ಹಂಪಿಯ ವಿಶ್ವಪಾರಂಪರಿಕ ತಾಣಗಳನ್ನು ವೀಕ್ಷಿಸಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ವೈಭವದ ವಿಜಯನಗರ ಸಾಮ್ರಾಜ್ಯಕ್ಕೆ ಯುವಸಮೂಹ ಭೇಟಿ ನೀಡಲಿ

0
198

ಹೊಸಪೇಟೆ(ವಿಜಯನಗರ),ಆ.21: ನಮ್ಮ ಪುರಾತನ ಸಂಸ್ಕøತಿ, ಶ್ರೀಮಂತ ಪರಂಪರೆ ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸಲು ವೈಭವದಿಂದ ಮೆರೆದಿದ್ದ ವಿಜಯನಗರ ಸಾಮ್ರಾಜ್ಯ ಮತ್ತು ಶ್ರೀಕೃಷ್ಣದೇವರಾಯ ಹಾಗೂ ಅವರ ಆಡಳಿತದ ಶೈಲಿ ಪಠ್ಯಕ್ರಮದ ಭಾಗವಾಗಬೇಕು ಮತ್ತು ಇದಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಶ್ರೀಕೃಷ್ಣದೇವರಾಯ ಮತ್ತು ಈ ಸಾಮ್ರಾಜ್ಯದ ಬಗ್ಗೆ ಬಗ್ಗೆ ಇತಿಹಾಸಕಾರರು ಹೆಚ್ಚಿನ ಒತ್ತು ನೀಡಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಹೇಳಿದರು.
ಹಂಪಿಯ ವಿಶ್ವಪಾರಂಪರಿಕ ಸ್ಮಾರಕಗಳನ್ನು ವೀಕ್ಷಿಸಿದರ ನಂತರ ಅವರು ವಿಜಯ ವಿಠ್ಠಲ ಮಂದಿರ ಆವರಣದಲ್ಲಿರುವ ಕಲ್ಲಿನ ರಥದ ಎದುರುಗಡೆ ಅವರು ಮಾತನಾಡಿದರು.
ಶ್ರೀ ಕೃಷ್ಣ ದೇವರಾಯ ಕೇವಲ ಓರ್ವ ರಾಜನಾಗಿರದೇ ಅವರು ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಸಂಸ್ಕøತಿ,ಸಂಗೀತ,ಶಿಕ್ಷಣ ಮತ್ತು ಉತ್ತಮ ಆಡಳಿತಕ್ಕೆ ಒತ್ತು ನೀಡಿದ್ದ ಎಂದು ಹೇಳಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ದೇಶದ ಯುವಪೀಳಿಗೆ ವೈಭವದಿಂದ ಮೆರೆದಿದ್ದ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಗೆ ಭೇಟಿ ನೀಡಬೇಕು; ಈ ಮೂಲಕ ಗತವೈಭವದಿ ಮೆರೆದ ನಮ್ಮ ಶ್ರೀಮಂತ ಸಾಮ್ರಾಜ್ಯ ಮತ್ತು ಸುಂದರ ವಾಸ್ತುಶಿಲ್ಪಶೈಲಿಯ ಬಗ್ಗೆ ಹೆಮ್ಮೆ ಪಡುವ ಮತ್ತು ತಿಳಿದುಕೊಳ್ಳುವ ಕೆಲಸ ಮಾಡಬೇಕು ಎಂದರು.
ಹಂಪಿ ಹಾಗೂ ಸುತ್ತಮುತ್ತಲಿನ ಸ್ಮಾರಕಗಳು ಸಂರಕ್ಷಿಸುವುದಕ್ಕೆ ಸಾರ್ವಜನಿಕರು ಕೈಜೋಡಿಸಬೇಕು;ಅದರಲ್ಲೂ ವಿಶೇಷವಾಗಿ ಈ ಭಾಗದ ಜನರು ಸ್ಮಾರಕಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಎಲ್ಲರೂ ಎಎಎಸ್‍ಐ ಜೊತೆ ಕೈಜೋಡಿಸಬೇಕು ಎಂದರು.
ವಿಜಯನಗರ ಸಾಮ್ರಾಜ್ಯದ ವಿಶ್ವಪಾರಂಪರಿಕ ತಾಣಗಳನ್ನು ನೋಡಿ ತುಂಬಾ ಸಂತಸವಾಗಿದೆ ಎಂದರು.
ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಎಂ.ಉಷಾ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here