ಸಂಡೂರು ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಮಾಜಿ ಶಾಸಕ ಸಂತೋಷ್ ಎಸ್ ಲಾಡ್ ಆಗ್ರಹ..!

0
139

ಹಾಯ್ ಸಂಡೂರ್ ವಾರ್ತೆ
ಸಂಡೂರು :ಅ:13: ಕಾರ್ತಿಕ್ ಘೋರ್ಪಡೆಯವರು ಎಷ್ಟೇ ಬೈದರೂ ನಮ್ಮ ಸಹೋದರ ಸಮಾನರು, ಅದರೆ ಕೇಂದ್ರ ಮತ್ತು ರಾಜ್ಯದಲ್ಲಿ ಅವರದೇ ಅದ ಸರ್ಕಾರವಿದೆ ತಾಲೂಕಿನ ಎಲ್ಲಾ ಕೆರೆಗಳಿಗೆ ನೀವೇ ಹೇಳಿದಂತೆ ನೀರು ತುಂಬಿಸಿ ಎಂದು ಮಾಜಿ ಕಾರ್ಮಿಕ ಸಚಿವ ಹಾಗೂ ಬಳ್ಳಾರಿ ಜಿಲ್ಲಾ ಕರೋನಾ ಪರಿಹಾರ ಅನುಷ್ಠಾನ ಉಸ್ತುವಾರಿ ಸಂತೋಷ್ ಎಸ್ ಲಾಡ್ ಆಗ್ರಹಿಸಿದರು.

ಅವರು ಪಟ್ಟಣದ ಕಛೇರಿಯಲ್ಲಿ ಕೋವಿಡ್ ಅನುಷ್ಠಾನ ಸಭೆಯನ್ನು ಉದ್ದೇಶಿಸಿ ಮಾತನಾಡಿ ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು ಅಭಿವೃದ್ದಿ ಕಂಡ ತಾಲೂಕು ಸಂಡೂರಾಗಿದೆ, ನಂಜುಂಡಪ್ಪ ವರದಿಯಲ್ಲಿ ಅತಿ ಹಿಂದುಳಿದ ತಾಲೂಕಾಗಿದ್ದನ್ನು ಇಂದು ನಂಬರ್ ಒನ್ ಮಾಡಿದ ಕೀರ್ತಿ ತುಕರಾಂ ಅವರಿಗೆ ಸಲ್ಲುತ್ತದೆ, ನಾವು ಕುಡಿಯುವ ನೀರಿಗೆ ತುಂಗಭದ್ರಾ ಡ್ಯಾಂ ನೀರನ್ನು ಹೋರಾಟದ ಮೂಲಕ ತಂದೆವು, ಅದರೆ ಈಗ ಕಾರ್ತಿಕ್ ಘೋರ್ಪಡೆಯವರು ಬರೀ ಬೈಯುವುದಲ್ಲ, ಬದಲಿಗೆ ತುಂಗಭದ್ರಾ ನೀರನ್ನು ಸಂಡೂರು ತಾಲೂಕಿನ ಎಲ್ಲಾ ಕರೆಗಳಿಗೆ ತುಂಬಿಸಿದರೆ ಮೊದಲು ಸಂತೋಷ ಪಡುವವರು ತುಕರಾಂ ಹಾಗೂ ಸಂತೋಷ್ ಲಾಡ್,

ಇನ್ನೂ ಜಿ.ಟಿ. ಪಂಪಾಪತಿಯವರು ನಾವು ಒಂದೇ ತಟ್ಟೆಯಲ್ಲಿ ಊಟ ಮಾಡಿದವರು ಇಂದು 10% ಶಾಸಕ ಎಂದು ಹೇಳಿದ್ದು ನೋವು ತಂದಿದೆ, ಕಾರಣ ಬಿಜೆಪಿಯ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿದೆ, ಅವರದೇ ಅಧಿಕಾರಿಗಳಿದ್ದಾರೆ, ಅವರಿಂದ ನೇರ ತನಿಖೆ ಮಾಡಿಸಲಿ, ಇಲ್ಲವೇ ಅವರ ಅಧಿಕಾರಿಗಳೇ ಭ್ರಷ್ಟರೇ..? ಅಭಿವೃದ್ದಿ ವಿಚಾರದಲ್ಲಿ ರಾಜಿ ಇಲ್ಲ, ರಾಜಕೀಯ ಏನೇ ಇರಲಿ ಸಂಡೂರನ್ನು ಅಭಿವೃದ್ದಿ ಪಡಿಸಲಿ,
ಇಡೀ ದೇಶದ ಎಲ್ಲಾ ಮಾದ್ಯಮಗಳು ಸಾರಿದವು, ಕರೋನಾದ ಔಷಧಿ, ಕಿಟ್‍ಗಳಲ್ಲಿ ಬಿಜೆಪಿ ಸರ್ಕಾರ ಸಾವಿರಾರು ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು, ಅದನ್ನು ಅವಲೋಕನ ಮಾಡಿಕೊಳ್ಳಬೇಕು ಪಂಪಾಪತಿಯವರು, ಅವರು ಎಷ್ಟೇ ಅರೋಪ ಮಾಡಲಿ ಅದು ಸತ್ಯವಾಗಿರಲಿ, ಬಾಯಿಗೆ ಬಂದಂತೆ ಅರೋಪಿಸುವುದು ಸರಿಯಲ್ಲ,

