ಶ್ರಾವಣಮಾಸದ ಸೋಮವಾರ ಶ್ರೀ.ಕುಮಾರಸ್ವಾಮಿಯ ದೇವಸ್ಥಾನದಲ್ಲಿ ವಿಶೇಷ ಪೂಜೆ

0
94

ಸಂಡೂರು:ಅ:10: ಆಷಾಡಮಾಸದ ಭೀಮನ ಅಮಾವಾಸೆ ಹಾಗೂ ಶ್ರಾವಣ ಮಾಸದ ಪ್ರಾರಂಭದ ದಿನವಾದ ಸೋಮವಾರದಂದು ಶ್ರೀ ಕುಮಾರಸ್ವಾಮಿ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು, ಸ್ವಾಮಿಯ ದರ್ಶನಕ್ಕೆ ಬ್ರಾಹ್ಮೀ ಮೂಹೂರ್ತದಲ್ಲಿ ಭಕ್ತರು ಕೋವಿಡ್ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಸರ್ ಬಳಸಿ ಮುಖಕ್ಕೆ ಮಾಸ್ಕ್ ಧರಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಮಾರ್ಗದ ಮದ್ಯದಲ್ಲಿ ಬರುವ ಶ್ರೀ ಹರಿಶಂಕರ,ಗಂಡಿ ನರಸಿಂಹಸ್ವಾಮಿ, ಮಲಿಯಮ್ಮ,ಉಡುಚಲಾ ಪರಮೇಶ್ವರಿ, ಗ್ರಾಮದೇವತೆ ಊರಮ್ಮದೇವಿ ದರ್ಶನಕ್ಕೂ ಸಹ ಭಕ್ತರ ದಂಡೂ ಸಾಗಿತ್ತು,
ಪಟ್ಟಣದ ಶ್ರೀ ವೀರಭದ್ರೇಶ್ವರ, ಚಂದ್ರಮೌಳೇಶ್ವರ, ಶ್ರೀ ಪೇಟೆ ಬಸವೇಶ್ವರ ದೇವಸ್ಥಾನಗಳಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿ, ತಮ್ಮ ಭಕ್ತಿಯನ್ನು ಸಮರ್ಪಿಸಿ ದರ್ಶನ ಪಡೆದು ಕೊಂಡರು.

ಶ್ರೀ ಕುಮಾರಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಗೆ ಅಲಂಕಾರ ಪೂಜೆ, ಅಭಿಷೇಕ ಪ್ರತಿ ವರ್ಷದ ಪದ್ದತಿಯಂತೆ ಸಾಂಪ್ರದಾಯಿಕ ಅಲಂಕಾರದಿಂದ ಕಂಗೋಳಿಸುವಂತೆ ಮಾಡಲಾಗಿತ್ತು, ಸ್ವಾಮಿಯ ದೇವಸ್ಥಾನದಲ್ಲಿ ಪ್ರಸಾದ, ಮಂಗಳಾರತಿ, ವಿಶೇಷ ಪೂಜೆಗಳಿಗೆ ಕೋವಿಡ್ ಮಾರ್ಗಸೂಚಿಯಂತೆ ಅವಕಾಶ ಇಲ್ಲವಾಗಿದ್ದು ಭಕ್ತರಿಗೆ ಸ್ವಾಮಿಯ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು, ಉಳಿದಂತೆ ಭಕ್ತರು ದರ್ಶನ ಪಡೆದು ಸಂತೃಪ್ತಿ ಭಾವನೆಯಿಂದ ಹೊರ ನಡೆದರು, ಶ್ರಾವಣ ಮಾಸದ ಪ್ರಾರಂಭದ ದಿನದಲ್ಲಿ ಪರಸ್ಥಳದಿಂದ ಬರುವ ಭಕ್ತರ ಸಂಖ್ಯೆ ಇಳಿಮುಖವಾದರೂ ಸ್ವಾಮಿಯ ದರ್ಶನಕ್ಕೆ ಮೂರನೆ ಸೋಮವಾರ ಏರಿಕೆಯಾಗುವ ಲಕ್ಷಣಗಳಿವೆ

ವರದಿ:-ರಾಜು ಪಾಳೇಗಾರ್

LEAVE A REPLY

Please enter your comment!
Please enter your name here