ರೆಸಾರ್ಟ್ ನಲ್ಲಿ ಕಾಂಗ್ರೆಸ್ ನವ ಸಂಕಲ್ಪ ಚಿಂತನಾ ಶಿಬಿರ

0
113

ಸಂಡೂರು:ಜೂ.29: ಜಿಲ್ಲೆಯ ಸಂಡೂರಿನ ಅನಿಲ್ ಲಾಡ್ ಅವರ ವಂಡರ್ ವ್ಯಾಲಿ ರೆಸಾರ್ಟ್ನಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಕಾಂಗ್ರೆಸ್ ಮುಖಂಡರು, ಪ್ರಮುಖ ಕಾರ್ಯಕರ್ತರನ್ನೊಳಗೊಂಡ ನವ ಸಂಕಲ್ಪ ಚಿಂತನಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಭೆಯಲ್ಲಿ ಪಕ್ಷ ಸಂಘಟನೆ ಜಿಲ್ಲೆಯ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಅವಲೋಕನ ಮುಂಬರುವ ಎಲ್ಲಾ ಚುನಾವಣೆಗಳ ಪೂರ್ವತಯಾರಿ ಬಗ್ಗೆ, ಬೂತ್, ಪಂಚಾಯತ್, ವಾರ್ಡ್, ಬ್ಲಾಕ್ ಮತ್ತು ಜಿಲ್ಲಾ ಮಟ್ಟದ ಸಮಿತಿಗಳು ಸಂಪೂರ್ಣ ರಚನೆ ಸಂಬಂಧ ಎಲ್ಲಾ ಸ್ಥಳೀಯ ಮುಖಂಡರುಗಳಿಗೆ ಕೆಪಿಸಿಸಿ ಪದಾಧಿಕಾರಿಗಳು ಈ ಮೇಲಿನ ಎಲ್ಲಾ ಸಮಿತಿಗಳ ಪ್ರದೇಶಗಳಿಗೆ ಭೇಟಿ ನೀಡಿ ಸಮಿತಿಗಳನ್ನು ಪೂರ್ಣಗೊಳಿಸುವ ಕುರಿತು ಚರ್ಚಿಸಿ ಎಲ್ಲಾ ಸಮಿತಿಗಳ ರಚನೆಯನ್ನು ಪೂರ್ಣಗೊಳಿಸುವುದು, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸೂಚಿಸಿರುವ ಎಲ್ಲಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತರುವುದು, ತಮ್ಮ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಬಿಜೆಪಿ ಸರ್ಕಾರಗಳ ವಿರುದ್ಧ ಪಕ್ಷದ ಪ್ರಸ್ತುತ ಹೋರಾಟ, ಪ್ರತಿಭಟನೆ, ಧರಣಿ ಸತ್ಯಾಗ್ರಹ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಪ್ರಸ್ತುತ ಇರುವ ನಿರುದ್ಯೋಗಿಗಳ ಯಥೋಚಿತ ಪಟ್ಟಿಯನ್ನು ಅಂಕಿ-ಅಂಶಗಳೊಂದಿಗೆ ತಯಾರಿಸಿ ಸಲ್ಲಿಸುವ ಬಗ್ಗೆ, ಪ್ರತಿ ಗ್ರಾಮ ಪಂಚಾಯತಿಯಲ್ಲಿ ನಿರುದ್ಯೋಗಿ ಯುವಕರ ಸರ್ವೆ ಮಾಡಲು ಒಂದು ಯುವಕರು ತಂಡಕ್ಕೆ ಜವಾಬ್ದಾರಿ ವಹಿಸುವುದು,

