಟ್ಕಾ ಖೇಲ್ ದರ್ಬಾರ್ ರಕ್ಷಣಾ ಇಲಾಖೆಗೆ ಗೊತ್ತಿಲ್ಲವೇನೋ ಅಂತಲ್ಲ. ಎಲ್ಲಾ ಗೊತ್ತಿದೆ ಆದರೆ ಅದನ್ನು ಬರೆಯುವವರು ಆಡುವವರು ಮೊಬೈಲ್‌ನಲ್ಲೇ ಅಂಕಿ ಸಂಖ್ಯೆಗಳ ಡೀಲ್ ನಡೆಸುವುದರಿಂದ ಇದರ ಕಡಿವಾಣಕ್ಕೆ ಸ್ವಲ್ಪ ಕಷ್ಟವಾಗಿದೆ. ಈ ದೋ ನಂಬರ್ ಮಟ್ಕಾ ಖೇಲ್ ಖತಂ ಮಾಡಲು ರಕ್ಷಣಾ ಇಲಾಖೆ ಸನ್ನದವಾಗಿದೆ ಇದರ ಬಗ್ಗೆ ನಿಗಾವಹಿಸುತ್ತಲೇ ಇದೆ ಪೊಲೀಸ್ ಇಲಾಖೆ ಈ ವಿಚಾರದಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಲೇ ಇದೆ. ಈ ವಿಚಾರದಲ್ಲಿ ಸಾರ್ವಜನಿಕರ ಮಾಹಿತಿ ಸಹಕಾರ ಅತ್ಯವಶ್ಯಕವಾಗಿದೆ. ಏಕೆಂದರೆ ಮಟ್ಕಾ ಆಡುವವರು ಆಡಿಸುವವರು ಯಾರೆಂದು ಆಯಾ ಗ್ರಾಮಗಳ ಜನರಿಗೆ ಗೊತ್ತಿರುತ್ತದೆ. ಅಂತವರು ನೇರವಾಗಿ ರಕ್ಷಣಾ ಇಲಾಖೆಗೆ ಮಾಹಿತಿ ನೀಡಿ ಇಲ್ಲವೇ ಒಂದು ಫೋನ್ ಕಾಲ್ ಕರೆ ಮಾಡಿ ಮಾಹಿತಿ ನೀಡಿದರೆ ಮಟ್ಕಾ ಖೇಲ್ ಖತಂ ಮಾಡಲು ಸಹಾಯವಾಗುತ್ತದೆ. ಇವತ್ತು ಈ ಆಟ ಆಟದವರು ಹೊಲ ಮನೆ ಬೆಳ್ಳಿ ಬಂಗಾರ ಖರೀದಿ ಮಾಡಿದವರಿಲ್ಲ ಇವೆಲ್ಲವನ್ನು ಕಳೆದುಕೊಂಡವರೆ ನೂರಕ್ಕೆ ತೊಂಬತ್ತು ಜನ, ಒಬ್ಬನೆ ಒಬ್ಬ ಆಡುವವ ಆಡಿಸುವವ ಸಿಕ್ಕರೆ ಅಂತವರನ್ನು ಯಾರ ಒತ್ತಡಕ್ಕೆ ಮಣಿಯದೆ ಬೂಟುಗಾಲಿನ ರುಚಿ ತೋರಿಸಿ ಕತ್ತಲೆಯ ಕೋಣೆಯಲ್ಲಿ ರುಬ್ಬಿ ಬರೊಬ್ಬರಿ ಆರೇಳು ತಿಂಗಳುಗಳ ಕಾಲ ಜೈಲಿನಲ್ಲಿ ಮುದ್ದೆ ಮುರಿಯುವ ತರ ಕೇಸ್ ಎಟ್ಟಬೇಕು. ಹಳ್ಳಿಗಳಲ್ಲಿ ಅನೇಕ ಮಾನವಂತ ಮರ್ಯಾದೆಯಸ್ಥ ಕುಟುಂಬಗಳು ಇದಕ್ಕೆ ಬಲಿಯಾಗಿ ಸಾಲದ ಶೂಲಕ್ಕೆ ಸಿಲುಕಿವೆ. ಜೊತೆಗೆ ಕಣ್ಣೀರಿನಿಂದ ಕೈತೊಳೆದುಕೊಳ್ಳುತ್ತಿವೆ. ಅವರ ಕಣ್ಣೀರನ್ನು ಹೊರೆಸುವ ಕೆಲಸವನ್ನು ರಕ್ಷಣೆ ಮಾಡಲು ತಯಾರಿದೆ. ಅದಕ್ಕೆ ನಮ್ಮ ನಿಮ್ಮೆಲ್ಲರ ಸಹಕಾರ ಜೊತೆಗೆ ಮಾಹಿತಿ ನೀಡುವುದು ಅತ್ಯವಶ್ಯಕವಾಗಿದೆ. ಆ ನಿಮ್ಮ ನೆರ ಮಾಹಿತಿ ಅಥವಾ ಒಂದು ಫೋನ್ ಕರೆ ಒಂದು ಸಣ್ಣ ಕ್ಯೂ ಅನೇಕ ಬಡ ಕುಟುಂಬಗಳ ಮಡದಿ ಮಕ್ಕಳನ್ನು ರಕ್ಷಿಸುತ್ತದೆ. ಆ ಕೆಲಸವನ್ನು ಪ್ರಜ್ಞಾವಂತರಾದ ನಾಗರೀಕರು ಮಾಡ್ತಾರಾ..? ಈ ದೋ-ನಂಬರ್ ಮಟ್ಕಾ ಬೇಲ್ ಖತಂ ಆಗುತ್ತಾ..?

ವರದಿ: ಶಿವರಾಜ್ ಗಡ್ಡಿ

LEAVE A REPLY

Please enter your comment!
Please enter your name here