ಹೊಸಜೋಗಿಕಲ್ಲು ಗ್ರಾಮದ ಐತಿಹಾಸಿಕ ಶ್ರೀ ಚಿನ್ನಾಪುರದಯ್ಯಸ್ವಾಮಿ ದೇವಸ್ಥಾನದ ಗೋಪುರ ಬಿದ್ದು ಭಕ್ತರಲ್ಲಿ ಅತಂಕ..!!?

0
200

ಹಾಯ್ ಸಂಡೂರ್ ವಾರ್ತೆ
ಸಂಡೂರು :ಅ:13: ತಾಲೂಕಿನ ಬಂಡ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೊಸಜೋಗಿಕಲ್ಲು ಗ್ರಾಮದ ಹತ್ತಿರದ
ಶ್ರೀ.ಚಿನ್ನಾಪುರದಯ್ಯಸ್ವಾಮಿ ದೇವಸ್ಥಾನದ ಗೋಪುರ ಮತ್ತು ಕಳಸ ಬಿದ್ದಿದ್ದು ಭಕ್ತರಲ್ಲಿ ಅತಂಕ ಮನೆ ಮಾಡಿದೆ. ಅದರೆ ಯಾವುದೇ ಅಪಾಯ ಉಂಟಾಗಿಲ್ಲ,

ತಾಲೂಕಿನ ಐತಿಹಾಸಿಕ ಕೇಂದ್ರವಾದ ಶ್ರೀ ಚಿನ್ನಾಪುರದಯ್ಯಸ್ವಾಮಿ ದೇವಸ್ಥಾನ ಅತಿ ಪುರಾತನವಾದದು, ಕಾರಣ ಬರೀ ಸಂಡೂರು ತಾಲೂಕಿನ ಭಕ್ತರಲ್ಲಿ ಆಲ್ಲ ಅತಿ ಹೆಚ್ಚು ಕೂಡ್ಲಿಗಿ ತಾಲೂಕಿನ ಪ್ರತಿ ಮನೆಯಲ್ಲಿಯೂ ಸಹ ಮನೆದೇವರ ಭಕ್ತರು ಇದ್ದಾರೆ, ಇಂತಹ ಐತಿಹಾಸಿಕವಾದ ದೇವಾಸ್ಥಾನದ ಗೋಪುರ ಬುಧವಾರ ರಾತ್ರಿ ಬಿದ್ದ ಮಳೆಗೆ ಕುಸಿದು ಬಿದ್ದಿದೆ, ಇದರಿಂದ ಸಾವಿರಾರು ಭಕ್ತರು ಬೆಳಿಗ್ಗೆ ನೋಡಲು ದಾವಿಸಿದ್ದರು, ಒಟ್ಟಾರೆಯಾಗಿ ಸಂಡೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಬಳ್ಳಾರಿಯಿಂದ ಸಾವಿರಾರು ಭಕ್ತರು ಪ್ರತಿವರ್ಷ ರಥೋತ್ಸವಕ್ಕೆ ತಪ್ಪದೇ ಹಾಜರಾಗುತ್ತಾರೆ, ಅಲ್ಲದೆ ವಾರಗಟ್ಟಲೆ ಪೌಳಿ ಹಾಕಿಕೊಂಡು ಇದ್ದು ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ ಅಲ್ಲದೆ ಕಳೆದ ವರ್ಷ ರಥಕ್ಕೆ ನೂತನ ಕಲ್ಲಿನ ಗಾಲಿಗಳನ್ನು ಮಾಡುವ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದ್ದರು.


ಶ್ರಾವಣ ಮಾಸದ ಈ ಶುಭ ಸಂದರ್ಭದಲ್ಲಿ ಸ್ವಾಮಿಯ ಗೋಪುರ ಬಿದ್ದಿರುವುದು ಹಲವು ಅಪಶಕುನಗಳಿಗೆ ಕಾರಣವಾಗಬಹುದು ಎಂದು ಭಕ್ತರ ಮನದಲ್ಲಿ ಮನೆ ಮಾಡಿದೆ,

ಈ ಬಗ್ಗೆ ದೇವಸ್ಥಾನದ ಅರ್ಚಕರಾದ ಚಿದಾನಂದಪ್ಪ ಅವರು ಪ್ರತಿಕ್ರಿಯಿಸಿ ಸುಮಾರು 40 ರಿಂದ 45 ವರ್ಷ ಹಳೆಯದಾಗಿದ್ದು ಅಲ್ಲದೆ ಮಣ್ಣಿನಿಂದ ಕಟ್ಟಿದ ಗೋಪುರವಾಗಿದೆ, ಗೋಪುರದ ಕುಂಬದಲ್ಲಿ ಬಿರುಕು ಬಿಟ್ಟಿದ್ದು ಅದಕ್ಕೆ ಸುಣ್ಣ ಬಣ್ಣ ಹಚ್ಚುವ ಮೂಲಕ ತಡೆಯಲಾಗಿತ್ತು. ಇತ್ತೀಚೆಗೆ ಅದರಲ್ಲಿ ನೀರು ಸೇರಿಕೊಂಡ ಪರಿಣಾಮ ಗೋಪುರ ಬಿದ್ದಿರಬಹುದು, ಅದರೆ ಯಾವ ಭಕ್ತರು ಸಹ ಅತಂಕಕ್ಕೆ ಒಳಪಡುವುದು ಬೇಡ, ಕಾರಣ ಪ್ರಕೃತಿಯಲ್ಲಿ ಉಂಟಾದ ಮಳೆ ಮತ್ತು ಗಾಳಿಯಿಂದ ಈ ಘಟನೆ ಸಂಭವಿಸಿದೆ, ಶೀಘ್ರದಲ್ಲಿಯೇ ಎಲ್ಲಾ ಭಕ್ತ ಸಮೂಹ ಸೇರಿ ನೂತನ ಗೋಪುರ ನಿರ್ಮಾಣಕ್ಕೆ ನಾಂದಿ ಹಾಡಲಾಗುವುದು ಎಂದರು.

LEAVE A REPLY

Please enter your comment!
Please enter your name here