ನೇರ ಸವಾಲನ್ನು ಹಾಕುತ್ತಿದ್ದೇವೆ, 2004 ರಿಂದ 2021ರ ಅವಧಿಯಲ್ಲಿ ಬೇರೆ ಕ್ಷೇತ್ರಗಳಿಗೆ ಹೋಲಿಕೆ ಮಾಡಿ ಶಿಕ್ಷಣ, ಆರೋಗ್ಯ, ರಸ್ತೆ, ಮೂಲಭೂತಸೌಲಭ್ಯ, ದೇವಸ್ಥಾನ ನಿರ್ಮಾಣ, ಎಲ್ಲಾ ವಿಭಾಗದಲ್ಲಿ ಸ್ವಾವಲಂಬಿತನದಿಂದ ಪ್ರಗತಿ ಸಾಧಿಸಿದ್ದೇವೆ, ಅದರೆ ಇಂತಹ ಸುಳ್ಳು ಅರೋಪಗಳು ಬೇಡ, ಈಗ ನಿಮ್ಮದೇ ಸರ್ಕಾರವಿದೆ, ಅನುದಾನ ತನ್ನಿ, ಪ್ರಗತಿ ಸಾಧಿಸಿ ಜನರ ಮುಂದೆ ಇಡಿ, ಬರೀ ಬಾಯಿಮಾತಲ್ಲ ಎಂದು ನೇರವಾಗಿ ಟೀಕಿಸಿದರು. ಅಲ್ಲದೆ ಕರೋನಾ ಸಾವಿನ ಸಂಖ್ಯೆಯ ಸುಳ್ಳು ವರದಿಯನ್ನು ನೀಡುತ್ತಿದ್ದಾರೆ, ಅದರ ವಸ್ತುಸ್ಥಿತಿಯನ್ನು ಜನರ ಮುಂದೆ ಇಟ್ಟು ನಿಜವಾದ ಸಾವಿನ ಸಂಖ್ಯೆ ತಿಳಿಸಬೇಕು, ಅಭಿವೃದ್ದಿಯ ಪಥದಲ್ಲಿ ಸಾಗಿದ ಅಂಶಗಳನ್ನು ಜನರಿಗೆ ತಿಳಿಸಿ ಎಂದು ಕರೆನೀಡಿದರು.

ಈ ಸಂದರ್ಭದಲ್ಲಿ ಶಾಸಕ ಹಾಗೂ ಮಾಜಿ ಸಚಿವ ಈ.ತುಕರಾಂ ಅವರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಗಾಳಿಗೆ ತೂರುತ್ತಿವೆ, ಪ್ರಜಾಪ್ರಭುತ್ವದಲ್ಲಿ ನ್ಯಾಯ ಮತ್ತು ಜನಪರ ನೀತಿಗಳು ಇಂದು ಇಲ್ಲವಾಗುತ್ತಿವೆ, ಕರೋನಾದಂತಹ ಮಹಾಮಾರಿ ಜನರನ್ನು ಕಾಡುತ್ತಿದ್ದರೂ ಸಹ ಸಾವಿನಲ್ಲಿ ಹಣ ಗಳಿಸುವ ತಂತ್ರಗಾರಿಕೆಯನ್ನು ಬಿಜೆಪಿಯವರು ಮಾಡುತ್ತಿದ್ದಾರೆ, ಅದರೆ ವಿರೋಧ ಪಕ್ಷ ಟೀಕೆ ಮಾಡುತ್ತದೆ ಎಂದು ಹೇಳುವುದು ಸರಿಯಲ್ಲ, ನಿಜವಾದ ಪ್ರಗತಿ ಇಲ್ಲವಾಗಿದೆ, ಸಂವಿಧಾನ ಬದ್ಧವಾಗಿ ಸಾರ್ವಜನಿಕರನ್ನು ದಾರಿತಪ್ಪಿಸುವ ಕೆಲಸ ಮಾಡದೆ ಅಭಿವೃದ್ದಿ ಮಾಡಿ, ಮುಂದಿನ ದಿನಗಳಲ್ಲಿ ಜನರೇ ಉತ್ತರ ಕೊಡುವರು ಎಂದರು.

ಸಭೆಯಲ್ಲಿ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಶಿವಯೋಗಿ, ಮಹಿಳಾ ಘಟಕದ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಪುರಸಭೆಯ ಅಧ್ಯಕ್ಷೆ ಅನಿತಾ ವಸಂತಕುಮಾರ್, ಜಿಲ್ಲಾ ಕಾಂಗ್ರೇಸ್ ಯುವ ಘಟಕದ ಅಧ್ಯಕ್ಷ ರಫಿಕ್, ಮಾಜಿ ವಿಧಾನಪರಿಷತ್ ಸದಸ್ಯ ಕೆ.ಎಸ್.ಎಲ್. ಸ್ವಾಮಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಏಕಾಂಬರಪ್ಪ, ನಾಗರಾಜ ದಾವಣಗೆರೆ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮಣ, ಮುಖಂಡರಾದ ರಮೇಶ್ ಗಡಾದ್, ಜಿ.ಎಸ್. ಸೋಮಪ್ಪ, ಕೆ.ಸತ್ಯಪ್ಪ, ಇತರ ಹಲವಾರು ಕಾಂಗ್ರೇಸ್ ಮುಖಂಡರು, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here