ಕನ್ನಡದ ಸೇವೆಗೆ ನಾನು ಸದಾ ಸಿದ್ಧನಿದ್ದೇನೆ ಕನ್ನಡ ಭವನ ಬುದ್ಧಿಜೀವಿಗಳ ತಾಣವಾಗಲಿ: ಶಾಸಕ ಈ ತುಕಾರಾಂ ಅಭಿಮತ

0
181

ಸಂಡೂರು:ಸೆ:04; ಕನ್ನಡದ ಸೇವೆಗೆ ನಾನು ಸದಾ ಸಿದ್ಧನಿದ್ದೇನೆ 1ಕೋಟಿ 25 ರೂ ಲಕ್ಷ ಅನುದಾನದಾಲ್ಲಿ ಕನ್ನಡ ಭವನದ ನಿರ್ಮಾಣಕ್ಕಾಗಿ ಮೀಸಲಿರಿಸಲಾಗಿದೆ,ಈ ಭವನವು ಬುದ್ಧಿಜೀವಿಗಳ ತಾಣವಾಗಿ ಸಾಹಿತ್ಯ ಸಂಸ್ಕೃತಿ ಕಲೆಗಳ ವೇದಿಕೆಯಾಗಲು ಅತ್ಯಂತ ಶೀಘ್ರವಾಗಿ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಈ.ತುಕಾರಾಮ್ ತಿಳಿಸಿದರು.

ಅವರು ಸಂಡೂರು ಪಟ್ಟಣದ ಕೃಷ್ಣನಗರ ಬಳಿಯ ತಿಮ್ಮಪ್ಪನ ಗುಡಿ ರಸ್ತೆಯಲ್ಲಿ ಕನ್ನಡ ಭವನದ ಭೂಮಿ ಪೂಜೆಯನ್ನು ಶುಕ್ರವಾರ ನೆರವೇರಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾದಂತಹ ಸಿದ್ಧರಾಮ ಕಲ್ಮಠ ಅವರು ಮಾತನಾಡಿ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಕ್ರಿಯಾಶೀಲವಾಗಿ ನಡೆಯಲು ಮಾನ್ಯ ಶಾಸಕರು ಹಾಗೂ ತಾಲ್ಲೂಕು ಅಧ್ಯಕ್ಷರು ಕಾರಣ ಈ ಹಿನ್ನೆಲೆಯಲ್ಲಿ ಇಂತಹ ಭವನ ನಿರ್ಮಾಣ ನನ್ನ ಭಾಗ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಅಧ್ಯಕ್ಷ ನಾಗನಗೌಡರು ಈ ಭಾಗದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶಾಸಕರು, ಜಿಲ್ಲಾಧ್ಯಕ್ಷರಿಗೆ ಹಾಗೂ ಕನ್ನಡಾಭಿಮಾನಿಗಳಿಗೆ ಹೃದಯಪೂರ್ವಕ ನಮನಗಳು ತಿಳಿಸುತ್ತೇನೆ ಎಂದರು.

ಗೌರವ ಸಾನಿಧ್ಯವನ್ನು ವಹಿಸಿದ ಶ್ರೀ ಮ.ನಿ.ಪ್ರ. ಪ್ರಭು ಮಹಾಸ್ವಾಮಿಗಳು ಮಾತನಾಡಿ ಸೊಂಡೂರಿನಂತಹ ಸಾಂಸ್ಕೃತಿಕ ಚಟುವಟಿಕೆಯ ಸ್ಥಳದಲ್ಲಿ ಕನ್ನಡ ಭವನ ನಿರ್ಮಾಣ ಆಗುತ್ತಿರುವುದು ಅತ್ಯಂತ ಸಂತೋಷದಾಯಕ ಕೆಲಸಕೆಲಸವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ನಾಡೋಜ ಡಾ.ವಿ.ಟಿ ಕಾಳೆ, ನಿವೃತ್ತ ಉಪನ್ಯಾಸಕರಾದ ಬಿಆರ್ ಮಸೂತಿ ,ಸಿಎಂ ಶಿಗ್ಗಾವಿ ಮತ್ತು ಕೃಷ್ಣಾನಗರದ ಅಧ್ಯಕ್ಷರು ಹಾಗೂ ಪುರಸಭೆ ಅಧ್ಯಕ್ಷರು ಸೇರಿದಂತೆ ರಾಜಕೀಯ ಮುಖಂಡರು ಕನ್ನಡಾಭಿಮಾನಿಗಳು, ಕನ್ನಡ ಪರ ಸಂಘಟನೆಯ ಮುಖ್ಯಸ್ಥರು ಸೇರಿದಂತೆ ಹಲವಾರು ಜನ ಕನ್ನಡಾಭಿಮಾನಿಗಳು ಹಾಜರಿದ್ದರು.

ಬಿ ಆರ್ ಮಸೂತಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿಗಳಾದ ಡಾ.ತಿಪ್ಪೇರುದ್ರ ಸಂಡೂರು ಇವರು ವಂದಿಸಿದರು.

LEAVE A REPLY

Please enter your comment!
Please enter your name here