ಫೆಲೋಶಿಪ್/ ದಾಖಲೀಕರಣಕ್ಕೆ ಅಭ್ಯರ್ಥಿಗಳ ಆಯ್ಕೆ ಸಭೆ

0
148

ಮಡಿಕೇರಿ ಆ.16 :-ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ 2020-2021 ನೇ ಸಾಲಿನ ಫೆಲೋಶಿಪ್ / ದಾಖಲೀಕರಣಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಭೆಯು ಅಕಾಡೆಮಿಯ ಕಚೇರಿಯಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
ಈ ಸಭೆಗೆ ಡಾ.ತೀತಿರ ರೇಖಾ ವಸಂತ್ ಇವರು ವಿಷಯ ತಜ್ಞರಾಗಿ ಆಗಮಿಸಿದ್ದರು. ಅಲ್ಲದೇ ಈ ಸಭೆಯಲ್ಲಿ ಅರ್ಥ ಸದಸ್ಯರಾದ ದರ್ಶನ ಕೆ.ಟಿ, ಅಕಾಡೆಮಿಯ ರಿಜಿಸ್ಟ್ರಾರ್ ಆಗಿರುವ ಅಜ್ಜಿಕುಟ್ಟಿರ.ಸಿ.ಗಿರೀಶ್, ಅಕಾಡೆಮಿಯ ಸದಸ್ಯರಾದ ಮಾಚಿಮಾಡ ಜಾನಕಿ ಮಾಚಯ್ಯ, ಪಡಿಞರಂಡ ಪ್ರಭುಕುಮಾರ್, ಡಾ.ಮುಲ್ಲೇಂಗಡ ರೇವತಿ ಪೂವಯ್ಯ, ತೇಲಪಂಡ ಕವನ್ ಕಾರ್ಯಪ್ಪ ಇವರುಗಳು ಭಾಗಿಯಾಗಿದ್ದರು. ಸಭೆಗೆ ಆಗಮಿಸಿದ್ದ ಅಭ್ಯರ್ಥಿಗಳು ತಾವು ಫೆಲೋಶಿಪ್/ ದಾಖಲೀಕರಣಕ್ಕೆ ಆಯ್ಕೆ ಮಾಡಿಕೊಂಡ ವಿಷಯದ ಬಗ್ಗೆ ಮಾಹಿತಿ ನೀಡಿದರು. ಅವರು ಆಯ್ಕೆ ಮಾಡಿಕೊಂಡ ವಿಷಯವು ಹೀಗಿವೆ.
ಮೊಣ್ಣಂಡ ಶೋಭಾ ಸುಬ್ಬಯ್ಯ ಶತಮಾನದ ಅವಧಿಯಲ್ಲಿ ಬದಲಾದ ಕೊಡವ ಪದ್ದತಿ ಪರಂಪರೆ ಪಟ್ಟೋಲೆ ಪಳಮೆಯ ಹಿನ್ನೆಲೆಯಲ್ಲಿ, ಡಾ.ಡಿ.ಸಿ.ನಂಜುಂಡ ಅವರು ಮಾನವ ಮತ್ತು ವನ್ಯ ಜೀವಿ ಸಂಘರ್ಷ, ಎನ್.ಸಿ.ಅನಿತಕುಮಾರಿ ಅವರು ಕೊಡಗ್‍ರ ನಾಡ್ ಮದ್ದ್‍ಕಾರ (ದಾಖಲೀಕರಣ), ಪ್ರವೀಣ್ ಕುಮಾರ್ ಎ.ಸಿ (ಅಮ್ಮಣಿಚಂಡ) ಅವರು ಕೆಂಗಳಮೆ ಕಿಗ್ಗಟ್ಟ್ ಮಾದೇವಡ ತಿರಿಕೆ ಮತ್ತು ರಿನಿ ಚಿಣ್ಣಪ್ಪ ಅವರು ಸರಿತಾ ಮಂದಣ್ಣ ‘ಟೈಗರ್ ಹಿಲ್ಸ್’ ವುಮನ್ ಇನ್ ರೆಸಿಸ್ಟೆನ್ಸ್ Sarita Mandanna’s “Tiger Hills” “Woman in Resistance”) ಇವರು ಅಕಾಡೆಮಿಯ ನಿಯಮಗಳಿಗೆ ಒಪ್ಪಿಗೆ ನೀಡಿ ಈ ಫೆಲೋಶಿಪ್ ಅಧ್ಯಯನವನ್ನು ಮುಂದುವರೆಸುತ್ತಾರೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here