ಮಹಿಳಾ ಸಬಲೀಕರಣದ ಅಂಗವಾಗಿ “ನಾ ನಾಯಕಿ” ಕಾರ್ಯಕ್ರಮವನ್ನು ಕ್ಷೇತ್ರವಾರು ಆಯೋಜಿಸುವುದು,ಪಕ್ಷದ ಸ್ಥಿರಾಸ್ತಿ ಮತ್ತು ಸ್ವತ್ತುಗಳ ಬಗ್ಗೆ ಮತ್ತು ಎಲ್ಲ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಸ್ವಂತ ಕಟ್ಟಡ ಮತ್ತು ಕಛೇರಿಯನ್ನು ಹೊಂದುವ ಬಗ್ಗೆ, ಸ್ವಾತಂತ್ರ್ಯದ 75ನೇ ವರ್ಷದ ಸಂದರ್ಭವನ್ನು ಆಚರಿಸುವ ಸಂಬಂಧ ಪ್ರತಿಯೊಂದು ಜಿಲ್ಲಾ ಕಾಂಗ್ರೆಸ್ ಸಮಿತಿಯು ಆಗಸ್ಟ್ ತಿಂಗಳ 9ರಂದು ಪ್ರಾರಂಭವಾಗುವಂತೆ ಸ್ವಾತಂತ್ರ ಚಳುವಳಿಯ ಚೈತನ್ಯ ಮತ್ತು ಸಾರವನ್ನು ಪ್ರಚಾರಮಾಡಲು 75 ಕಿಲೋಮೀಟರ್ ಪಾದಯಾತ್ರೆಯನ್ನು ಆಗಸ್ಟ್ ತಿಂಗಳ ದಿನಾಂಕ 9 ರಿಂದ 14ರ ಒಳಗೆ ಹಮ್ಮಿಕೊಂಡು ಪೂರ್ಣಗೊಳಿಸುವುದು ಈ ಸಂಬಂಧ ರಾಜ್ಯಮಟ್ಟದ ಸಮಾರೋಪ ಕಾರ್ಯಕ್ರಮವನ್ನು ಆ 16 ಬೆಂಗಳೂರಿನಲ್ಲಿ ಆಚರಿಸಲಾಗುವುದು ಇದರ ಸಿದ್ದತೆ, ಜಿಲ್ಲಾ ಮತ್ತು ಬ್ಲಾಕ್ ಮಟ್ಟಗಳಲ್ಲಿ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರಲ್ಲಿ ಸಣ್ಣಪುಟ್ಟ ಗೊಂದಲ ಮನಸ್ತಾಪಗಳು ಏನಾದರೂ ಇದ್ದಲ್ಲಿ ಅವುಗಳನ್ನು ಸ್ಥಳೀಯವಾಗಿ ಚರ್ಚಿಸಿ ಪರಿಹರಿಸಿ ಪಕ್ಷದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಬಗ್ಗೆ ಚರ್ಚಿಸಲಿದೆಯಂತೆ.

ಜಿಲ್ಲೆಗೆ ಸಂಬಂಧಪಟ್ಟ ರಾಜ್ಯದ ಹಿರಿಯ ನಾಯಕರು, ಎಐಸಿಸಿ ಮತ್ತು ಕೆಪಿಸಿಸಿ ಪದಾಧಿಕಾರಿಗಳು, ಹಾಲಿ ಮತ್ತು ಮಾಜಿ ಸಂಸದರು ಶಾಸಕರು ಮತ್ತು ಲೋಕಸಭೆ ವಿಧಾನಸಭೆ ಮತ್ತು ವಿಧಾನಪರಿಷತ್ತಿಗೆ ಸ್ಪರ್ಧಿತ ಪಕ್ಷದ ಅಭ್ಯರ್ಥಿಗಳು, ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಮತ್ತು ನಗರಸಭೆ ಪುರಸಭೆ ಮತ್ತು ಪಟ್ಟಣ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು, ಕೆಪಿಸಿಸಿಯ ಜಿಲ್ಲೆಯಿಂದ ನಿಯೋಜಿತ ಉಸ್ತುವಾರಿಗಳು ಮತ್ತು ಸಂಯೋಜಕರು, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಜಿಲ್ಲಾಮಟ್ಟದ ಘಟಕಗಳ ವಿಭಾಗಗಳ ಅಧ್ಯಕ್ಷರುಗಳು ಎನ್.ಎಸ್.ಯು.ಐ,ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಸೇವಾದಳ ಮತ್ತು ಇಂಟಕ್ ನ ಜಿಲ್ಲಾಮಟ್ಟದ ಅಧ್ಯಕ್ಷರು ಪಾಲ್ಗೊಂಡಿದ್ದರು.

-ವರದಿ: ಕೆ.ಪಿ.ಕಾವ್ಯ,

LEAVE A REPLY

Please enter your comment!
Please enter your name here